ಭಾರತೀಯ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರ IPL ಜರ್ನಿ ಸ್ಫೂರ್ತಿದಾಯಕವಾಗಿದೆ. 2008ರಲ್ಲಿ ನಡೆದ ಐಪಿಎಲ್ ಉದ್ಘಾಟನಾ ಸೀಸನ್‌ನಲ್ಲಿ, ಅವರು ಮುಂಬೈ ಇಂಡಿಯನ್ಸ್ (MI) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯಕ್ಕೆ ಬಾಲ್ ಬಾಯ್ ಆಗಿದ್ದರು. 16 ವರ್ಷಗಳ ನಂತರ, ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ನಾಯಕತ್ವ ವಹಿಸಿಕೊಂಡರು. ಇದೀಗ ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕನಾಗಿದ್ದಾರೆ, ಕ್ರಿಕೆಟ್ ಪ್ರೇಮಿಗಳಿಗೆ ಹೊಸ ನಿರೀಕ್ಷೆ ಮೂಡಿಸಿದ್ದಾರೆ.
ಹಳೆಯ ದಿನಗಳನ್ನು ಸ್ಮರಿಸಿದ ಅಯ್ಯರ್
ಶ್ರೇಯಸ್ ಅಯ್ಯರ್ ಇತ್ತೀಚೆಗೆ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡು, 2008ರಲ್ಲಿ ನಾನು ಬಾಲ್ ಬಾಯ್ ಆಗಿದ್ದೆ, ಅದೇ ಐಪಿಎಲ್‌ನಲ್ಲಿ ಈಗ ತಂಡದ ನಾಯಕನಾಗಿದ್ದೇನೆ ಎಂದು ಭಾವೋದ್ರಿಕ್ತರಾದರು.
ಅಯ್ಯರ್ ಈ ಬಗ್ಗೆ ಹೇಳಿಕೆ ನೀಡುತ್ತಾ, ನನ್ನ ಕ್ರಿಕೆಟ್ ಯಾತ್ರೆಯಲ್ಲಿ ಹಲವು ಹಂತಗಳು ಮತ್ತು ಸವಾಲುಗಳು ಇವೆ. ಮುಂಬೈನ ಬಾಲಕನಾಗಿ ಐಪಿಎಲ್‌ನಲ್ಲಿ ಬಾಲ್ ಬಾಯ್ ಆಗಿದ್ದೆ. ಈಗ ಅಲ್ಲಿ ನಾಯಕನಾಗಿದ್ದೇನೆ. ನನ್ನ ಕನಸು ನನಸಾಗಿದೆ ಎಂದು ಹೇಳಿದರು.
ಅಯ್ಯರ್ ಗೆ ಪಂಜಾಬ್‌ಗೆ ಟ್ರೋಫಿ ತರುವಾಸೆ
ಇದೇ ಕುರಿತು ನ್ಯೂಜಿಲ್ಯಾಂಡ್‌ನ ಮಾಜಿ ಕ್ರಿಕೆಟರ್ ರಾಸ್ ಟೇಲರ್, ಶ್ರೇಯಸ್ ಅಯ್ಯರ್ ಅವರ ನಾಯಕತ್ವ PBKSಗೆ ಐಪಿಎಲ್ ಟ್ರೋಫಿ ಗೆಲ್ಲಿಸಬಹುದಾದ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ಇಂದಿನವರೆಗೆ ಐಪಿಎಲ್ ಟ್ರೋಫಿ ಗೆಲ್ಲಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಈ ಕನಸು ನನಸು ಆಗುತ್ತಾ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿದೆ.