ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಅಂಬಿ ಅಭಿಮಾನಿಗಳ ಬೇಡಿಕೆಗೆ ಬೇಸರ ವ್ಯಕ್ತಪಡಿಸಿದ ಸುಮಲತ ಅಂಬರೀಶ್

Naveen Kumar B C by Naveen Kumar B C
November 23, 2021
in Cinema, Newsbeat, ಮನರಂಜನೆ
MP Sumalatha
Share on FacebookShare on TwitterShare on WhatsappShare on Telegram

ಅಂಬಿ ಅಭಿಮಾನಿಗಳ ಬೇಡಿಕೆಗೆ ಬೇಸರ ವ್ಯಕ್ತಪಡಿಸಿದ ಸುಮಲತ ಅಂಬರೀಶ್

ಪುನೀತ್ ಅಮರರಾದ ನಂತರ ಅವರ ಹೆಸರನ್ನ ಚಿರಸ್ಥಾಯಿಯಾಗಿಸಲು ಹಲವು ಕೆಲಸಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಅಪ್ಪು ಅವರಿಗೆ ‘ಕರ್ನಾಟಕ ರತ್ನ’  ಪ್ರಶಸ್ತಿ ನೀಡಿ ಅವರ ಹೆಸರನ್ನ ಅಮರವಾಗಿಸಿದೆ.

Related posts

slum-dog-movie-glimpse-tabu-gauri-hegde-vijay-sethupathi-puri-jagannadh

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

August 11, 2026
varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

August 11, 2026

ಅದೇ ರೀತಿ ಅಂಬರೀಶ್ ಅವರಿಗೂ ಇಂಥಹ ಗೌರವಗಳನ್ನ ಕೊಡಬೇಕು ಎಂದು ಅಂಬಿ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ. ಅದೇ ರೀತಿ ಬೀದಿಗಿಳಿದು ಹೋರಾಟ ಮಾಡುವ ಬಗ್ಗೆ ಎಚ್ಚರಿಸಿದ್ದಾರೆ,  ಇದು ಸುಮಲತ ಅಂಬರೀಶ್ ಅವರ ಗಮನಕ್ಕೆ ಬಂದಿದ್ದು ಬೇಸರ ವ್ಯಕ್ತ ಪಡಿಸಿದ್ದಾರೆ.

ನನ್ನ ಮನವಿ

ನಮ್ಮ ಪ್ರೀತಿಯ ಡಾ|| ಅಂಬರೀಶ್ ಅವರನ್ನು ಆರಾಧ್ಯ ದೈವದಂತೆ ಪ್ರೀತಿಸಿ, ಅವರ ನೆನಪನ್ನು ಚಿರಸ್ಥಾಯಿಯಾಗಿ ಬೆಳಗಿಸುತ್ತಿರುವ ನೆಚ್ಚಿನ ಅಭಿಮಾನಿ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳು ಇಂದು ಅಂಬರೀಶ್ ಅವರ ಸ್ಮಾರಕ ಅಭಿವೃದ್ಧಿಗೊಳಸುವುದು, ಅವರ ಹೆಸರಿನಲ್ಲಿ ರಸ್ತೆಗಳನ್ನು ನಾಮಕರಣ ಮಾಡುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂದಿದೆ.

ನಮ್ಮ ಕುಟುಂಬದೊಂದ್ಧಗೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಹಾಗೂ ನಮ್ಮ ಮನೆ ಮಗನಂತಿದ್ದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆಯಿಂದ ನನಗಾಗಿರುವ ನೋವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ.

ಇದರೊಂದಿಗೆ ಚಿತ್ರರಂಗ, ಅಭಿಮಾನಿಗಳು, ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದಂತ ನಷ್ಟ ಉಂಟಾಗಿದ್ದು, ಈ ಸಮಯದಲ್ಲಿ ತಾವುಗಳು ಹೋರಾಟ ಮಾಡುವ ನಿರ್ಧಾರ ಮಾಡಿರುವುದು ಎಲ್ಲರ ಹೃದಯದ ಮೇಲೆ ಆಗಿರುವ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದುದರಿಂದ, ಈ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಸವಲ್ಲ.

ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು.

