`ಸಿದ್ದರಾಮಯ್ಯಗೆ ತಲೆ ಸರಿ ಇಲ್ಲ, ಜನ ಛೀ ಥೂ ಅಂತಾ ಉಗಿತ್ತಿದ್ದಾರೆ’ : ಕೆ.ಎಸ್.ಈಶ್ವರಪ್ಪ
ಚಿಕ್ಕೋಡಿ : ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಅಯೋಧ್ಯೆಯದ್ದು ವಿವಾದಿತ ಮಂದಿರ ಅಂತಾ ಹೇಳುತ್ತಿದ್ದಾರೆ.
ಈ ಕಾರಣಕ್ಕೆ ಅವರಿಗೆ ತಲೆ ಸರಿ ಇಲ್ಲ ಎನ್ನುವುದು ಅಂತಾ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಬೆಳಗಾವಿಯ ಕೌಲಗುಡ್ಡ ಕರಿಯೋಗಸಿದ್ದೇಶ್ವರ ಕನ್ನಡ ಮಾಧ್ಯಮಿಕ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ನಾನೊಬ್ಬ ವಕೀಲ ಅಂತಾ ಹೇಳಿಕೊಳ್ಳಲು ಅವರೊಗೆ ನಾಚಿಕೆಯಾಗಬೇಕು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ರಾಮ ಮಂದಿರದ ಜಾಗ ವಿವಾದಿತ ಎಂದು ಹೇಳುತ್ತಿರುವ ಅವರನ್ನ ರಾಜ್ಯದ ಜನ ಛೀ ಥೂ ಎಂದು ಉಗಿಯುತ್ತಿದ್ದಾರೆ ಎಂದು ಗುಡುಗಿದರು.
ವಿವಾದಿತ ಮಂದಿರಕ್ಕೆ ಹಣ ಕೊಡಲ್ಲ ಎಂದಿರುವ ಸಿದ್ದರಾಮಯ್ಯ, ಕೊಟ್ಟರೇ ಕೊಡ್ಲಿ ಬಿಟ್ಟಲೇ ಬಿಡ್ಲಿ. ಆದ್ರೆ ರಾಮ ಮಂದಿರಕ್ಕೆ ಹಣ ಕೊಡದೇ ಲೆಕ್ಕ ಕೇಳುತ್ತಾರೆ.
ದೇಶದ ಜನ ರಾಮನ ಬಗ್ಗೆ ಅಪಮಾನ ಮಾಡಿದ್ದಕ್ಕೆ ಕಾಂಗ್ರೆಸಿಗರನ್ನು ತಿರಸ್ಕಾರ ಮಾಡಿದ್ದಾರೆ. ಇನ್ನೆಷ್ಟು ದಿನ ಮಾತನಾಡುತ್ತಾರೆ ಮಾತನಾಡಲಿ ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ.
