‘ಫ್ಯಾಂಟಮ್’ ನ ಹಾಡಿನಲ್ಲಿ ಸುದೀಪ್ ಜೊತೆ ‘ಗಜರಾಜ’..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಈಗಾಗಲೇ ಕೊನೆಯ ಹಂತ ತಲುಪಿದೆ. ಬ್ಯುಸಿಯಾಗಿದ್ದಾರೆ. ಫ್ಯಾಂಟಮ್ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು, ಸದ್ಯ ಕೇರಳದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ಶೂಟಿಂಗ್ ಮುಗಿಸಿರುವ ಸಿನಿತಂಡ ಡಿಸೆಂಬರ್ 9 ರಿಂದ ಕೇರಳದಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದೆ.
ಹಾಲಿವುಡ್ ನ ‘ದಿ ಗ್ರೇ ಮ್ಯಾನ್ ‘ ನಲ್ಲಿ ‘ಇಂಡಿಯಾದ ಬ್ರೂಸ್ ಲೀ’..!
ಶೂಟಿಂಗ್ ಆರಂಭವಾದಾಗಲೇ ಕಿಚ್ಚ ಸುದೀಪ್ ಅವರು ಶೂಟಿಂಗ್ ಸ್ಪಾಟ್ ನಿಂದ ಫೋಟೋ ಶೇರ್ ಮಾಡಿಕೊಂಡಿದ್ದರು. ಸಿನಿಮಾದ ಬಗ್ಗೆ ಕುತೂಹಲವೂ ಹೆಚ್ಚಾಗಿದೆ. ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿ ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದ ಸುದೀಪ್ ಅವರು ‘ಫ್ಯಾಂಟಮ್ ಕೊನೆಯ ಹಂತದ ಶೂಟಿಂಗ್ ಆರಂಭ. ಶೂಟಿಂಗ್ ಸೆಟ್ ಮತ್ತು ಲೊಕೇಶನ್ ನನಗೆ ತುಂಬಾ ಇಷ್ಟ ಆಯ್ತು”ಎಂದು ಬರೆದುಕೊಂಡಿದ್ದರು.
ಇದೀಗ ಶೂಟಿಂಗ್ ಸ್ಪಾಟ್ ನಿಂದ ಡ್ಯಾನ್ಸ್ ಮಾಸ್ಟರ್ ಜಾನಿ ಅವರು ಅವರು ವಿಡಿಯೋ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು ಕೇರಳದ ಪ್ರಸಿದ್ಧ ರಘುರಾಮ್ ಎನ್ನುವ ಆನೆ ಈ ಸಿನಿಮಾದ ಹಾಡಿನನಲ್ಲಿ ನಟಿಸುತ್ತಿದೆ ಎನ್ನಲಾಗ್ತಿದೆ.
ಮತ್ತೊಮ್ಮೆ ಟ್ರಿಪ್ ಹೊರಟ ಡಿ- ಬಾಸ್ ಅಂಡ್ ಟೀಮ್ : ಈ ಬಾರಿ ಎಲ್ಲಿಗೆ ಪಯಣ!
ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಒಟ್ಟು 5 ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಗಜರಾಜ ಕಾಣಿಸಿಕೊಂಡಿರೋದು… ಚಿತ್ರದ ಹಾಡಿನಲ್ಲಿ 40 ವರ್ಷದ ರಘುರಾಮ್ ಎಂಬ ಆನೆ ಕಾಣಿಸಿಕೊಳ್ತಾಯಿದೆ. ಈ ಸುದ್ದಿ ಸಿನಿಪ್ರಿಯರನ್ನ ಮತ್ತಷ್ಟು ಕಾತರತೆಗೆ ಈಡು ಮಾಡಿದೆ. ಈ ಹಾಡಿನಲ್ಲಿ ಕಿಚ್ಚ ಹಾಗೂ ‘ರಘುರಾಮ್’ ಕಾಂಬಿನೇಷನ್ ಇರಲಿದ್ದು, ಕಿಚ್ಚನ ಫ್ಯಾನ್ಸ್ ಅಂತು ಫುಲ್ ಖುಷ್ ಆಗಿದ್ದಾರೆ. ಅಂದ್ಹಾಗೆ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರು ಸುಂದರ ತಾಣದಲ್ಲಿ ಚಿತ್ರೀಕರಣ ಹಾಗೂ ಆನೆಯ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








