ಹಾಲಿವುಡ್ ನ ‘ದಿ ಗ್ರೇ ಮ್ಯಾನ್ ‘ ನಲ್ಲಿ ‘ಇಂಡಿಯಾದ ಬ್ರೂಸ್ ಲೀ’..!
ದಕ್ಷಿಣ ಭಾರತದ ಸ್ಟಾರ್ ನಟ ಧನುಷ್ ಇದೀಗ ಹಾಲಿವುಡ್ ಸಿನಿಮಾದಲ್ಲಿ ಮಿಂಚಲೂ ರೆಡಿಯಾಗ್ತಿದ್ದಾರೆ. ಈ ಸುದ್ದಿ ಗೊತ್ತಾಗ್ತಿದ್ದಂತೆ ಧನುಷ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹೌದು ದೊಡ್ಡ ಫ್ರಾಜೆಕ್ಟ್ ನಲ್ಲಿ ನಟಿಸುತ್ತಿದ್ದಾರೆ ಧನುಷ್. ಈ ಮೂಲಕ ಬಾಲಿವುಡ್ಡಿಗರೇ ಹೌಹಾರುವಂತೆ ಮಾಡಿದ್ದಾರೆ.
ತಮಿಳಿನ ಖ್ಯಾತ ನಟ ಧನುಷ್ ಇದೀಗ ಹಾಲಿವುಡ್ ಗೆ ಹಾರುತ್ತಿದ್ದಾರೆ. ಇನ್ನೂ ದೊಡ್ಡ ನ್ಯೂಸ್ ಅಂದ್ರೆ ವಿಶ್ವಮಟ್ಟದಲ್ಲಿ ಸದ್ದು ಮಾಡಿರೋ ಅವೇಂಜರ್ಸ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕರ ಸಿನಿಮಾದಲ್ಲಿ ಇದೀಗ ಪ್ರಮುಖ ಪಾತ್ರದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾರೆ.
ಗರುಡ ಪುರಾಣದ ಪ್ರಕಾರ ನರಕದಲ್ಲಿ ವಿಧಿಸೋ ಭಯಂಕರ ಶಿಕ್ಷೆಗಳಿವು..!
ಅಂಟೋನಿ ರೊಸ್ಸೊ ಸೂಪರ್ ಹಿಟ್ ಸಿನಿಮಾಗಳಾದ ಅವೇಂಜರ್ಸ್ ಇನ್ ಫಿನಿಟಿ ವಾರ್, ಕ್ಯಾಪ್ಟನ್ ಅಮೆರಿಕಾ – ಸಿವಿಲ್ ವಾರ್, ಕ್ಯಾಪ್ಟನ್ ಅಮೆರಿಕಾ – ವಿಂಟರ್ ಸೋಲ್ಜರ್ ನಂತಹ ವಿಶ್ವ ವಿಖ್ಯಾತ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ. ಇದೀಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಥ್ರಿಲ್ಲರ್ ಸಿನಿಮಾ “ದಿ ಗ್ರೇ ಮ್ಯಾನ್” ನಲ್ಲಿ ನಟ ಧನುಷ್ ಕಾಣಿಸಿಕೊಳ್ತಾಯಿದ್ದಾರೆ. ಇನ್ನೂ ಇದು ಸಹ ಫ್ಯಾಮಟಸಿ ಥ್ರಿಲ್ಲರ್ ಸಿನಿಮಾವಾಗಿರಬಹುದೆಂದೇ ಅಂದಾಜಿಸಲಾಗ್ತಿದ್ದ ಭಾರತೀಯ ಸಿನಿಮಾಪ್ರಿಯರು ಥ್ರಿಲ್ ಆಗಿದ್ದಾರೆ.
ಇನ್ನೂ ಈ ಸಿನಿಮಾದಲ್ಲಿ, ಕ್ಯಾಪ್ಟನ್ ಅಮೆರಿಕಾ ಖ್ಯಾತಿಯ ಸೂಪರ್ ಹೀರೊ ನಟ ಕ್ರಿಸ್ ಇವಾನ್ಸ್ ಹಾಗೂ ಲಾಲಾ ಲ್ಯಾಂಡ್ ಖ್ಯಾತಿಯ ರ್ಯಾನ್ ಗೋಸ್ಲಿಂಗ್ ಸಹ ಅಭಿನಯಿಸಲಿದ್ದಾರೆ ಎನ್ನಲಾಗ್ತಿದೆ. ಇದೀಗ್ ಹಾಲಿವುಡ್ ನ ಬಿಗ್ ಸ್ಟಾರ್ ಗಳ ಜೊತೆಗೆ ಸೌತ್ ಸೂಪರ್ ಸ್ಟಾರ್ ತೆರೆಹಂಚಿಕೊಳ್ಳುತ್ತಿರೋದು ಬಾಲಿವುಡ್ಡಿಗರು ಕಣ್ಣು ಕುಕ್ಕುವಂತೆ ಮಾಡಿದೆ.
ಅಂದ್ಹಾಗೆ ಇದೊಂದು ಕಾದಂಬರಿ ಆಧರಿತ ಸಿನಿಮಾವಾಗಿದ್ದು, ಕಾದಂಬರಿ ಹೆಸರು ಕೂಡ ದಿ ಗ್ರೇ ಮ್ಯಾನ್ ಆಗಿದೆ. ಈ ಕಾದಂಬರಿಯ ಮಾರ್ಕ್ ಗ್ರೀನೆ ಅವರ ರಚನೆಯಾಗಿದೆ. ಈ ಕಥೆ ಆಧರಿಸಿ ರುಸ್ಸೋ ಬ್ರದರ್ಸ್ ಸಿನಿಮಾ ಮಾಡ್ತಾಯಿದ್ದು, ನೆಟ್‌ಫ್ಲಿಕ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.. ಸಿನಿಮಾ ಸಹ ನೆಟ್‌ಫ್ಲಿಕ್ಸ್ ನಲ್ಲಿಯೇ ರಿಲೀಸ್ ಆಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel