Sudhamurthy – ಕೋಲಾರಮ್ಮ ದೇವಸ್ಥಾನಕ್ಕೆ ಸುಧಾಮೂರ್ತಿ ಭೇಟಿ
ಕೋಲಾರ : ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಇಂದು ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಸುಧಾಮೂರ್ತಿ ಅವರು, ಕೋಲಾರಕ್ಕೆ ಬಂದಾಗಲೆಲ್ಲಾ ಇಲ್ಲಿಗೆ ಬಂದು ಹೋಗುತ್ತೇನೆ.
ಅದರಂತೆ ಇಂದು ದೇವಿಯ ದರ್ಶನ ಪಡೆದಿದ್ದು, ಬಹಳ ನೆಮ್ಮದಿಯಾಗಿದೆ.

ದೇವಾಲಯವನ್ನು ಬಹಳ ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು.
ಇನ್ನು ದೇವಸ್ಥಾನದ ಬಳಿ ಸುಧಾಮೂರ್ತಿ ಅವರನ್ನು ನೋಡಿದ ಸ್ಥಳೀಯರು ಗೌರವದಿಂದ ನಮಸ್ಕರಿಸಿದ್ರು.
ಹಾಗೇ ಕೆಲವರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.








