Sudeep : ಕಿಚ್ಚನ ಮುಂದಿನ ಸಿನಿಮಾಗೆ ಹೊಸ ನಿರ್ದೇಶಕರಿಂದ ಆಕ್ಷನ್ ಕಟ್..!!
ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ನಂತರ ಯಾವ ಸಿನಿಮಾದಲ್ಲಿ ಮಾಡ್ತಾರೆ ಅನ್ನೋ ಕುತೂಹಲಗಳಿಗೆ ಇತ್ತೀಚೆಗೆ ಸಿಕ್ಕ ಉತ್ತರ ‘ಬಿಲ್ಲಾ, ರಂಗ , ಭಾಷಾ’.. ಆದ್ರೆ ಅಧಿಕೃತವಾಗಿಲ್ಲ…
ಈ ಸಿನಿಮಾದಲ್ಲಿ ಮತ್ತೆ ವಿಕ್ರಾಂತ್ ಜೋಡಿ ಒಂದಾಗಲಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನ , ಕಿಚ್ಚ ನಟನೆ ಸಿನಿಮಾಗಾಗಿ ಫ್ಯಾನ್ಸ್ ಎಕ್ಸೈಟೆಡ್ ಆಗಿರುವ ಹೊತ್ತಲ್ಲೇ ಇದೀಗ ಕಿಚ್ಚ ಸುದೀಪ್ ಗೆ ಹೊಸ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ ಎಂಬ ಸುದ್ದಿ ಭಾರೀ ಸೌಂಡ್ ಮಾಡ್ತಿದೆ..
ವಿಕ್ರಾಂತ್ ರೋಣ ಬಿಡುಗಡೆಯಾಗಿ ಏಳು ತಿಂಗಳಾದರೂ ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರಕ್ಕೆ ಸಹಿ ಹಾಕಿಲ್ಲ. ರಿಯಾಲಿಟಿ ಶೋ, ಬಿಗ್ ಬಾಸ್ನಲ್ಲಿ ಸುದೀಪ್ ನಿರತರಾಗಿದ್ದಾರೆ, ಇದರ ಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ವಿಕ್ರಾಂತ್ ರೋಣ ಬಿಡುಗಡೆಯಾಗಿ ಏಳು ತಿಂಗಳಾದರೂ ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರಕ್ಕೆ ಸಹಿ ಹಾಕಿಲ್ಲ.
ಸದ್ಯ ಕಿಚ್ಚ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಬ್ಯುಸಿಯಾಗಿದ್ದಾರೆ ಏಪ್ರಿಲ್ ನಿಂದ ಮುಂದಿನ ಸಿನಿಮಾ ಕೆಲಸ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಬಾಲಿ ನಿರ್ಮಾಪಕ ಕಲೈಪುಲಿ ಎಸ್ ಥಾನು ಅವರೊಂದಿಗೆ ಸುದೀಪ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿವೆ.
ಅಂದ್ಹಾಗೆ ಸುದೀಪ್ ಚೊಚ್ಚಲ ನಿರ್ದೇಶಕ ವಿಜಯ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತ್ರವು ಕನ್ನಡ-ತಮಿಳಿನಲ್ಲಿ ಏಕಕಾಲದಲ್ಲಿ ತಯಾರಾಗಲಿದೆ ಎನ್ನಲಾಗಿದ್ದು , ಅಧಿಕೃತ ಮಾಹಿತಿ ಶೀಘ್ರವೇ ಸಿಗಲಿದೆ..
ಸದ್ಯಕ್ಕೆ ಕಿಚ್ಚ ಸುದೀಪ್ ಉಪೇಂದ್ರ ಅವರು ಒಟ್ಟಾಗಿ ನಟಿಸಿರುವ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಮಾರ್ಚ್ 17 ರಂದು ದೊಡ್ಡ ಮಟ್ಟದಲ್ಲೇ ಥಿಯೇಟರ್ ಗಳಲ್ಲಿ ಬರಲಿದೆ..
Sudeep : Action cut by new director for Kichchan’s next movie..!!