ಬೆಂಗಳೂರು: ರಾಜ್ಯ ಇಂದು ಕೂಡ ಕೊರೊನಾ ಆಘಾತಕ್ಕೆ ತತ್ತರಿಸಿ ಹೋಗಿದೆ. ಇಂದು ಮತ್ತೆ 210 ಹೊಸ ಕೊರೊನಾ ಪಾಸಿಟವ್ ಪ್ರಕರಣಗಳು ದಾಖಲಾಗಿವೆ. ಜತೆಗೆ ಇದೇ ಮೊದಲ ಬಾರಿಗೆ ಕೊರೊನಾ ಪೀಡಿತ ಸಾವಿನ ಸಂಖ್ಯೆ 10ರ ಗಡಿ ದಾಟಿದ್ದು, 12 ಮಂದಿ ಬಲಿಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 8 ಮಂದಿ ಮಹಾಮಾರಿ ಕೊರೊನಾಗೆ ಉಸಿರು ನಿಲ್ಲಿಸಿದ್ದಾರೆ. ಉಳಿದಂತೆ ಕೊಪ್ಪಳ, ಬೀದರ್, ಕಲಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರು ಬಲಿಯಾಗಿದ್ದಾರೆ.
210 ಕೊರೊನಾ ಪಾಸಿಟಿವ್ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ, 7944 ತಲುಪಿದ್ದರೆ, ಮೃತಪಟ್ಟವರ ಸಂಖ್ಯ 114ಕ್ಕೆ ಏರಿಕೆಯಾಗಿದೆ. ಇಂದು 179 ಮಂದಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ಮನೆಗಳಿಗೆ ಮರಳಿದ್ದಾರೆ. ಒಟ್ಟು ಡಿಶ್ಚಾರ್ಜ್ ಆದವರ ಸಂಖ್ಯೆ 4983 ಆಗಿದ್ದರೆ, 2843 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2843ರ ಪ್ರಕರಗಳ ಪೈಕಿ 73 ಮಂದಿಯನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.
ಇಂದು ವರದಿಯಾದ 210 ಸೋಂಕಿತರ ಪೈಕಿ 21 ಮಂದಿ ವಿದೇಶಗಳಿಂದ ಬಂದಿದ್ದರೆ, 58 ಮಂದಿ ಅನ್ಯ ರಾಜ್ಯಗಳಿಂದ ಬಂದವರಾಗಿದ್ದಾರೆ.
ಬಳ್ಳಾರಿ ಮೊದಲನೇ ಸ್ಥಾನಕ್ಕೆ ಜಿಗಿದಿದ್ದು, 48 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕಲಬುರಗಿ 48, ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರು ನಗರ 17, ಯಾದಗಿರಿ 8, ಮಂಡ್ಯ 7, ಬೀದರ್ 6, ಗದಗ 5 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ.
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ. ನಾವು ನಮ್ಮ...








