ಶಿಕ್ಷಕಿ ಮೇಲೆ ಕೋಪಗೊಂಡ ವಿದ್ಯಾರ್ಥಿಗಳು ಶಿಕ್ಷಕಿಯ ಕುರ್ಚಿಯ ಕೆಳಗಡೆ ಬಾಂಬ್ ಇಟ್ಟು ಸ್ಫೋಟಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ. ಹರಿಯಾಣದಲ್ಲಿ ವಿಜ್ಞಾನ ಶಿಕ್ಷಕಿ ವಿದ್ಯಾರ್ಥಿಗಳನ್ನು ಬೈದ ಹಿನ್ನೆಲೆಯಲ್ಲಿ, ಕೋಪಗೊಂಡ 12ನೇ ತರಗತಿ ವಿದ್ಯಾರ್ಥಿಗಳು YouTube ನೋಡಿ ಸಣ್ಣ ಬಾಂಬ್ ತಯಾರಿಸಿದರು. ಆ ಬಾಂಬ್ನ್ನು ಶಿಕ್ಷಕಿಯ ಕುರ್ಚಿ ಕೆಳಗೆ ಇಟ್ಟು, ರಿಮೋಟ್ ಮೂಲಕ ಸ್ಫೋಟಿಸಿದರು. ಅದೃಷ್ಟವಶಾತ್, ಶಿಕ್ಷಕಿಗೆ ಯಾವುದೇ ಗಾಯಗಳಾಗಿಲ್ಲ. ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದರೂ, ಶಿಕ್ಷಕಿ ಕ್ಷಮಿಸಿದ ಕಾರಣ ಅಮಾನತನ್ನು ವಾಪಸ್ ಪಡೆಯಲಾಯಿತು.
ಈ ಘಟನೆ ಶಾಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವು ಪೋಷಕರು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಶಾಲಾ ಆಡಳಿತವು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದೆ.
ಈ ಘಟನೆಯಲ್ಲಿ ತರಗತಿಯಲ್ಲಿ ಇದ್ದ 15 ವಿದ್ಯಾರ್ಥಿಗಳಲ್ಲಿ 13 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಎಲ್ಲಾ ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಲಾಗಿತ್ತು. ಆದರೆ ಶಿಕ್ಷಕಿ, ವಿದ್ಯಾರ್ಥಿಗಳನ್ನು ಕ್ಷಮಿಸಿದ್ದು, ಅವರಿಗೆ ಹೊಸದಾಗಿ ಚಾನ್ಸ್ ಕೊಡಲು ನಿರ್ಧರಿಸಿದ್ದಾರೆ. ಈ ಘಟನೆಯಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಕೃತ್ಯಗಳ ಪರಿಣಾಮಗಳ ಅರಿವು ಮೂಡಿಸುವ ಉದ್ದೇಶದಿಂದ ಪ್ರತ್ಯೇಕ ಅಧ್ಯಾತ್ಮ ಮತ್ತು ನೈತಿಕ ಶಿಕ್ಷಣದ ತರಗತಿಗಳನ್ನು ಪ್ರಾರಂಭಿಸಲು ಶಾಲೆಯು ಯೋಚಿಸಿದೆ.