ದೆಹಲಿ: ಸುಧಾ ಮೂರ್ತಿ ಇಂದು ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸುಧಾ ಮೂರ್ತಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ಸುಧಾ ಮೂರ್ತಿ ಪತಿ ಎನ್ಆರ್ ನಾರಾಯಣ ಮೂರ್ತಿ ಇದ್ದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ಸಂಸತ್ ಭವನದ ತಮ್ಮ ಚೇಂಬರ್ನಲ್ಲಿ ಪ್ರಮಾಣ ವಚನ ಬೋಧಿಸಿದರು. ಸಭಾನಾಯಕ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿದ್ದರು. 73ರ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷೆ, ಲೇಖಕಿ.