ಹೈಟಿಯಲ್ಲಿ ಪ್ರಬಲ ಭೂಕಂಪ : 2,248 ಮಂದಿ ಸಾವು Haiti saaksha tv
ಹೈಟಿ : ಇಸ್ಪೋನಿಯೋಲಾ ದ್ವೀಪದಲ್ಲಿರುವ ಹೈಟಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿ 20 ದಿನಗಳು ಕಳೆದರೂ ಈಗಲೂ ಸಾವು ನೋವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಭೂಕಂಪನದಿಂದಾಗಿ ಈವರೆಗೂ 2,248 ಮಂದಿ ಕೊನೆಯುಸಿರೆಳೆದಿದ್ದಾರೆ ಎಂದು ಹೈಟಿಯ ನಾಗರಿಕ ರಕ್ಷಣಾ ಏಜೆನ್ಸಿ ಮಾಹಿತಿ ನೀಡಿದೆ.
ಸದ್ಯ ಹೈಟಿಯಲ್ಲಿ ರಕ್ಷಣಾ ಕಾರ್ಯಗಳು ಮುಂದುವರೆದಿದ್ದು, 12,763 ಮಂದಿ ಭೂಕಂಪನದಿಂದ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೆ ಹೈಟಿ ದೇಶ ಭೂಕಂಪಗಳ ದೇಶವಾಗಿದೆ. ಈವರೆಗೆ ಅಲ್ಲಿ 900ಕ್ಕೂ ಹೆಚ್ಚು ಭೂಕಂಪಗಳು ದಾಖಲಾಗಿವೆ.
ಅವುಗಳಲ್ಲಿ 400ಕ್ಕೂ ಹೆಚ್ಚು ರಿಕ್ಟರ್ ಮಾಪಕದಲ್ಲಿ 3ಕ್ಕಿಂತ ಹೆಚ್ಚು ತೀವ್ರತೆ ಹೊಂದಿವೆ.