ADVERTISEMENT
Tuesday, September 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೂಪರ್ ಫಾಸ್ಟ್ : ದಿನದ ಪ್ರಮುಖ ಸುದ್ದಿಗಳು

Namratha Rao by Namratha Rao
January 7, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸೂಪರ್ ಫಾಸ್ಟ್ : ದಿನದ ಪ್ರಮುಖ ಸುದ್ದಿಗಳು

0.1 ‘ಐದು ಜಿಲ್ಲೆಗಳಲ್ಲಿ ವೇಗ ಪಡೆದ ಕೊರೊನಾ’

Related posts

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

September 1, 2026
ಕಾವೇರಿ ನೀರು ವಿವಾದ: CWRCಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ಕಾವೇರಿ ನೀರು ವಿವಾದ: CWRCಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

September 1, 2026

ಕೊವಿಡ್ ಮೂರನೆ ಅಲೆ ನಿರೀಕ್ಷೆಯಂತೆ, ವೇಗವಾಗಿ ಹರಡುತ್ತಿದೆ. 3.95 % ರಷ್ಟು ಪಾಸಿಟಿವಿಟಿ ಕಂಡುಬಂದಿದೆ. ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.  ಐದು ಜಿಲ್ಲೆಗಳಲ್ಲಿ ಕರೋನಾ ವೇಗವಾಗಿ ಹರಡುತ್ತಿದೆ.  ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಕಾರ್ಯ ನಿರ್ವಹಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.

0.2 ‘ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ’

ಕೋಲಾರ : ಅದು ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ ಎಂದು ಸಚಿವ ಮುನಿರತ್ನ ಕಿಡಿಕಾರಿದ್ದಾರೆ. ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಇದೇ ಜನವರಿ 9 ರಂದು ಪಾದಯಾತ್ರೆ ನಡೆಸಲಿದೆ. ಈ ಬಗ್ಗೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ,  ಅದು ಮೇಕೆದಾಟಲ್ಲ ಮೇಕೆ ನಾಟಕ ಪಾದಯಾತ್ರೆ. ಮೇಕೆದಾಟು ಯೋಜನೆ ಅದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾಕೆ ಅನುಷ್ಟಾನ ಮಾಡಿಲ್ಲ ಎಂದು ಪ್ರಶ್ನಿಸಿ, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೇಕೆ ನಾಟಕ ಎಂದು ವ್ಯಂಗ್ಯವಾಡಿದರು.

0.3 ಮಂಡ್ಯದಲ್ಲಿ ಕೊರೊನಾ ಸ್ಪೋಟ – 144 ಸೆಕ್ಷನ್

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿದ್ದರಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಮಾಡಲಾಗಿದೆ. ಇದು ಇಂದಿನಿಂದ ಜ. 19ರ ವರೆಗೆ ನಿಷೇಧಾಜ್ಞೆ ಜಾರಿಯಾಗಲಿದೆ. ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿಯಿಂದ ಆದೇಶ ಹೊರಡಿಸಿದ್ದಾರೆ.

0.4 ದೇಶದಲ್ಲಿ ಕರೋನಾ ಬ್ಲಾಸ್ಟ್

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ಅಬ್ಬರ ಜೋರಾಗಿದೆ. ಕಳೆದ 10 ದಿನಗಳಲ್ಲಿ 9 ಸಾವಿರ ಕೇಸ್ ಗಳಿಂದ 1 ಲಕ್ಷಕ್ಕೆ ಏರಿಕೆಯಾಗಿದೆ. ಗುರುವಾರ 90 ಸಾವಿರದ ಗಡಿದಾಟಿದ್ದ ಕೋವಿಡ್ -19 ಕೇಸ್ ಗಳ ಸಂಖ್ಯೆ ಇಂದು 1 ಲಕ್ಷದ ಗಡಿ ದಾಟಿದೆ ಒಟ್ಟು ಇಂದು ದೇಶದಾದ್ಯಂತ  1 ಲಕ್ಷ 17 ಸಾವಿರ ಕೇಸ್ ಗಳು ಪತ್ತೆಯಾಗಿವೆ.

0.5 ಮೂವರು ಭಯೋತ್ಪಾದಕರ  ಎನ್‌ಕೌಂಟರ್‌ 

ಶ್ರೀನಗರ: ನಿನ್ನೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ನಲ್ಲಿ  ಜೈಶ್-ಎ-ಮೊಹಮ್ಮದ್ (ಜೆಇಎಂ)ನ  ಮೂವರು ಭಯೋತ್ಪಾದಕರನ್ನು ಎನ್‌ಕೌಂಟರ್‌ ಮಾಡಲಾಗಿದ್ದು ಉಗ್ರರಿಂದ 3 ಎಕೆ-56 ರೈಫಲ್‌ಗಳು, 8 ಮ್ಯಾಗಜೀನ್‌ಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯ್ ಕುಮಾರ್ ಕಾಶ್ಮೀರ ಐಜಿಪಿ ಹೇಳಿದ್ದಾರೆ.

0.6 ‘ಲಸಿಕಾಕರಣದಲ್ಲಿ ಐತಿಹಾಸಿಕ ಮೈಲಿಗಲ್ಲು’

ದೇಶದಲ್ಲಿ ಕೋವಿಡ್-19 ಲಸಿಕೆ ಅಭಿಯಾನದಡಿಯಲ್ಲಿ ನೀಡಲಾದ ಡೋಸ್‌ಗಳ  ಸಂಖ್ಯೆ ಶುಕ್ರವಾರ 150 ಕೋಟಿ ಗಡಿ ದಾಟಿದೆ.  ಈ ಮೈಲಿಗಲ್ಲಿನ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು  ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ 2.20 ರ ಹೊತ್ತಿಗೆ ಅರ್ಹ ಫಲಾನುಭವಿಗಳಿಗೆ 1,50,17,23,911 ಡೋಸ್ ಲಸಿಕೆಗಳನ್ನು ನೀಡಲಾಗಿದೆ.

0.7 ಮಹೇಶ್ ಬಾಬುಗೆ ಕೋವಿಡ್

ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಅವರೇ ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಆತಂಕಗೊಂಡಿದ್ದು , ಮಹೇಶ್ ಬಾಬು ಅವರು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ.

0.8 ‘RRR ಸಿನಿಮಾ ರಿಲೀಸ್ ಆಗಬಾರದು’…

RRR ಸಿನಿಮಾ ರಿಲೀಸ್ ಆಗಲೇಬಾರದು ಎಂದು ವಿದ್ಯಾರ್ಥಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.. ಆಂಧ್ರಪ್ರದೇಶದ ವಿದ್ಯಾರ್ಥಿನಿ ಅಲ್ಲೂರಿ ಸೌಮ್ಯ ಎಂಬಾಕೆ ತೆಲಗಾಣ ಹೈಕೋರ್ಟ್ನಲ್ಲಿ RRR ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಅಭಿಮಾನಿಗಳಲ್ಲಿ ಆಶ್ಚರ್ಯವಾಗಿದೆ.

ಈ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಂ ಭೀಮ್ ಪಾತ್ರ ಬರುತ್ತದೆ. ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ ಎಂದು ಆರೋಪಿಸಿ ಸಿನಿಮಾ ತಡೆಯಾಜ್ಞೆಗೆ ಕೋರಿದ್ದಾರೆ.

0.9 ‘ಪುಷ್ಪ’ಗೆ ಅಮೇಜಾನ್ ಕೊಟ್ಟಿದ್ದೆಷ್ಟು..

ಡಿಸೆಂಬರ್ 24 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿಧೂಳೆಬ್ಬಿಸಿದ್ದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಇಂದು (ಜನವರಿ 7ಕ್ಕೆ) ಅಮೆಜಾನ್ ಪ್ರೈಮ್ ನಲ್ಲಿ ಐದೂ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಈ ಸಿನಿಮಾಗೆ ಅಮೇಜಾನ ಬರೊಬ್ಬರಿ 30ಕೋಟಿ ರುಪಾಯಿ ಕೊಟ್ಟು ಖರೀದಿಸಿದೆ ಎನ್ನಲಾಗತಿದೆ

10 ಜಯದ ಹುಡುಕಾಟದಲ್ಲಿ ವಾರಿಯರ್ಸ್ ಮತ್ತು ಸ್ಟೀಲರ್ಸ್

ಪ್ರೊ ಕಬಡ್ಡಿ ಲೀಗ್ ನ ಎಂಟನೇ ಆವೃತ್ತಿಯ 38ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳು ಕಾದಾಟ ನಡೆಸಲಿದ್ದು, ಉಭಯ ತಂಡಗಳು ಗೆಲುವಿಗಾಗಿ ರಣತಂತ್ರ ಹೆಣೆದುಕೊಂಡಿವೆ. ಬೆಂಗಾಲ ಪರ ರೈಡಿಂಗ್ ನಲ್ಲಿ ಮಣಿಂದರ್ ಸಿಂಗ್ ಮಿಂಚಲಿದ್ದರೆ, ಡಿಪೆಂಡಿಂಗ್ ನಲ್ಲಿ ದರ್ಶನ್ ಜೆ., ಮಹೇಂದ್ರ ಸಿಂಗ್ ಆಡಲಿದ್ದಾರೆ. ಇನ್ನೂ ಹರಿಯಾಣದ ಪರ ರೈಡಿಂಗ್ ನಲ್ಲಿ ವಿಕಾಸ್ ಕಂಡೊಲಾ, ಮೀತು, ರೋಹಿತ್ ಗುಲಿಯಾ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಡಿಪೆಂಡಿಂಗ್ ನಲ್ಲಿ ಸುರೇಂದ್ರ ನಾಡಾ, ಜೈದೀಪ್ ತಂಡದ ಬಲ ತುಂಬಲಿದ್ದಾರೆ. ಒಟ್ಟಾರೆಯಾಗಿ ಇಂದಿನ ಪಂದ್ಯ ಹೈ ಓಲ್ಟೇಜ್ ನಿಂದ ಕೂಡಿದ್ದು ಪ್ರೇಕ್ಷಕರು ಕಾತೂರೆತೆಯಿಂದ ಕಾಯುತ್ತಿದ್ದಾರೆ.

