ಇತ್ತೀಚೆಗೆ ಎಂ ಎಸ್ ರಾಮಯ್ಯ ಆಸ್ಪತ್ರೆಯ ನಿರ್ಲಕ್ಷ್ಯತನದಿಂದಾಗಿ ವೃದ್ಧರೊಬ್ಬರು ಮೃತಪಟ್ಟಿದ್ದರು. ವೃದ್ಧನನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದೇ ಆಸ್ಪತ್ರೆ ಸಿಬ್ಬಂದಿ ಮೀನಾಮೇಷ ಎಣಿಸಿದ್ದ ಪರಿಣಾಮ ವೃದ್ಧ ವ್ಯಕ್ತಿ ಆಂಬ್ಯುಲೆನ್ಸ್ ನಲ್ಲೇ ಪ್ರಾಣ ಬಿಡುವಂತಾಗಿತ್ತು. ಈ ವಿಚಾರವಾಗಿ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ರೋಗಿಯನ್ನು ಕಾಯಿಸಿದ್ದಕ್ಕೆ 75 ವರ್ಷದ ವ್ಯಕ್ತಿ ಆ್ಯಂಬುಲೆನ್ಸ್ ನಲ್ಲೇ ಮೃತಪಟ್ಟಿದ್ದಾರೆ ಎಂಬ ಸುದ್ದಿ ನಿಜಕ್ಕೂ ನೋವಿನ ಸಂಗತಿ. ಸರ್ಕಾರ ಸಾವಿನ ಸಂಖ್ಯೆಯನ್ನು ಇಳಿಸಲು ಶತಪ್ರಯತ್ನ ಮಾಡುತ್ತಿದೆ. ಆದ್ರೆ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಬೇಗ ಅಡ್ಮಿಂಟ್ಮಾಡಿಕೊಂಡಿದ್ದರೆ ಪ್ರಾಣ ಉಳಿಯುತ್ತಿತ್ತು‘ ಎಂದು ಬರೆದುಕೊಂಡಿದ್ದಾರೆ.
ಶಾಸಕ ವಿನಯ ಕುಲಕರ್ಣಿಗೆ ಕೈ ತಪ್ಪಿದ ಟಿಕೆಟ್; ಆಕ್ರೋಶ
ಧಾರವಾಡ ಗ್ರಾಮೀಣ ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ಬೇಸರ ಹೊರ...