ಎಲ್ಲಾ ಪ್ರಶಸ್ತಿಗಳನ್ನು ಮೀರಿದಂತ ಪ್ರೀತಿ ಮತ್ತು ಅಭಿಮಾನವನ್ನು ನೀವುಗಳು ನಮ್ಮ ಕುಟುಂಬಕ್ಕೆ ನೀಡಿದ್ದೀರಿ. ಅಂಬರೀಷ್ ಅವರು ತಮ್ಮ ಜೀವನದಲ್ಲಿ ಯಾವ ಪ್ರಶಸ್ತಿ, ಹುದ್ದೆ ಅಥವಾ ಸನ್ಮಾನವನ್ನು ಬಯಸಿದವರಲ್ಲ. ಹೀಗಾಗಿ ಅಂಬರೀಷ್ ಅವರ ಅಭಿಮಾನಿಗಳಾಗಿ ತಾವುಗಳು ಸಹ ಅವರ ಹಾದಿಯಲ್ಲಿ ನಡೆಯಬೇಕು ಎನ್ನುವುದು ನನ್ನ ಆಶಯ. ಆದುದರಿಂದ, ಈ ಸಮಯದಲ್ಲಿ ಪ್ರಶಸ್ತಿ ಕೋರಿ ಹೋರಾಟ ಅಥವಾ ಪ್ರತಿಭಟನೆ ನಡೆಸುವುದು ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ.

ಆದುದರಿಂದ, ತಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿ-ವಾತ್ಸಲ್ಯಗಳನ್ನು ಗೌರವಿಸುತ್ತ, ಹಾಗೂ ನಿಮ್ಮೆಲ್ಲರ ಆಸೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಡೇರಿಸುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಭರವಸೆಯನ್ನು ಇಡುತ್ತಾ, ತಾವು ತೆಗೆದುಕೊಂಡಿರುವ ಈ ಹೋರಾಟದ ನಿರ್ಧಾರವನ್ನು ಹಿಂಪಡೆದು ನವೆಂಬರ್ 24ನೇ ತಾರೀಕಿನಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ

(ಸುಮಲತಾ ಅಂಬರೀಷ್)

Tags: ambi fanskarnatakasaakshaatvSumalatha Ambarish
ShareTweetSendShare
Join us on:

Related Posts

slum-dog-movie-glimpse-tabu-gauri-hegde-vijay-sethupathi-puri-jagannadh

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

by admin
August 11, 2026
0

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ 'ಸ್ಲಮ್ ಡಾಗ್' ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ 'ಗೌರಿ ಹೆಗ್ಡೆ' ಪಾತ್ರದಲ್ಲಿ ಟಬು!...

varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

by admin
August 11, 2026
0

ಅಷ್ಟ ಐಶ್ವರ್ಯ ಪಡೆಯಲು ತಾಂತ್ರಿಕ ಪರಿಹಾರ ಅಷ್ಟ ಲಕ್ಷ್ಮಿ ನಾಣ್ಯಗಳು ಶುಕ್ರವಾರ ಮಹಾಲಕ್ಷ್ಮಿ ದೇವಿಗೆ ಶುಭ ದಿನ. ಆ ಶುಕ್ರವಾರ ಬರುವ ಶುಕ್ರ ಹೊರೆಯ ಸಮಯದಲ್ಲಿ ನಾವು...

asthalakshmi-mantra-money-remedy-friday-astrology-tips

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ.

by admin
August 11, 2026
0

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ. 28-08-2026 ರಂದು ನಗದು ಅಗತ್ಯವನ್ನು ಪೂರೈಸಲು...

biscoff-swiggy-dineout-dm-a-lonely-cup-campaign-offers

by admin
August 11, 2026
0

ಒಂಟಿ ಕಾಫಿ ಕಪ್ ಫೋಟೋ ಕಳುಹಿಸಿ, ಆಕರ್ಷಕ ಗಿಫ್ಟ್ ಗೆಲ್ಲಿ: ಟೀ - ಕಾಫಿ ಪ್ರಿಯರಿಗಾಗಿ ವಿನೂತನ ಆಫರ್!  ಬೆಂಗಳೂರು: ಬಿಸಿ ಬಿಸಿ ಟೀ ಅಥವಾ ಕಾಫಿ...

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ:  ಸಂಘಟನೆಗಳ  ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ: ಸಂಘಟನೆಗಳ ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

by Shwetha
August 11, 2026
0

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಆಗಸ್ಟ್ 13ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram