Strongest Currencies : ಅತ್ಯಂತ ಶಕ್ತಿಶಾಲಿ ಕರೆನ್ಸಿಗಳು – ಆ ದೇಶಗಳ ಕೆಲ ವಿಶೇಷತೆಗಳು..!
ಅತ್ಯಂತ ಶಕ್ತಿಶಾಲಿ ಹೆಚ್ಚಿನ ಮೌಲ್ಯ ಹೊಂದಿರುವ ಕರೆನ್ಸಿಗಳು – ಆ ದೇಶಗಳ ಕೆಲ ವಿಶೇಷತೆಗಳು..!
ಆದ್ರೆ ಪ್ರತಿ ದಿನ ಅರ್ಥವ್ಯವಸ್ಥೆಯಲ್ಲಿ ರೂಪಾಯಿ ಹಾಗೂ ಇತರೇ ಕರೆನ್ಸಿಗಳ ಮೌಲ್ಯ ಏರುಪೇರಾಗ್ತಲೇ ಇರುತ್ತವೆ.
ಕುವೈತಿ ಡಿನಾರ್ – ಕುವೈತ್
1 ಕುವೈತಿ ಡಿನಾರ್ ಭಾರತದ 240-250 ರೂಪಾಯಿಗೆ ಸಮ
ಮೊದಲಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯ ಲಿಸ್ಟ್ ನಲ್ಲಿ ಮೊದಲನೆಯ ಸ್ಥಾನದಲ್ಲಿರೋದು ಕುವೈತಿ ಡಿನಾರ್. ಈ ದೇಶ ಇಡೀ ವಿಶಕ್ಕೆ ತೈಲ ರಫ್ತು ಮಾಡುವ ಟಾಪ್ ದೇಶ. ಈ ದೇಶದ ಆರ್ಥಿಕತೆಯ ಮುಖ್ಯ ಮೂಲವೂ ಕೂಡ ತೈಲ ರಫ್ತು. ಅಂದ್ರೆ ಸುಮಾರು 88 % ಇನ್ ಕಮ್ ಕೇವಲ ತೈಲ ರಫ್ತಿನಿಂದಲೇ ದೇಶದ ಬೊಕ್ಕಸಕ್ಕೆ ಸೇರುತ್ತೆ. ಅಷ್ಟೇ ಅಲ್ಲ ಈ ದೇಶ ಇಡೀ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು.
ಬಹರೀನ್ ಡಿನಾರ್ – ಬಹರೀನ್
1 ಬಹರೀನ್ ಡಿನಾರ್ ಭಾರತದ ಸುಮಾರು 205 ರೂಪಾಯಿಗೆ ಸಮ
ಬಹರೀನ್ ರಾಷ್ಟ್ರದ ರಾಜಧಾನಿ ಮನಾಮಾ. ಈ ದೇಶದಲ್ಲಿ ಐಲ್ಯಾಂಡ್ಸ್ ತುಂಬಾನೆ ಫೇಮಸ್. ಈ ದೇಶದ ಮುಖ್ಯ ಆರ್ಥಿಕ ಮೂಲದ ಬಗ್ಗೆ ಮಾತನಾಡೋದಾದ್ರೆ , ಈ ದೇಶ ಬ್ಲಾಕ್ ಗೋಲ್ಡ್ ಅಂದ್ರೆ ಕಪ್ಪು ಬಂಗಾರವನ್ನ ರಫ್ತು ಮಾಡುವ ನಂ. 1 ರಾಷ್ಟ್ರ.
ಒಮಾನಿ ರಿಯಲ್ – ಒಮನ್
1 ಒಮಾನಿ ರಿಯಲ್ ಭಾರತದ 190-200 ರೂಪಾಯಿಗೆ ಸಮ
ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿ ಬರುತ್ತೆ ಈ ಒಮನ್ ರಾಷ್ಟ್ರ. ಈ ದೇಶ ಸ್ವೀಟ್ಸ್ ಚಾಕಲೇಟ್ಸ್ , ಒಮಾನಿ ಬ್ರೆಡ್ಸ್ ಗೆ ಸಿಕ್ಕಾಪಟ್ಟೆ ಪ್ರಸಿದ್ಧಿ ಹೊಂದಿದೆ.
