Sudeep
8 ಸರ್ಕಾರಿ ಶಾಲೆ ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..!
ಸ್ಯಾಂಡಲ್ ವುಡ್ ಸ್ಟಾರ್ ಗಳು ಅನೇಕ ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಾ ಆಗಾಗ ಜನರ ಮೆಚ್ಚುಗೆಗೆ ಪಾತ್ರಾರಗುತ್ತಿರುತ್ತಾರೆ. ಅದ್ರಲ್ಲೂ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವವರು ಬಡಬಬಗ್ಗರಿಗೆ ಸಹಾಯ ಮಾಡುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಸಮಾಜ ಸೇವಾ ಕಾರ್ಯವನ್ನು ಮುಂದುವರೆಸಿದ್ದಾರೆ. ಕೊರೊನಾ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದ ಸುದೀಪ್ ಅವರು ಇದೀಗ ಮಹತ್ವದ ಕಾರ್ಯವೊಂದಕ್ಕೆ ಕೈ ಜೋಡಿಸಿದ್ದಾರೆ.
ಅದೇನೆಂದರೆ ಸುದೀಪ್ ಅವರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ಹೌದು ಸುದೀಪ್ ಅವರು ಒಟ್ಟು ಎಂಟು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು, ಅವುಗಳ ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟ ಸುಧಾರಣೆಗೆ ನೆರವಾಗಲಿದ್ದಾರೆ. ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ 20 ಸಾವಿರ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿಸುವ ಗುರಿಯನ್ನು ಹೊಂದಲಾಗಿದೆ. ಶಾಲೆಗಳಿಗೆ ಹೈಟೆಕ್ ಶೌಚಾಲಯ, ಗ್ರಂಥಾಲಯ, ಹೈಟೆಕ್ ತರಗತಿಗಳು ಇನ್ನೂ ಹಲವು ಸೌಲಭ್ಯಗಳನ್ನು ದತ್ತು ಪಡೆದವರು ಒದಗಿಸಲಿದ್ದಾರೆ.
ಆಕ್ಟ್-1978 ಸಿನಿಮಾ ವೀಕ್ಷಿಸಿದ ಪೊಲೀಸ್ ಕಮೀಷನರ್ ಕಚೇರಿ ಸಿಬ್ಬಂದಿ
ಅಂದ್ಹಾಗೆ ಇಂತಹ ಮಹತ್ವದ ಕಾರ್ಯದಲ್ಲಿ ಕೇವಲ ಸುದೀಪ್ ಅವರು ಅಷ್ಟೇ ಅಲ್ಲ ಅನೇಕ ರಾಜಕೀಯ ಮುಖಂಡರು ಸಹ ಕೈ ಜೋಡಿಸಿದ್ದಾರೆ. ಹೌದು ಸಿಎಂ ಬಿ ಎಸ್ ಯಡಿಯೂರಪ್ಪನವರು 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಡಿಸಿಎಂ ಅಶ್ವತ್ಥನಾರಾಯಣ್ ಅವರು 8 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರು ಸಹ 8 ಶಾಲೆಗಳನ್ನ ದತ್ತು ತೆಗೆದುಕೊಂಡಿದ್ದಾರೆ.
ಬಾಲಿವುಡ್ ಡ್ರಗ್ಸ್ ಕೇಸ್: ಕಾಮಿಡಿಯನ್ ಭಾರತಿ ಮತ್ತು ಪತಿಗೆ ತಾತ್ಕಾಲಿಕ ರಿಲೀಫ್..!
ಅಂಬರೀಶ್ ಮಗನಾಗಿ ಹುಟ್ಟಲು ಪುಣ್ಯ ಮಾಡಿದ್ದೆ: ಅಭಿಷೇಕ್
Sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel