RRR ಸಿನಿಮಾ ರಿಲೀಸ್ ಆಗದಂತೆ ಮನವಿ ಮಾಡಿ ಹೈ ಕೋರ್ಟ್ ಮೊರೆ ಹೋದ ವಿದ್ಯಾರ್ಥಿನಿ
ಹೈದರಾಬಾದ್ : ಪ್ರಸ್ತುತ ದೇಶದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾವಾ ರಾಜಮೌಳಿ ನಿರ್ದೇಶನದ ‘RRR’.. ಈ ಸಿನಿಮಾ ಜನವರಿ 7 ಕ್ಕೆ ಇಂದ್ರೆ ಇವತ್ತು ವಿಶ್ವಾದ್ಯಂತ ರಿಲೀಸ್ ಆಗಿ ಧೂಳೆಬ್ಬಿಸಬೇಕಿತ್ತು.. ಈ ಸಿನಿಮಾ ರಿಲೀಸ್ ಆಗಿ ಅಬ್ಬರಿಸಲು ರೆಡಿಯಾಗಿತ್ತು.. ಟ್ರೇಲರ್ ಜೊತೆಗೆ ಹಾಡುಗಳನ್ನೂ ರಿಲೀಸ್ ಮಾಡಿ , ಬೆಂಗಳೂರು , ಮುಂಬೈ , ಕೇರಳ , ಚೆನ್ನೈ ಗೂ ಹೋಗಿ ಭರ್ಜರಿ ಪ್ರಚಾರ ಮಾಡಿ ಆಗಲೇ ಪ್ರೀ ರಿಲೀಸ್ ಈವೆಂಟ್ ನೂ ಕೂಡ ನಡೆಸಿತ್ತು..
ಆದ್ರೆ ಕೋವಿಡ್ ಹೆಚ್ಚಾದ ಹಿನ್ನೆಲೆ ಹಲವೆಡೆ ಥಿಯೇರ್ ಗಳು ಬಂದ , ಇನ್ನೂ ಹಲೆವೆಡೆ ಥಿಯೇಟರ್ ಗಳಲ್ಲಿ ಕೇವಲ 50 % ಸೀಟಿಂಗ್ ಇದೆ, ನೈಟ್ ಕರ್ಫ್ಯೂ , ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು , ಲಾಕ್ಡೌನ್ ಆದ್ರೂ ಆಗುವ ಮುನ್ಸೂಚನೆ ಇರೋದ್ರಿಂದ , ಎವೆಲ್ಲವನ್ನೂ ಯೋಚಿಸಿ ಸಿನಿಮಾ ರಿಲೀಸ್ ಡೇಟ್ ಮುಂದೂಡಿದೆ ಸಿನಿಮಾ ತಂಡ.. ದಿ್ರಿಂದಾಗಿ ಸಿನಿಮಾಗಾಗಿ ಕಾಯ್ತಿದ್ದ ಸಿನಿಪ್ರಿಯರು ನಿರಾಸೆಗೊಂಡಿದ್ದಾರೆ..
ಆದ್ರೆ ಈಗ ಈ ಸಿನಿಮಾ ರಿಲೀಸ್ ಆಗಲೇಬಾರದು ಎಂದು ವಿದ್ಯಾರ್ಥಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.. ಆಂಧ್ರಪ್ರದೇಶದ ವಿದ್ಯಾರ್ಥಿನಿ ಅಲ್ಲೂರಿ ಸೌಮ್ಯ ಎಂಬಾಕೆ ತೆಲಗಾಣ ಹೈಕೋರ್ಟ್‍ನಲ್ಲಿ RRR ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.ಈ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಂ ಭೀಮ್ ಪಾತ್ರ ಬರುತ್ತದೆ. ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ. ಹಾಗಾಗಿ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು. ಅಷ್ಟೇ ಅಲ್ಲದೇ RRR ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಅಂದ್ಹಾಗೆ ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಮತ್ತು ಜ್ಯೂನಿಯರ್ NTR ಕೊಮ್ಮರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ.. ಆಲಿಯಾ ಭಟ್ , ಅಜಯ್ ದೇವಗನ್ , ಶ್ರೀಯಾ ಸೇರಿದಂತೆ ಹಲವರ ತಾರಾಬಳಗವಿದೆ..