ಜಾರ್ಡನ್ ಡಿನಾರ್ – ಅರಬ್
1 ಜಾರ್ಡನ್ ಡಿನಾರ್ ಭಾರತದ ಸುಮಾರು 107 ರೂಪಾಯಿಗೆ ಸಮ
ಪಶ್ಚಿಮ ಏಶ್ಯಾದಲ್ಲಿನ ಈ ಅರಬ್ ರಾಷ್ಟ್ರ ಬಹುತೇಕ ಮರಳುಭೂಮಿಯಿಂದಲೇ ಕೂಡಿದೆ. ಈ ದೇಶದ ಕರೆನ್ಸಿ ಮೌಲ್ಯ ಅತ್ಯಂತ ಶಕ್ತಿಶಾಲಿ ಕರೆನ್ಸಿಗಳಲ್ಲಿ ಒಂದು.
ಬ್ರಿಟೀಸ್ ಫೌಂಡ್ ಸ್ಟರ್ಲಿಂಗ್
ಬ್ರಿಟೀಶ್ ಟೆರಿಟರಿಯ ಯುನೈಟೆಡ್ ಕಿಂಗ್ ಡಮ್, ಜಾರ್ಜಿಯಾ ಹೀಗೆ ಅನೇಕ ರಾಷ್ಟ್ರಗಳು ಈ ಕರೆನ್ಸಿಯನ್ನ ಬಳಸುತ್ತವೆ.
1 ಬ್ರಿಟೀಶ್ ಫೌಂಡ್ ಸ್ಟರ್ಲಿಂಗ್ ಭಾರತದ ಸುಮಾರು 95 ರೂಪಾಯಿಗೆ ಸಮ
ಕೆಮ್ಯಾನ್ ಐಲೆಂಡ್ಸ್ ಡಾಲರ್ – ಕೆಮ್ಯಾನ್ಸ್ ಐಲ್ಯಾಂಡ್ ನ ಕರೆನ್ಸಿ
1 ಕೆಮ್ಯಾನ್ ಐಲ್ಯಾಂಡ್ ಡಾಲರ್ ಭಾರತದ ಸುಮಾರು 92 ರೂಪಾಯಿಗೆ ಸಮ
ಈ ಐಲ್ಯಾಂಡ್ ತನ್ನ ಸಮುದ್ರ , ಸುಂದರ ದೃಷ್ಯ, ಪ್ರವಾಸ, ಸ್ಕೂಬಾ ಡೈವಿಂಗ್ ವಿಚಾರಕ್ಕೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ.
ಯುರೋಪಿಯನ್ ಯುರೋ -ಯೂರೋಪ್ ನ ಕರೆನ್ಸಿ
1 ಯುರೋ ಭಾರತದ ಸುಮಾರು 83 ರೂಪಾಯಿಗೆ ಸಮ
ಈ ಕರೆನ್ಸ್ ಇಷ್ಟು ಶಕ್ತಿಶಾಲಿಯಾಗಿರೋದಕ್ಕೆ ಕಾರಣವೂ ಇದೆ. ಈ ಯೂರೋಪ್ ಖಂಡದ ಎಲ್ಲಾ ರಾಷ್ಟ್ರಗಳು ಒಂದೇ ಮುದ್ರಣದ ಕರೆನ್ಸ್ ಬಳಸುತ್ತಾರೆ. ಹೀಗಾಗಿ ಇದು ವಿಶ್ವದ ಅತಿ ಹೆಚ್ಚು ಮೌಲ್ಯದ ಕರೆನ್ಸಿಗಳ ಲಿಸ್ಟ್ ನಲ್ಲಿ ಅಗ್ರ ಸ್ಥಾನದಲ್ಲಿ ಬರುತ್ತೆ.
