‘ಕಾಟನ್ ಪೇಟೆ ಗೇಟ್’ನಲ್ಲಿ ಕಾಣಿಸಿಕೊಳ್ಳಲಿರುವ ಮಾದಕ ನಟಿ ಸನ್ನಿ..!
ಬೆಂಗಳೂರು: ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಕನ್ನಡದ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.. ಹೌದು ಸದ್ಯ ಜನಪ್ರಿಯ ರಿಯಾಲಿಟಿ ಶೋ ಸ್ಪ್ಲಿಟ್ಸ್ ವಿಲ್ಲಾದಲ್ಲಿ ಕಾಣಿಸಿಕೊಳ್ತಾಯಿರೋ ಸನ್ನಿ ಇದೀಗ ಕನ್ನಡದ ‘ಕಾಟನ್ ಪೇಟೆ ಗೇಟ್’ ಸಿನಿಮಾದ ಸ್ಪೆಷಲ್ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ.
ಹೌದು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ 2 ಬಾರಿ ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಿ ಪಡ್ಡೆ ಹೈಕ್ಳ ನಿದ್ದೆಗೆಡಿಸಿದ್ದ ಸನ್ನಿ ಇದೀಗ 3ನೇ ಬಾರಿಗೆ ಕನ್ನಡದ ಸಿನಿಮಾದಲ್ಲಿ ದರ್ಶನ ನೀಡಲಿದ್ದಾರೆ. ಈ ಸಾಂಗ್ ಗಾಗಿ ಸನ್ನಿಗೆ 50 ಲಕ್ಷದಷ್ಟು ಸಂಭಾವನೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸ್ಯಾಂಡಲ್ ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರೋ ಸಿನಿಮಾದಲ್ಲಿ ಸನ್ನಿ ಹೆಜ್ಜೆ ಹಾಕಿಲಿದ್ದಾರೆ. ಈ ಚಿತ್ರ ತೆಲುಗಿನಲ್ಲಿ ಸೀತಣ್ಣ ಪೇಟೆ ಗೇಟ್ ಆಗಿ ರೆಡಿಯಾಗುತ್ತಿದೆ.
ಇದೀಗ ಈ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ. ಚಿತ್ರದ ಸ್ಪೆಷಲ್ ಐಟಂ ಸಾಂಗ್ ನಲ್ಲಿ ಸನ್ನಿ ಡ್ಯಾನ್ಸ್ ಮಾಡಲಿದ್ದಾರೆ. ಸನ್ನಿ ಜೊತೆ ಶ್ರೀನಿವಾಸ್ ಕೂಡ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.







