ಕ್ರಿಸ್‌ಮಸ್ ಸಂತೋಷ ಹರಡಲು ಬಂದ ಸಾಂತಾ ಕ್ಲಾಸ್ ವೇಷಧಾರಿಯಿಂದ 75 ವೃದ್ಧರಿಗೆ ಸೋಂಕು
ಬೆಲ್ಜಿಯಂ, ಡಿಸೆಂಬರ್15: ಕ್ರಿಸ್‌ಮಸ್ ಸಂತೋಷವನ್ನು ಹರಡಲು ಸಾಂತಾ ಕ್ಲಾಸ್ ವೇಷ ಧರಿಸಿದ್ದ ಬೆಲ್ಜಿಯಂನ ವ್ಯಕ್ತಿಯೊಬ್ಬರಿಂದ, ವೃದ್ಧಾಶ್ರಮದಲ್ಲಿದ್ದ 75 ಜನರಿಗೆ ಅಜಾಗರೂಕತೆಯಿಂದ ಕೋವಿಡ್-19 ಸೋಂಕು ತಗುಲಿದ್ದು, ನಂತರ ‘ಸೂಪರ್ ಸ್ಪ್ರೆಡರ್’ ಎಂದು ಹಣೆಪಟ್ಟಿ ಕಟ್ಟಲಾಯಿತು.

ವರದಿಗಳ ಪ್ರಕಾರ, ಹೆಸರಿಸದ ವ್ಯಕ್ತಿಯೊಬ್ಬರು ಸಾಂತಾ ಕ್ಲಾಸ್ ವೇಷ ಧರಿಸಿ ಬೆಲ್ಜಿಯಂನ ಮೋಲ್ನಲ್ಲಿರುವ ಹೆಮೆಲ್ರಿಜ್ಕ್ ವಯಸ್ಸಾದ ಆರೈಕೆ ಮನೆಗೆ ಭೇಟಿ ನೀಡಿ ಅದರ ನಿವಾಸಿಗಳು ಮತ್ತು ಸಿಬ್ಬಂದಿಯನ್ನು ರಂಜಿಸಿದರು. ಆದರೆ, ಅವರಿಗೆ ಈಗಾಗಲೇ ಕೊರೋನಾ ಸೋಂಕು ತಗುಲಿರುವುದು ತಿಳಿದಿರಲಿಲ್ಲ.
ವೃದ್ಧಾಶ್ರಮದ 150 ನಿವಾಸಿಗಳು ಸಾಂತಾ ಕ್ಲಾಸ್ ವೇಷ ಧರಿಸಿದ ವ್ಯಕ್ತಿಯನ್ನು ಸ್ವಾಗತಿಸಿದರು. ಭೇಟಿಯ ಸಮಯದಲ್ಲಿ ಎಲ್ಲವೂ ಸುಗಮವಾಗಿದ್ದರೂ, ಬಳಿಕ ಅವರಿಂದ 14 ಸಿಬ್ಬಂದಿ ಮತ್ತು 61 ನಿವಾಸಿಗಳಿಗೆ ಸೋಂಕು ತಗುಲಿರುವುದು ತಿಳಿದು ಬಂತು. ಅದರಲ್ಲಿ ಒಬ್ಬರಿಗೆ ಉಸಿರಾಟಕ್ಕೆ ಆಮ್ಲಜನಕದ ಬೆಂಬಲ ಅಗತ್ಯವಾಗಿತ್ತು.
ಅದೃಷ್ಟವಶಾತ್, ಇತರ ಸೋಂಕಿತ ಜನರಲ್ಲಿ ಯಾವುದೇ ಉಸಿರಾಟದ ತೊಂದರೆಗಳಿಲ್ಲದೆ, ಲಘು ಮಧ್ಯಮ ರೋಗಲಕ್ಷಣಗಳು ಮಾತ್ರ ಕಾಣಿಸಿಕೊಂಡಿತು.
ಭಾರತ್ ಮಾತಾ ಬಳಿ ಕ್ಷಮೆಯಾಚಿಸಿ ಭಾರತೀಯ ಸೇನೆ ಸೇರಲು ಬಯಸಿದ ಬಾಲಕಿ ಆತ್ಮಹತ್ಯೆ
ಭೇಟಿಯ ಕೇವಲ ಮೂರು ದಿನಗಳ ನಂತರ, ಸಾಂತಾ ಕ್ಲಾಸ್ ವೇಷ ಧರಿಸಿದ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರು ಮತ್ತು ಅವರನ್ನು ಪರೀಕ್ಷಿಸಿದಾಗ ಕೋವಿಡ್-19 ಸೋಂಕು ದೃಢಪಟ್ಟಿತು.
ವೃದ್ಧಾಶ್ರಮದ ನಿವಾಸಿಗಳು ಮತ್ತು ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿದ್ದರೂ, ಎಲ್ಲಾ ನಿವಾಸಿಗಳು ಮಾಸ್ಕ್ ಧರಿಸಲಿಲ್ಲ.
‘ಸಾಂತಾ’ ಮತ್ತು ಅವರ ಸಹಾಯಕರು ವಯಸ್ಸಾದ ಜನರ ಬಹಳ ಹತ್ತಿರ ನಿಂತಿದ್ದರು ಎಂದು ಕ್ರಿಸ್‌ಮಸ್ ಈವೆಂಟ್‌ನ ಫೋಟೊಗಳು ತೋರಿಸಿದೆ.
ಇದನ್ನು ಅತ್ಯುತ್ತಮ ಉದ್ದೇಶದಿಂದ ಆಯೋಜಿಸಲಾಗಿತ್ತು, ಆದರೆ ದುರದೃಷ್ಟವಶಾತ್ ಅದು ವೃದ್ಧಾಶ್ರಮಕ್ಕೆ ಬಹಳ ಕರಾಳ ದಿನವಾಯಿತು. ಸಂತ ನಿಕೋಲಸ್ ಪಾತ್ರವನ್ನು ನಿರ್ವಹಿಸಿದ ವ್ಯಕ್ತಿಗೆ, ಮತ್ತು ಸಂಘಟಕರಿಗೆ ಇದು ಬಹಳ ದೊಡ್ಡ ಮಾನಸಿಕ ಒತ್ತಡವಾಗಿದೆ ಎಂದು ಅಲ್ಲಿನ ಸಿಬ್ಬಂದಿ, ಮೋಲ್ನ ಮೇಯರ್, ವಿಮ್ ಕೇಯರ್ಸ್, ಬೆಲ್ಜಿಯಂನ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ದುರದೃಷ್ಟಕರ ಘಟನೆ ಬೆಲ್ಜಿಯಂನಲ್ಲಿ ಕೊರೋನವೈರಸ್ ಸೋಂಕಿನ ಎರಡನೇ ತರಂಗವನ್ನು ಕಾಣಿಸಿಕೊಂಡ ಕೆಲವೇ ದಿನಗಳ ನಂತರ ನಡೆದಿದೆ. ಈಗಿನಂತೆ, ಬೆಲ್ಜಿಯಂನಲ್ಲಿ 41,600 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಒಟ್ಟು 17,951 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








