ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ (Sunita Williams) ಸಾಂತಾಕ್ಲಾಸ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ.
ಆರು ತಿಂಗಳಿಂದ ಬಾಹ್ಯಾಕಾಶದಲ್ಲಿರುವ ಸುನಿತಾ ವಿಲಿಯಮ್ಸ್ ಕ್ರಿಸ್ಮಸ್ ಸಂಭ್ರಮದಲ್ಲಿದ್ದಾರೆ. ಸುನಿತಾ ಅವರು ಸಾಂತಾ ಕ್ಲಾಸ್ ಆಗಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಹ್ಯಾಮ್ ರೇಡಿಯೋದಲ್ಲಿ ಮಾತನಾಡುವ ಸಮಯದಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಡಾನ್ ಪೆಟ್ಟಿಟ್ ಜೊತೆಗೂಡಿ ಫೋಟೋಗೆ ಪೋಸ್ ನೀಡಿದ್ದಾರೆ.