ಕೊಡಗಿನಲ್ಲಿ ಪೊಲೀಸರಿಂದ ಸ್ಟ್ರೀಟ್ ರೂಲ್ಸ್
ಕೊಡಗು : ಜನತಾ ಕಫ್ರ್ಯೂ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕೊರೊನಾ ಚೈನ್ ಲಿಂಕ್ ಗೆ ಬ್ರೇಕ್ ಹಾಕಲು ಇಂದಿನಿಂದ ಲಾಕ್ ಡೌನ್ ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿ ಸ್ಟ್ರೀಟ್ ರೂಲ್ಸ್ ಜಾರಿ ಮಾಡಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ರಸ್ತೆಗಿಳಿದ ಪೊಲೀಸರು ನಗರದಲ್ಲಿ ಅನಗತ್ಯವಾಗಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿ ಕೇಟ್ ಗಳನ್ನು ಹಾಕಿ ರಸ್ತೆ ಬಂದ್ ಮಾಡಿದರು.
ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ನಿಗದಿ ಪಡಿಸಿದ ಸ್ಥಳದಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟರು.
ವಾಹನ ದಟ್ಟಣೆ ಜನ ಸಂದಣಿಯನ್ನ ತಪ್ಪಿಸಲು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.