ಗೆಲ್ಲಲೇಬೇಕಾದ ಒತ್ತಡವನ್ನು ಎದುರಿಸುತ್ತಿರುವ ಲಖನೌ ಸೂಪರ್ ಜೈಂಟ್ಸ್ ಇಂದು ಆತಿಥೇಯ ಸನ್ರೈಸರ್ಸ್ ತಂಡವನ್ನು ಎದುರಿಸಲಿದೆ. ಸನ್ರೈಸರ್ಸ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದಲ್ಲಿ ಇಂದಿನ ಪಂದ್ಯವನ್ನು ಗೆಲ್ಲಲೇಬೇಕು.
ಲಖನೌ ತಂಡ ಕಳೆದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತಿದೆ. ಸನ್ರೈಸರ್ಸ್ ತಂಡ ಅಂಕಪಟ್ಟಿಯಲ್ಲಿ ಒಂಭತ್ತನೆ ಸ್ಥಾನ ಪಡೆದಿದೆ. ಕೃಣಾಲ್ ಪಾಂಡ್ಯ ನೇತೃತ್ವದ ಲಖನೌ 11 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಉಪ್ಪಳಾದ ಪಿಚ್ ನಿಧಾನಗತಿಯಿಂದ ಕೂಡಿದ್ದು ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡಲಿದೆ. ರವಿ ಬಿಷ್ಣೋಯಿ, ಇಂಪ್ಯಾಕ್ಟ್ ಆಟಗಾರನಾಗಿ ಅಮಿತ್ ಮಿಶ್ರಾ ಮತ್ತು ನಾಯಕ ಕೃಣಾಲ್ ಲಖನೌ ಪರ ಸ್ಪಿನ್ನರ್ಗಳಾಗಿದ್ದಾರೆ.
ಸನ್ರೈಸರ್ಸ್ ಪರ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ 8 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದಾರೆ.
ಇನ್ನು ಸನ್ರೈಸರ್ಸ್ ಹೈದ್ರಾಬಾದ್ ಪರ ಬ್ಯಾಟಿಂಗ್ನಲ್ಲಿ ಏಡಿನ್ ಮಾರ್ಕ್ರಮ್, ಹೆನ್ರಿಕ್ ಕ್ಲಾಸೆನ್ ಮತ್ತು ಗ್ಲೆನ್ ಫಿಲೀಪ್ಸ್ ಅವರುಗಳನ್ನು ತಂಡ ನೆಚ್ಚಿಕೊಂಡಿದೆ.
ಭಾರತೀಯ ಬ್ಯಾಟರ್ಗಳ ವೈಫಲ್ಯದಿಂದಾಗಿ ಸನ್ರೈಸರ್ಸ್ ಸೋಲುಗಳನ್ನು ಕಂಡಿದೆ. ಮಯಾಂಕ್ ಅಗರ್ವಾಲ್ (9 ಪಂದ್ಯಗಳಿಂದ 187ರನ್) ರಾಹುಲ್ ತ್ರಿಪಾಠಿ (10 ಪಂದ್ಯ,237ರನ್) ಹೊಡೆದಿದ್ದಾರೆ. ಕ್ಲಾಸೆನ್ (185.34) 150 ಪ್ಲಸ್ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಲಖನೌ ತಂಡದಲ್ಲಿ ಕ್ವಿಂಟಾನ್ ಡಿಕಾಕ್ ಮತ್ತು ಕೈಲೆ ಮೇಯರ್ಸ್ ಒಳ್ಳೆಯ ಓಪನರ್ಗಳಾಗಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ಮತ್ತು ನಿಕೊಲೊಸ್ ಪೂರಾನ್ ಹೆಚ್ಚಿನ ಪ್ರರ್ದಶನ ನಿರೀಕ್ಷಿಸಲಾಗಿದೆ. ಆಯೂಷ್ ಬದೋನಿ (212 ರನ್ 147 ಸ್ಟ್ರೈಕ್ ರೇಟ್ ) ಪರಿಣಾಮಕಾರಿ ಬ್ಯಾಟರ್ ಆಗಿದ್ದಾರೆ.
ಸಂಭಾವ್ಯ ತಂಡಗಳು
ಸನ್ರೈಸರ್ಸ್ ಹೈದ್ರಾಬಾದ್: ಅನಮೋಲ್ಪ್ರೀತ್ ಸಿಂಗ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡಿನ್ ಮಾರ್ಕ್ರಮ್ (ನಾಯಕ), ಗ್ಲೆನ್ ಫೀಲಿಪ್ಸ್, ಹೆನ್ರಿಕ್ ಕ್ಲಾಸೆನ್(ವಿಕೆಟ್ ಕೀಪರ್), ಅಬ್ದುಲ್ ಸಾಮದ್, ವಿವ್ರಾಂತ್ ಶರ್ಮಾ, `ಭುವನೇಶ್ವರ್ ಕುಮಾರ್, ಮಾಕೊ ಹೆನ್ಸ್ನ್, ಮಾಯಂಕ್ ಮಾರ್ಕಂಡೆ, ಟಿ .ನಟರಾಜನ್.
ಲಖನೌ: ಕ್ವಿಂಟಾನ್ ಡಿಕಾಕ್ (ವಿಕೆಟ್ ಕೀಪರ್), ಕೈಲೆ ಮೇಯರ್ಸ್, ಕೃಣಾಲ್ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ರವಿ ಬಿಷ್ಣೋಯಿ, ಆವೇಶ್ ಖಾನ್, ಮೊಹ್ಸಿನ್ ಖಾನ್, ಕೆ.ಗೌತಮ್, ಅಮಿತ್ ಮಿಶ್ರಾ.