Belagavi: ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಮರಾಠಿ ಪುಂಡರ ಹಲ್ಲೆ…
ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಟರ್ ಕಾಲೇಜ್ ಫೆಸ್ಟ್ ವೇಳೆ ಕನ್ನಡ ಬಾವುಟ ಹಿಡಿದು ಡಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಕೆಲ ಮರಾಠಿ ಭಾಷಿಕ ವಿದ್ಯಾರ್ಥಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಭಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದಾಗ ಕೆಲ ವಿದ್ಯಾರ್ಥಿಗಳು ಏಕಾಏಕಿ ಹಲ್ಲೆ ಮಾಡಿದ್ದು, ಕಾಲೇಜು ಸಿಬ್ಬಂದಿಗಳು ನಂತರ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆ ವಿಡಿಯೋ ವೈರಲ್ ಆದ ನಂತರ ಠಿಲಕವಾಡಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
A 2nd PUC student beaten up for holding #Karnataka flag at Gogte college #Belagavi during inter college fest yesterday. He was beaten up by his classmates for holding the flag. Cops inform the students support #Maharashtra. Hence, they were upset. Cops are inquiring the matter. pic.twitter.com/DLm6YacbFf
— Imran Khan (@KeypadGuerilla) December 1, 2022
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ವಿಚಾರಣೆಗೆ ಬರುತ್ತಿರುವ ಸಮಯದಲ್ಲಿ ಕೆಲ ಮರಾಠಿ ಭಾಷಿಕರು ಮತ್ತು MES ಪುಂಡರು ಗಲಭೆ ಮತ್ತು ಹಿಂಸಾಚಾರಕ್ಕೆ ಮುಂದಾಗಿದ್ದಾರೆ.
Student thrashed for holding Karnataka flag during college fest in Belagavi