2021-22 ರಲ್ಲಿ 5000 ಲಕ್ಷ ಮೆಟ್ರಿಕ್ ಟನ್ ಕಬ್ಬು ಉತ್ಪಾದನೆ…
2021-22 ರ ಋತುವಿನಲ್ಲಿ 5000 ಲಕ್ಷ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ಕಬ್ಬನ್ನು ಉತ್ಪಾದಿಸಲಾಗಿದೆ. ಅದರಲ್ಲಿ 3574 LMT ಕಬ್ಬನ್ನ 394 LMT ಸುಕ್ರೋಸ್ ಉತ್ಪಾದನೆಗಾಗಿ ಸಕ್ಕರೆ ಕಾರ್ಖಾನೆಯಲ್ಲಿ ಬಳಸಿಕೊಳ್ಳಲಾಗಿದೆ. ಆ 394 ಲಕ್ಷ MT ಸಕ್ಕರೆಯಲ್ಲಿ ಸುಮಾರು 36 ಲಕ್ಷವನ್ನ ಎಥೆನಾಲ್ ತಯಾರಿಕೆಗಾಗಿ ಮತ್ತಷ್ಟು ಸಂಸ್ಕರಿಸಲಾಗಿದೆ.
ಸಕ್ಕರೆಯ ಸಾಮಾನ್ಯ ಉತ್ಪಾದನೆಯು ಸುಮಾರು 320-360 LMT ಎಂದು ದಾಖಲಿಸಲಾಗಿದೆ, ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ಸಕ್ಕರೆಯಿಂದ ಉಂಟಾಗುವ ನಗದು ನಷ್ಟವನ್ನು ನಿಭಾಯಿಸಲು, ಸರ್ಕಾರವು 2018 ರಲ್ಲಿ ಕಬ್ಬಿನ ಕನಿಷ್ಠ ಮಾರಾಟ ಬೆಲೆಯನ್ನ ನಿಗದಿಪಡಿಸಿದೆ.
ಸಕ್ಕರೆ ಮಾರುಕಟ್ಟೆಗಳಲ್ಲಿನ ಆರ್ಥಿಕ ಒತ್ತಡದಿಂದ ಚೇತರಿಸಿಕೊಳ್ಳಲು 2018 ರಿಂದ ಹೆಚ್ಚುವರಿ ಸಕ್ಕರೆಯನ್ನು ಎಥೆನಾಲ್ ಆಗಿ ಪರಿವರ್ತಿಸಲು ಪ್ರೋತ್ಸಾಹಿಸಲಾಗಿದೆ. ಎಥೆನಾಲ್ ಅನ್ನು ಜೈವಿಕ ಇಂಧನವಾಗಿ ಉತ್ತೇಜಿಸುವ ಗುರಿ ಕೇಂದ್ರ ಸರ್ಕಾರದ ಪ್ರಕಾರ ಯಶಸ್ವಿಯಾಗಿದೆ. ಎಥೆನಾಲ್ ಉತ್ಪಾದನೆಯು ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಬಾಕಿಯನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
Sugar Sector Declared Self Sufficient As Sugarcane Production Crosses 5000 LMT in 2021-22