ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ರೆಮೆಡಿಸ್ವಿಯರ್ ಕೊರತೆಯಾಗಿಲ್ಲ – ಸುಧಾಕರ್
ಕೊರೊನಾ 2 ನೇ ಅಲೆ ಜೋರಾಗಿದ್ದು, ದಿನೇ ದಿನೇ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿರುವ ವಿಚಾರವಾಗಿ ರಾಜ್ಯದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಾವಿನ ಪ್ರಮಾಣವನ್ನು ಎಷ್ಟು ಸೋಂಕಿತರಲ್ಲಿ ಎಷ್ಟು ಜನರ ಸಾವಾಗಿದೆ ಅಂತ ಅಳೆಯಬೇಕು. ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಅರ್ಧದಷ್ಟೂ ಇಲ್ಲ. 0.5% ಅಥವಾ 0.6% ರಷ್ಟು ಸಾವಿನ ಪ್ರಮಾಣ ಸದ್ಯ ಇದೆ. ಇದನ್ನು ಇನ್ನಷ್ಟು ಕಡಿಮೆ ಮಾಡುವ ಗುರಿ ಇದೆ ಎಂದಿದ್ದಾರೆ.
ಇದೇ ವೇಳೆ ಕೆಲ ಜಿಲ್ಲೆಗಳಲ್ಲಿ ರೆಮೆಡಿಸ್ವಿಯರ್ ಇಂಜಕ್ಷನ್ ಕೊರತೆ ವಿಚಾರವಾಗಿ ಮಾತನಾಡಿ ನಮ್ಮ ರಾಜ್ಯದಲ್ಲಿ ರೆಮೆಡಿಸ್ವಿಯರ್ ತಯಾರು ಮಾಡುವ 3 ಸಂಸ್ಥೆಗಳಿವೆ. ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ರೆಮೆಡಿಸ್ವಿಯರ್ ಕೊರತೆಯಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರಿಗೆ ಬೇಕಾದರೆ ತಕ್ಷಣ ವ್ಯವಸ್ಥೆ ಮಾಡ್ತೇವೆ. ಯಾವುದೇ ರೆಮೆಡಿಸ್ವಿಯರ್, ಆಕ್ಸಿಜನ್ ಕೊರತೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.








