ಲಕ್ನೋ: ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಫೋಟೋ ಕಾಣಿಸಿಕೊಂಡಿದ್ದು, ವೈರಲ್ ಆಗುತ್ತಿದೆ.
ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಫೋಟೋ ಕಾಣಿಸಿಕೊಂಡಿದೆ. ಸದ್ಯ ಈ ಪ್ರವೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಫೆ. 17 ರಂದು ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಪ್ರಚಾರ ಮಂಡಳಿಯು 2,385 ಪರೀಕ್ಷಾ ಕೇಂದ್ರಗಳೊಂದಿಗೆ 75 ಜಿಲ್ಲೆಗಳಲ್ಲಿ ಪರೀಕ್ಷೆಗಳನ್ನು ನಡೆಸಿತ್ತು. ಕನೌಜ್ನ ತಿರ್ವಾ ತಹಸಿಲ್ನಲ್ಲಿರುವ ಸೋನೆಶ್ರೀ ಸ್ಮಾರಕ ಬಾಲಕಿಯರ ಕಾಲೇಜು ಕೂಡ ಒಂದು ಪರೀಕ್ಷಾ ಕೇಂದ್ರವಾಗಿತ್ತು. ಇಲ್ಲಿ ಸನ್ನಿಲಿಯೋನ್ ಅವರ ಫೋಟೋದೊಂದಿಗೆ ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಪ್ರಚಾರ ಮಂಡಳಿಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿದೆ.