ಸೂಪರ್ ಫಾಸ್ಟ್ : ದಿನದ ಪ್ರಮುಖ ಸುದ್ದಿಗಳು
0.1 ‘ಐದು ಜಿಲ್ಲೆಗಳಲ್ಲಿ ವೇಗ ಪಡೆದ ಕೊರೊನಾ’
ಕೊವಿಡ್ ಮೂರನೆ ಅಲೆ ನಿರೀಕ್ಷೆಯಂತೆ, ವೇಗವಾಗಿ ಹರಡುತ್ತಿದೆ. 3.95 % ರಷ್ಟು ಪಾಸಿಟಿವಿಟಿ ಕಂಡುಬಂದಿದೆ. ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ಐದು ಜಿಲ್ಲೆಗಳಲ್ಲಿ ಕರೋನಾ ವೇಗವಾಗಿ ಹರಡುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಕಾರ್ಯ ನಿರ್ವಹಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.
0.2 ‘ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ’
ಕೋಲಾರ : ಅದು ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ ಎಂದು ಸಚಿವ ಮುನಿರತ್ನ ಕಿಡಿಕಾರಿದ್ದಾರೆ. ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಇದೇ ಜನವರಿ 9 ರಂದು ಪಾದಯಾತ್ರೆ ನಡೆಸಲಿದೆ. ಈ ಬಗ್ಗೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ಅದು ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ. ಮೇಕೆದಾಟು ಯೋಜನೆ ಅದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಟಾನ ಮಾಡಿಲ್ಲ ಎಂದು ಪ್ರಶ್ನಿಸಿ, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೇಕೆ ನಾಟಕ ಎಂದು ವ್ಯಂಗ್ಯವಾಡಿದರು.
0.3 ಮಂಡ್ಯದಲ್ಲಿ ಕೊರೊನಾ ಸ್ಪೋಟ – 144 ಸೆಕ್ಷನ್
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿದ್ದರಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಮಾಡಲಾಗಿದೆ. ಇದು ಇಂದಿನಿಂದ ಜ. 19ರ ವರೆಗೆ ನಿಷೇಧಾಜ್ಞೆ ಜಾರಿಯಾಗಲಿದೆ. ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿಯಿಂದ ಆದೇಶ ಹೊರಡಿಸಿದ್ದಾರೆ.
0.4 ದೇಶದಲ್ಲಿ ಕರೋನಾ ಬ್ಲಾಸ್ಟ್
ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ಅಬ್ಬರ ಜೋರಾಗಿದೆ. ಕಳೆದ 10 ದಿನಗಳಲ್ಲಿ 9 ಸಾವಿರ ಕೇಸ್ ಗಳಿಂದ 1 ಲಕ್ಷಕ್ಕೆ ಏರಿಕೆಯಾಗಿದೆ. ಗುರುವಾರ 90 ಸಾವಿರದ ಗಡಿದಾಟಿದ್ದ ಕೋವಿಡ್ -19 ಕೇಸ್ ಗಳ ಸಂಖ್ಯೆ ಇಂದು 1 ಲಕ್ಷದ ಗಡಿ ದಾಟಿದೆ ಒಟ್ಟು ಇಂದು ದೇಶದಾದ್ಯಂತ 1 ಲಕ್ಷ 17 ಸಾವಿರ ಕೇಸ್ ಗಳು ಪತ್ತೆಯಾಗಿವೆ.
0.5 ಮೂವರು ಭಯೋತ್ಪಾದಕರ ಎನ್‌ಕೌಂಟರ್
ಶ್ರೀನಗರ: ನಿನ್ನೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ನಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಮೂವರು ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಲಾಗಿದ್ದು ಉಗ್ರರಿಂದ 3 ಎಕೆ-56 ರೈಫಲ್‌ಗಳು, 8 ಮ್ಯಾಗಜೀನ್‌ಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯ್ ಕುಮಾರ್ ಕಾಶ್ಮೀರ ಐಜಿಪಿ ಹೇಳಿದ್ದಾರೆ.
0.6 ‘ಲಸಿಕಾಕರಣದಲ್ಲಿ ಐತಿಹಾಸಿಕ ಮೈಲಿಗಲ್ಲು’
ದೇಶದಲ್ಲಿ ಕೋವಿಡ್-19 ಲಸಿಕೆ ಅಭಿಯಾನದಡಿಯಲ್ಲಿ ನೀಡಲಾದ ಡೋಸ್‌ಗಳ ಸಂಖ್ಯೆ ಶುಕ್ರವಾರ 150 ಕೋಟಿ ಗಡಿ ದಾಟಿದೆ. ಈ ಮೈಲಿಗಲ್ಲಿನ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ 2.20 ರ ಹೊತ್ತಿಗೆ ಅರ್ಹ ಫಲಾನುಭವಿಗಳಿಗೆ 1,50,17,23,911 ಡೋಸ್ ಲಸಿಕೆಗಳನ್ನು ನೀಡಲಾಗಿದೆ.
0.7 ಮಹೇಶ್ ಬಾಬುಗೆ ಕೋವಿಡ್
ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಅವರೇ ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಆತಂಕಗೊಂಡಿದ್ದು , ಮಹೇಶ್ ಬಾಬು ಅವರು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ.
0.8 ‘RRR ಸಿನಿಮಾ ರಿಲೀಸ್ ಆಗಬಾರದು’…
RRR ಸಿನಿಮಾ ರಿಲೀಸ್ ಆಗಲೇಬಾರದು ಎಂದು ವಿದ್ಯಾರ್ಥಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.. ಆಂಧ್ರಪ್ರದೇಶದ ವಿದ್ಯಾರ್ಥಿನಿ ಅಲ್ಲೂರಿ ಸೌಮ್ಯ ಎಂಬಾಕೆ ತೆಲಗಾಣ ಹೈಕೋರ್ಟ್ನಲ್ಲಿ RRR ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಅಭಿಮಾನಿಗಳಲ್ಲಿ ಆಶ್ಚರ್ಯವಾಗಿದೆ.
ಈ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಂ ಭೀಮ್ ಪಾತ್ರ ಬರುತ್ತದೆ. ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ ಎಂದು ಆರೋಪಿಸಿ ಸಿನಿಮಾ ತಡೆಯಾಜ್ಞೆಗೆ ಕೋರಿದ್ದಾರೆ.
0.9 ‘ಪುಷ್ಪ’ಗೆ ಅಮೇಜಾನ್ ಕೊಟ್ಟಿದ್ದೆಷ್ಟು..
ಡಿಸೆಂಬರ್ 24 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿಧೂಳೆಬ್ಬಿಸಿದ್ದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಇಂದು (ಜನವರಿ 7ಕ್ಕೆ) ಅಮೆಜಾನ್ ಪ್ರೈಮ್ ನಲ್ಲಿ ಐದೂ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಈ ಸಿನಿಮಾಗೆ ಅಮೇಜಾನ ಬರೊಬ್ಬರಿ 30ಕೋಟಿ ರುಪಾಯಿ ಕೊಟ್ಟು ಖರೀದಿಸಿದೆ ಎನ್ನಲಾಗತಿದೆ
10 ಜಯದ ಹುಡುಕಾಟದಲ್ಲಿ ವಾರಿಯರ್ಸ್ ಮತ್ತು ಸ್ಟೀಲರ್ಸ್
ಪ್ರೊ ಕಬಡ್ಡಿ ಲೀಗ್ ನ ಎಂಟನೇ ಆವೃತ್ತಿಯ 38ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳು ಕಾದಾಟ ನಡೆಸಲಿದ್ದು, ಉಭಯ ತಂಡಗಳು ಗೆಲುವಿಗಾಗಿ ರಣತಂತ್ರ ಹೆಣೆದುಕೊಂಡಿವೆ. ಬೆಂಗಾಲ ಪರ ರೈಡಿಂಗ್ ನಲ್ಲಿ ಮಣಿಂದರ್ ಸಿಂಗ್ ಮಿಂಚಲಿದ್ದರೆ, ಡಿಪೆಂಡಿಂಗ್ ನಲ್ಲಿ ದರ್ಶನ್ ಜೆ., ಮಹೇಂದ್ರ ಸಿಂಗ್ ಆಡಲಿದ್ದಾರೆ. ಇನ್ನೂ ಹರಿಯಾಣದ ಪರ ರೈಡಿಂಗ್ ನಲ್ಲಿ ವಿಕಾಸ್ ಕಂಡೊಲಾ, ಮೀತು, ರೋಹಿತ್ ಗುಲಿಯಾ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಡಿಪೆಂಡಿಂಗ್ ನಲ್ಲಿ ಸುರೇಂದ್ರ ನಾಡಾ, ಜೈದೀಪ್ ತಂಡದ ಬಲ ತುಂಬಲಿದ್ದಾರೆ. ಒಟ್ಟಾರೆಯಾಗಿ ಇಂದಿನ ಪಂದ್ಯ ಹೈ ಓಲ್ಟೇಜ್ ನಿಂದ ಕೂಡಿದ್ದು ಪ್ರೇಕ್ಷಕರು ಕಾತೂರೆತೆಯಿಂದ ಕಾಯುತ್ತಿದ್ದಾರೆ.