ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ – ಫೆ16 ಕ್ಕೆ ಕೋರ್ಟ್ ತೀರ್ಪು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ತೀರ್ಪನ್ನು ಸೂರತ್ ಕೋರ್ಟ್ ಮಾರ್ಚ್ 16 ರಂದು ನೀಡಲಿದೆ. ‘ಮೋದಿ ಉಪನಾಮ ( ಸರ್ ನೇಮ್ _) ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳ ಮೇಲೆ ಗುಜರಾತ್ ಬಿಜೆಪಿ ಶಾಸಕರೊಬ್ಬರು 2019 ರಲ್ಲಿ ಮಾನನಷ್ಟ ಮೊಕದ್ದಮೆಯನ್ನ ಹೂಡಿದ್ದರು.
ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ, ರಾಹುಲ್ ಗಾಂಧಿ ಮಾತನಾಡುತ್ತಾ “ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ … ಅವರೆಲ್ಲರಿಗೂ ಮೋದಿ ಎಂಬುದು ಸಾಮಾನ್ಯ ಉಪನಾಮ ಹೇಗೆ ? ಎಲ್ಲಾ ಕಳ್ಳರು ಹೇಗೆ ಬಂದಿದ್ದಾರೆ ಎಂದು ಕೇಳಿದ್ದರು. ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಆರೋಪದ ಮೇಲೆ ಐಪಿಸಿ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ದೂರು ದಾಖಲಿಸಿದ್ದರು. ಇದರ ತೀರ್ಪನ್ನ ಸೂರತ್ ಕೋರ್ಟ್ 16ಕ್ಕೆ ಕಾಯ್ದಿರಿಸಿದೆ.
ರಾಹುಲ್ ಗಾಂಧಿ ತಮ್ಮ ಹೇಳಿಕೆಗಳ ಮೂಲಕ ಇಡೀ ಮೋದಿ ಸಮುದಾಯಕ್ಕೆ ಮಾನಹಾನಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇದಕ್ಕೂ ಮೊದಲು, ರಾಹುಲ್ ಗಾಂಧಿ ಅವರು ಅಕ್ಟೋಬರ್ 2019 ರಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು ಮತ್ತು ಅವರ ಹೇಳಿಕೆಗಳಿಗೆ ನಿರ್ದೋಷಿ ಎಂದು ಒಪ್ಪಿಕೊಂಡಿದ್ದರು.