ಬೆಳಗಾವಿ : ಕೇಂದ್ರ ಸಚಿವ ದಿವಂಗತ ಸುರೇಶ ಅಂಗಡಿಯವರು ಬದುಕುಳಿದಿದ್ರೆ ಎರಡ್ಮೂರು ತಿಂಗಳಲ್ಲಿ ದೊಡ್ಡ ಹುದ್ದೆಗೇರುತ್ತಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳುವ ಮೂಲಕ ಸುರೇಶ್ ಅಂಗಡಿ ಮುಂದಿನ ದಿನಗಳಲ್ಲಿ ರಾಜ್ಯದ ಸಿಎಂ ಆಗುತ್ತಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಗೋಕಾಕ್ ನಗರದಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸುರೇಶ್ ಅಂಗಡಿ ಅವರು ದೊಡ್ಡ ನಾಯಕರಾಗಿದ್ದರು.
ಇದನ್ನೂ ಓದಿ : ರೋಲ್ಸ್ ರಾಯ್ಸ್, ಫೆರಾರಿ, ಬೆಂಝ್ ಐಷಾರಾಮಿ ಕಾರುಗಳಿಗೆ ಎಂಟಿಬಿ ಪೂಜೆ
ಅವರು ಬದುಕಿಳಿದಿದ್ರೆ ಪಕ್ಷದಲ್ಲಿ ದೊಡ್ಡ ಹುದ್ದೆ ಸಿಗುತ್ತಿತ್ತು. ದುರ್ದೈವ ಅವರು ನಮ್ಮನ್ನಗಲಿದರು. ಒಳ್ಳೆಯವರನ್ನು ಆ ದೇವರು ಬೇಗ ಕರೆದುಕೊಳ್ಳುತ್ತಾನೆ. ಪಕ್ಷದಲ್ಲಿ ಅವರಿಗೆ ಉತ್ತಮ ಭವಿಷ್ಯವಿತ್ತು ಎಂದು ಸುರೇಶ್ ಅಂಗಡಿ ಅವರನ್ನು ಸ್ಮರಿಸಿದರು.
ಇನ್ನು ಇತ್ತೀಚೆಗೆ ಸುರೇಶ್ ಅಂಗಡಿ ಅವರ ಮಾವ ಲಿಂಗರಾಜ್ ಪಾಟೀಲ್, ಸುರೇಶ್ ಅಂಗಡಿ ಬದುಕಿ ಉಳಿದಿದ್ದರೆ ಮುಂದಿನ ದಿನಗಳಲ್ಲಿ ಅವರು ಸಿಎಂ ಆಗುತ್ತಿದ್ದರು ಎಂಬ ಹೇಳಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಗೆ ಶಾಕ್ : ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧ ಎಂದ ಹುಕ್ಕೇರಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel