suicide ಹೌದು ನೀವು ಸರಿಯಾಗಿ ಓದಿದ್ದಿರಿ
೩೦ ಕೊಟಿ ಒಡೆಯ ಮಗನೊಬ್ಬನು ತನ್ನ ತಂದೆ ತಾಯಿಗೆ ಊಟಾ ಹಾಕದ ಕಾರಣಕ್ಕೆ ಮನ ನೊಂದ ಪಾಲಕರು ಆತ್ಮ ಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದೇಹಲಿಯ ಚಕ್ರಿ ದಾದಿ ಬಳಿಯ ಬಾಂದ್ರಿಯ ಶಿವ ಕಾಲೋನಿಯಲ್ಲಿ ನಡೆದಿದೆ .
78 ವರ್ಷದ ನಿವಾಸಿಗಳಾದ ಜಗದೀಶ್ ಚಂದ್ರ ಆರ್ಯಾ ಮತ್ತು 77 ಭಾಗ್ಲಿ ದೇವಿ ಮಾರ್ಚ 29ರಂದು ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ವೃದ್ಧ ದಂಪತಿ ಆತ್ಮಹತ್ಯೆಗೂ ಮುನ್ನ ಪೊಲೀಸರಿಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ದಂಪತಿಗಳಿಬ್ಬರು ಇಬ್ಬರೂ ಮೃತಪಟ್ಟಿದ್ದರು.
ದಂಪತಿಗೆ ಇಬ್ಬರು ಮಕ್ಕಳಿದ್ದು ಮಗನ ಮನೆಯಲ್ಲಿ ವಾಸವಾಗಿದ್ದರು. ಆದರೆ ಮಗ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ಸೊಸೆ ಮನೆಯಲ್ಲೇ ವಾಸವಾಗಿದ್ದರು . ಆದರೆ ಸೊಸೆ ಕೆಲವು ಸಮಯದ ನಂತರ ಮನೆಯಿಂದ ಹೊರಗೆ ಹಾಕಿದ್ದು, ಎರಡು ವರ್ಷಗಳಿಂದ ವೃದ್ಧಾಶ್ರಮದಲ್ಲಿ ದಂಪತಿ ತಂಗಿದ್ದರು.
ಪತ್ನಿಗೆ ಸ್ಟ್ರೋಕ್ ಆಗಿದ್ದರಿಂದ ಪತಿ ಮಗ ವೀರೇಂದರ್ ಮನೆಗೆ ಆಗಮಿಸಿದ್ದರು ಮಗ ತಂಗಲು ಒಪ್ಪಿಗೆ ನೀಡಿದ್ದರೂ ಸರಿಯಾಗಿ ಎರಡು ಹೊತ್ತು ಊಟ ಕೊಡುತ್ತಿರಲಿಲ್ಲ.
30 ಕೋಟಿ ಆಸ್ತಿ ಇದ್ದರೂ ಎರಡು ಹೊತ್ತು ಊಟ ಹಾಕಲು ಅವನಿಗೂ ಇಷ್ಟವಿರಲಿಲ್ಲ. ಇದಕ್ಕೆ ಕಾರಣ ಆತನಿಗೆ ಇದ್ದ ಇಬ್ಬರು ಪತ್ನಿಯರು ಎಂದು ಜಗದೀಶ್ ಆರ್ಯಾ ಡೆತ್ ನೋಟ್ ನಲ್ಲಿ ವಿವರಿಸಿದ್ದಾರೆ.
30 ಕೋಟಿ ರೂ. ಆಸ್ತಿಯನ್ನು ಮಗನಿಗೆ ನೀಡಿದ್ದರು ಆತ ನೋಡಿಕೊಳ್ಳಲಿಲ್ಲ. ಆದ್ದರಿಂದ ಈ ಆಸ್ತಿಯನ್ನು ಬಾಂದ್ರಾದಲ್ಲಿರುವ ಆರ್ಯ ಸಮಾಜಕ್ಕೆ ದಾನ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ನಮ್ಮ ಈ ಸ್ಥಿತಿಗೆ ಕಾರಣವಾದವರನ್ನು ಶಿಕ್ಷಿಸಬೇಕೆಂದು ಮನವಿ ಮಾಡಿದ್ದಾರೆ..