Suicide ಪ್ರೀತಿ ಎಂದರೆ ಅಮರ ಮಧುರ ಪ್ರೇಮ ಎಂದು ಎಲ್ಲರೂ ಹೇಳುತ್ತಾರೆ ಆದರೆ ಕೆಲವರು ಮೋಹದ ಬಲೆಗೆ ಬಿದ್ದು ಜೀವನದ ಬವಿಷ್ಯವನ್ನೆ ಹಾಳು ಮಾಡಿಕೋಳ್ಳುತ್ತಾರೆ.
ಹೌದು ಇದಕ್ಕೆ ನಿದರ್ಶನದಂತೆ ಇತ್ತೀಚೆಗೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಪ್ರೇಯಸಿ ಗರ್ಭಿಣಿ ಎಂದು ತಿಳಿದ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ಯುವಕ ತನ್ನ ಗೆಳತಿಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದ. ಇದೇ ವೇಳೆ ಆಕೆ ಗರ್ಭಿಣಿ ಎಂದು ಹೇಳಿದಾಗ ಹೆದರಿ ಯುವಕ ಫೋನ್ ಕಟ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಆತ್ಮಹತ್ಯೆಯ ಸೆಲ್ಫಿ ವಿಡಿಯೋ ತೆಗೆದು ತನ್ನ ಗೆಳತಿಗೆ ಕಳುಹಿಸಿದ್ದಾನೆ. ಬಳಿಕ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದರು.
ಸಂಜಯನಗರ ವ್ಯಾಪ್ತಿಯ ಅತ್ರೈಲಾ ಗ್ರಾಮದಲ್ಲಿ ನಡೆದಿರುವ ಈ ಘಟನೆ ಕುರಿತು ಪೊಲೀಸರು ನೀಡಿರುವ ವಿವರ ಹೀಗಿದೆ. ಅತ್ರೈಲಾ ಗ್ರಾಮದ ವಿನಯ್ ಕುಮಾರ್ ದ್ವಿವೇದಿ (29) ಸಂಜಯ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಕಳೆದ ಸೋಮವಾರ ರಾತ್ರಿ ವಿನಯ್ ತನ್ನ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಬೆಳಗ್ಗೆಯಾದರೂ ವಿನಯ್ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಮನೆಯ ಮಾಲೀಕರು ಅನುಮಾನಗೊಂಡು ಮನೆಯೊಳಗೆ ನೋಡಿದರು. ವಿನಯ್ ಕೋಣೆಯಲ್ಲಿ ಬಿದ್ದಿರುವುದನ್ನು ಗಮನಿಸಿದ ಮನೆಯ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗರ್ಭಿಣಿಯಾಗುವ ಭಯ..
ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ಕೋಣೆಗೆ ನುಗ್ಗಿದ್ದಾರೆ. ನೇಣುಗಂಬದಿಂದ ನೇತಾಡುತ್ತಿದ್ದ ವಿನಯ್ ಶವವನ್ನು ಅಧಿಕಾರಿಗಳು ಕೆಳಗೆ ಇಳಿಸಿದರು. ಆತನ ಮೊಬೈಲ್ ಬೆಡ್ ಮೇಲೆ ಬಿದ್ದಿದ್ದು, ಅದನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗಿದೆ.
ಆತ್ಮಹತ್ಯೆಗೂ ಮುನ್ನ ವಿನಯ್ ತನ್ನ ಗೆಳತಿಯೊಂದಿಗೆ ಮಾತನಾಡಿದ್ದ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ವಿನಯ್ ಗೆಳತಿ ಗರ್ಭಿಣಿಯಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದು, ಇದರಿಂದ ಹೆದರಿ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂದೆ-ತಾಯಿಯ ಜೊತೆಯೂ ಖುಷಿಯಾಗಿ..
ಪೊಲೀಸರು ವಿನಯ್ ಫೋನ್ ವಶಪಡಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ವಿನಯ್ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಕೂಡ ತಕ್ಷಣ ಸ್ಥಳಕ್ಕೆ ಆಗಮಿಸಿದರು.
ವಿನಯ್ ವಿದ್ಯುತ್ ಇಲಾಖೆಯ ಉಪ ಕೇಂದ್ರದಲ್ಲಿ ನಿರ್ವಹಣೆ ಕೆಲಸ ಮಾಡುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಘಟನೆಗೂ ಮುನ್ನ ಅವರು ತಮ್ಮೊಂದಿಗೆ ಮಾತನಾಡಿದ್ದು, ಈ ವೇಳೆ ಅವರು ತುಂಬಾ ಖುಷಿಯಾಗಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಗೆಳತಿಯ ವಿಚಾರಣೆ..
ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ವಿನಯ್ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಮೃತನ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಸೈಬರ್ ಸೆಲ್ ಸಹಾಯದಿಂದ ತನಿಖೆ ನಡೆಸಲಾಗುತ್ತಿದೆ. ಮೃತರ ಎಲ್ಲಾ ಮೊಬೈಲ್ ಡೇಟಾವನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯಲ್ಲಿ ಗೆಳತಿಯ ಪಾತ್ರ ಅನುಮಾನಾಸ್ಪದವಾಗಿ ಕಂಡುಬಂದರೆ ಆಕೆಯನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.