ಸ್ವಿಸ್ ಪ್ರಾಂಕ್ – ಸ್ವಿಡ್ಜರ್ ಲ್ಯಾಂಡ್ ನ ಕರೆನ್ಸಿ
1 ಸ್ವಿಸ್ ಪ್ರಾಂಕ್ ಭಾರತದ ಸುಮಾರು 80 ರೂಪಾಯಿಗೆ ಸಮ
ಸ್ವಿಡ್ಜರ್ ಲ್ಯಾಂಡ್ ನ ರಾಜದಾನಿ ಬರ್ನ್ ಸಿಟಿ. ಸ್ವಿಡ್ಜರ್ ಲ್ಯಾಂಡ್ ಹೆಚ್ಚು ಚಾಕಲೇಟ್ಸ್ , ಗಡಿಯಾರ, ಇನ್ನೂ ಸ್ವಿಸ್ ಬ್ಯಾಂಕ್ ನಿಂದ ಇಡೀ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಫೇಮಸ್.
US ಡಾಲರ್ – ಅಮೆರಿಕಾದ ಡಾಲರ್ …
1 ಅಮೆರಿಕನ್ ಡಾಲರ್ ಬಾರತದ 79 ರೂಪಾಯಿಗೆ ಸಮ
ನಿಮಗೆಲ್ರಿಗೂ ಗೊತ್ತೇ ಇರಬಹದು ಅಮೆರಿಕನ್ ಡಾಲರ್ ಇಡೀ ವಿಶ್ವದ ಅನೇಕ ದೇಶಗಳ ಕರೆನ್ಸೆಗಳ ಮೌಲ್ಯವನ್ನ ಲೆಕ್ಕ ಹಾಕಲಿಕ್ಕೆ ಬಳಕೆ ಮಾಡಲಾಗುತ್ತೆ. ಇಡೀ ವಿಶ್ವಾದ್ಯಂತ ಹೆಚ್ಚಾಗಿ ಸ್ವೀಕರಿಸಲಾಗುವ, ಪ್ರಚಲಿತದಲ್ಲಿರುವ ಕರೆನ್ಸಿ ಕೂಡ ಅಮೆರಿಕನ್ ಡಾಲರ್ ಆಗಿದೆ. ಇನ್ನೂ ಅಮೆರಿಕಾ ಅಭಿವೃದ್ಧಿ ಹೊಂದಿದ ರಾಷ್ಟ್ರದ ಹೆಗ್ಗಳಿಕೆ ಜೊತೆಗೆ ಅನೇಕ ವಿಚಾರಗಳಿಗೆ ಫೇಮಸ್. ಹಾಲಿವುಡ್ , ಮ್ಯೂಸಿಕ್, ಶಿಕ್ಷಣ ಇನ್ನೂ ಹಲವು ವಿಚಾರದಲ್ಲಿ ಅಮೆರಿಕಾ ವಿಶ್ವದ ದೊಡ್ಡಣ್ನ.
ಕೆನೆಡಿಯನ್ ಡಾಲರ್ – ಕೆನಡಾ ದೇಶದ ಡಾಲರ್.
1 ಕೆನಡಾ ಡಾಲರ್ ಭಾರತದ 55 ರೂಪಾಯಿಗೆ ಸಮ.
ಅಂದ್ಹಾಗೆ ಈ ದೇಶದ ರಾಜದಾನಿ ಒಟಾವೋ. ಈ ದೇಶ ಅತ್ಯಂತ ಮುಂದುವರೆದ ರಾಷ್ಟ್ರ. ಆಧುನಿಕತೆ, ಶಿಕ್ಷಣ ಕ್ಷೇತ್ರ ಎಲ್ಲದರಲ್ಲೂ ಹೈಲೀ ಅಡ್ವಾನ್ಸಡ್ ದೇಶ. ಈ ದೇಶ ಅನೇಕ ವಿಚಾರಗಳಿಗೆ ತುಂಬಾನೆ ಪೇಮಸ್.