Tags: #Saaksha TVCinemainternational newsnational newspoliticsSportsState News
ShareTweetSendShare
Join us on:

Related Posts

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

ಹಿಟ್ ಅಂಡ್ ರನ್ ಪಾಲಿಟಿಕ್ಸ್ ಬಿಡಿ- ಕೆಪಿಎಸ್ ಸಿ ಅಕ್ರಮ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಹೆಚ್ ಡಿ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಓಪನ್ ಚಾಲೆಂಜ್

by Shwetha
September 1, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಗಂಭೀರ ಆರೋಪಕ್ಕೆ ಗ್ರಾಮೀಣಾಭಿವೃದ್ಧಿ...

ಕಾವೇರಿ ನೀರು ವಿವಾದ: CWRCಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ಕಾವೇರಿ ನೀರು ವಿವಾದ: CWRCಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

by Shwetha
September 1, 2026
0

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ಪರಿಷ್ಕೃತ ಮಾಹಿತಿಯನ್ನು ಸಲ್ಲಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಗೆ ಸುಪ್ರೀಂ...

ರಾಜ್ಯದಲ್ಲಿ ವೈರಲ್ ಜ್ವರ ಹೆಚ್ಚಳ; ಮಕ್ಕಳಲ್ಲಿ ಕಾಲು-ಬಾಯಿ ಬೇನೆ ಸೋಂಕು ಏರಿಕೆ

ರಾಜ್ಯದಲ್ಲಿ ವೈರಲ್ ಜ್ವರ ಹೆಚ್ಚಳ; ಮಕ್ಕಳಲ್ಲಿ ಕಾಲು-ಬಾಯಿ ಬೇನೆ ಸೋಂಕು ಏರಿಕೆ

by Shwetha
September 1, 2026
0

ರಾಜ್ಯದಲ್ಲಿ ವೈರಲ್ ಜ್ವರದ ಪ್ರಕರಣಗಳ ಜೊತೆಗೆ ಮಕ್ಕಳಲ್ಲಿ ಕಾಲು-ಬಾಯಿ ಬೇನೆ (Hand, Foot and Mouth Disease - HFMD) ಸೋಂಕಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ವಿಶೇಷವಾಗಿ ಐದು...

ರಾಹುಲ್ ಪ್ರಧಾನಿ ಅಭ್ಯರ್ಥಿಯಾಗದಿದ್ದರೆ ಮೈತ್ರಿ ಕಟ್:ಮೈತ್ರಿಗೆ ಕುತ್ತು ತರುತ್ತಾ ಪ್ರಧಾನಿ ಪಟ್ಟ? ವಿಜಯ್ ಕ್ಯಾಬಿನೆಟ್‌ಗೆ ಕೈಕೊಡಲು ಸಿದ್ಧವಾಯ್ತಾ ಕಾಂಗ್ರೆಸ್?

ರಾಹುಲ್ ಪ್ರಧಾನಿ ಅಭ್ಯರ್ಥಿಯಾಗದಿದ್ದರೆ ಮೈತ್ರಿ ಕಟ್:ಮೈತ್ರಿಗೆ ಕುತ್ತು ತರುತ್ತಾ ಪ್ರಧಾನಿ ಪಟ್ಟ? ವಿಜಯ್ ಕ್ಯಾಬಿನೆಟ್‌ಗೆ ಕೈಕೊಡಲು ಸಿದ್ಧವಾಯ್ತಾ ಕಾಂಗ್ರೆಸ್?

by Shwetha
September 1, 2026
0

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಈಗ 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ದೊಡ್ಡ ಮಟ್ಟದ ಸಂಘರ್ಷ ಶುರುವಾಗಿದೆ. ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು...

ಚುನಾವಣೆಗಳು ತುಂಬಾ ದುಬಾರಿಯಾಗಿವೆ-ನನಗೀಗ 80 ವರ್ಷ ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ:ಇನ್ನು ಸಾಕು ಎಲೆಕ್ಷನ್ ರಾಜಕೀಯ ಎಂದ ಸಿದ್ದರಾಮಯ್ಯ

ಚುನಾವಣೆಗಳು ತುಂಬಾ ದುಬಾರಿಯಾಗಿವೆ-ನನಗೀಗ 80 ವರ್ಷ ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ:ಇನ್ನು ಸಾಕು ಎಲೆಕ್ಷನ್ ರಾಜಕೀಯ ಎಂದ ಸಿದ್ದರಾಮಯ್ಯ

by Shwetha
September 1, 2026
0

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಭವಿಷ್ಯದ ಕುರಿತು ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘೋಷಣೆಯೊಂದನ್ನು ಮಾಡಿದ್ದಾರೆ. ಇನ್ಮುಂದೆ ತಾವು ಯಾವುದೇ ವಿಧಾನಸಭಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram