ADVERTISEMENT
Monday, September 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

Shwetha by Shwetha
September 21, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜಾಜಿನಗರದ ಶಾಸಕ ಎಸ್ ಸುರೇಶ್ ಕುಮಾರ್ ಅವರು ಸಜ್ಜನ ಎಂಬ ಮುಖವಾಡ ಧರಿಸಿದ ದುರ್ಜನ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಕ್ಕೆ ನನ್ನನ್ನು ಹೊಲಸು ಬಾಯಿ ಎಂದು ಕರೆದ ಸುರೇಶ್ ಕುಮಾರ್ ಅವರಿಗೆ ಕನ್ನಡಿ ಹಿಡಿದಿರುವ ಹರಿಪ್ರಸಾದ್, ಮುನ್ನೂರು ಕೋಟಿ ರೂಪಾಯಿ ಟೆಂಡರ್ ಅಕ್ರಮದ ಗಂಭೀರ ಆರೋಪವನ್ನು ಹೊರಿಸಿದ್ದಾರೆ.

ನನ್ನ ರಾಜಕೀಯ ಜೀವನದಲ್ಲಿ ನಾನು ಕೈ ಮತ್ತು ಬಾಯಿ ಎರಡನ್ನೂ ಹೊಲಸು ಮಾಡಿಕೊಂಡಿಲ್ಲ. ಆದರೆ ಸುರೇಶ್ ಕುಮಾರ್ ಮಾತ್ರ ಭ್ರಷ್ಟಾಚಾರದ ಹೊಲಸಲ್ಲೇ ಹೊರಲಾಡುತ್ತಿದ್ದಾರೆ. ಇವರ ಮೈಗೆ ಅಂಟಿರುವ ಈ ಹೊಲಸನ್ನು ತೊಳೆಯಲು ವಿಶ್ವದ ಅತೀ ದೊಡ್ಡ ಕೊಳಚೆ ಸಂಸ್ಕರಣಾ ಘಟಕವಾದ ಈಜಿಪ್ಟ್ ನ ನ್ಯೂ ಡೆಲ್ಟಾ ಪ್ಲಾಂಟ್ ನಿಂದಲೂ ಸಾಧ್ಯವಿಲ್ಲ ಎಂದು ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ಬಿಜೆಪಿಯವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ನಡೆಸಿದ ವೈಯಕ್ತಿಕ ದಾಳಿಗಳು ಸಜ್ಜನ ಸುರೇಶ್ ಕುಮಾರ್ ಕಣ್ಣಿಗೆ ಬಿದ್ದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

Related posts

ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೊ ಅದನ್ನು ಕೊಡುವುದು ಧರ್ಮ:ಕಲೆಕ್ಷನ್ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿತು ಎಂದು ಶಿವಲಿಂಗೇಗೌಡರನ್ನು ಹಿಗ್ಗಾಮುಗ್ಗಾ ಜಾಡಿಸಿದ ಜೆಡಿಎಸ್ ಮತ್ತು ಬಿಜೆಪಿ

ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೊ ಅದನ್ನು ಕೊಡುವುದು ಧರ್ಮ:ಕಲೆಕ್ಷನ್ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿತು ಎಂದು ಶಿವಲಿಂಗೇಗೌಡರನ್ನು ಹಿಗ್ಗಾಮುಗ್ಗಾ ಜಾಡಿಸಿದ ಜೆಡಿಎಸ್ ಮತ್ತು ಬಿಜೆಪಿ

September 21, 2026
ಕರಾವಳಿ ಸಂಪುಟ ಸಭೆ ಕೇವಲ ಬೂಟಾಟಿಕೆ:ಮಂಗಳೂರು ರೈಲ್ವೆಗೆ ಮೋದಿ ಕೊಟ್ಟ ಕೊಡುಗೆ ಸ್ಮರಿಸದ ಕಾಂಗ್ರೆಸ್ -ಕೇರಳಕ್ಕೆ ಹೆದರಿ ಕೇಂದ್ರಕ್ಕೆ ಥ್ಯಾಂಕ್ಸ್ ಹೇಳದ DK ಸರ್ಕಾರ ಎಂದ ವಿ ಸೋಮಣ್ಣ

ಕರಾವಳಿ ಸಂಪುಟ ಸಭೆ ಕೇವಲ ಬೂಟಾಟಿಕೆ:ಮಂಗಳೂರು ರೈಲ್ವೆಗೆ ಮೋದಿ ಕೊಟ್ಟ ಕೊಡುಗೆ ಸ್ಮರಿಸದ ಕಾಂಗ್ರೆಸ್ -ಕೇರಳಕ್ಕೆ ಹೆದರಿ ಕೇಂದ್ರಕ್ಕೆ ಥ್ಯಾಂಕ್ಸ್ ಹೇಳದ DK ಸರ್ಕಾರ ಎಂದ ವಿ ಸೋಮಣ್ಣ

September 21, 2026

ಮುನ್ನೂರು ಕೋಟಿ ಟೆಂಡರ್ ಅಕ್ರಮದ ಗಂಭೀರ ಆರೋಪ

ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ನಿಧಿ ಹಾಗೂ ಪಾಲಿಕೆಯ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಸುರೇಶ್ ಕುಮಾರ್ ಅವರು ನಿಯಮಬಾಹಿರವಾಗಿ ಹಸ್ತಕ್ಷೇಪ ಮಾಡಿದ್ದಾರೆ. ಸುಮಾರು 300 ಕೋಟಿ ರೂಪಾಯಿ ಮೊತ್ತದ ಅಕ್ರಮ ಎಸಗಿರುವ ಬಗ್ಗೆ ಈಗಾಗಲೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. 2020ರಲ್ಲಿ ನಡೆದ 72.25 ಕೋಟಿ ರೂಪಾಯಿ ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಯಲ್ಲಿ, ಕಡಿಮೆ ಬಿಡ್ ಮಾಡಿದ್ದ ಅರ್ಹ ಗುತ್ತಿಗೆದಾರರನ್ನು ಕೈಬಿಟ್ಟು ತಮಗೆ ಬೇಕಾದವರಿಗೆ ಲಾಭ ಮಾಡಿಕೊಡಲು ಅಧಿಕಾರಿಗಳ ಮೇಲೆ ಶಾಸಕರು ಒತ್ತಡ ಹೇರಿದ್ದಾರೆ. ಇದು ಟಿವಿಸಿಸಿ ಮುಖ್ಯ ಎಂಜಿನಿಯರ್ ಕಚೇರಿಯ ಟಿಪ್ಪಣಿಯಲ್ಲೇ ದಾಖಲಾಗಿದೆ ಎಂದು ಹರಿಪ್ರಸಾದ್ ಸ್ಫೋಟಕ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ಮೋದಿ ಪಿಎಂ ಕೇರ್ಸ್ ಹಣ ನುಂಗಿದರೆ, ಅವರ ಅನುಯಾಯಿಯಾದ ಈ ದುರ್ಜನ ಶಾಸಕ ಮುಖ್ಯಮಂತ್ರಿಗಳ ನಿಧಿಯ ಹಣವನ್ನು ನುಂಗಿದ್ದಾರೆ. ಬರೀ ಸಜ್ಜನ ಎಂಬ ಬೋರ್ಡ್ ಹಾಕಿಕೊಂಡ ತಕ್ಷಣ ಯಾರೂ ಸಜ್ಜನರಾಗಲು ಸಾಧ್ಯವಿಲ್ಲ. ಲಂಚದ ಹಣಕ್ಕಾಗಿ ಸುರೇಶ್ ಕುಮಾರ್ ಅವರು ಇಡೀ ವ್ಯವಸ್ಥೆಯನ್ನೇ ಹೊಲಸು ಮಾಡಿದ್ದಾರೆ. ಜನರ ಹಣ ಮತ್ತು ಪ್ರಜಾಪ್ರಭುತ್ವದ ಪ್ರಶ್ನೆ ಬಂದಾಗ ಇಂತಹ ಮುಖವಾಡಗಳು ಕಳಚಿ ಬೀಳುವುದು ಗ್ಯಾರಂಟಿ ಎಂದು ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ರಾಜಾಜಿನಗರ ಶಾಸಕರ ವಿರುದ್ಧ ಹರಿಪ್ರಸಾದ್ ಅವರು ಬಹಿರಂಗ ಸಮರ ಸಾರಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ShareTweetSendShare
Join us on:

Related Posts

ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೊ ಅದನ್ನು ಕೊಡುವುದು ಧರ್ಮ:ಕಲೆಕ್ಷನ್ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿತು ಎಂದು ಶಿವಲಿಂಗೇಗೌಡರನ್ನು ಹಿಗ್ಗಾಮುಗ್ಗಾ ಜಾಡಿಸಿದ ಜೆಡಿಎಸ್ ಮತ್ತು ಬಿಜೆಪಿ

ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೊ ಅದನ್ನು ಕೊಡುವುದು ಧರ್ಮ:ಕಲೆಕ್ಷನ್ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿತು ಎಂದು ಶಿವಲಿಂಗೇಗೌಡರನ್ನು ಹಿಗ್ಗಾಮುಗ್ಗಾ ಜಾಡಿಸಿದ ಜೆಡಿಎಸ್ ಮತ್ತು ಬಿಜೆಪಿ

by Shwetha
September 21, 2026
0

ಹಾಸನ: ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ವಿಚಿತ್ರ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಈಗ ಲಂಚವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿ ಹೊಸ ವಿವಾದ ಮೈಮೇಲೆ...

ಕರಾವಳಿ ಸಂಪುಟ ಸಭೆ ಕೇವಲ ಬೂಟಾಟಿಕೆ:ಮಂಗಳೂರು ರೈಲ್ವೆಗೆ ಮೋದಿ ಕೊಟ್ಟ ಕೊಡುಗೆ ಸ್ಮರಿಸದ ಕಾಂಗ್ರೆಸ್ -ಕೇರಳಕ್ಕೆ ಹೆದರಿ ಕೇಂದ್ರಕ್ಕೆ ಥ್ಯಾಂಕ್ಸ್ ಹೇಳದ DK ಸರ್ಕಾರ ಎಂದ ವಿ ಸೋಮಣ್ಣ

ಕರಾವಳಿ ಸಂಪುಟ ಸಭೆ ಕೇವಲ ಬೂಟಾಟಿಕೆ:ಮಂಗಳೂರು ರೈಲ್ವೆಗೆ ಮೋದಿ ಕೊಟ್ಟ ಕೊಡುಗೆ ಸ್ಮರಿಸದ ಕಾಂಗ್ರೆಸ್ -ಕೇರಳಕ್ಕೆ ಹೆದರಿ ಕೇಂದ್ರಕ್ಕೆ ಥ್ಯಾಂಕ್ಸ್ ಹೇಳದ DK ಸರ್ಕಾರ ಎಂದ ವಿ ಸೋಮಣ್ಣ

by Shwetha
September 21, 2026
0

ಮಂಗಳೂರು: ಕರಾವಳಿ ಭಾಗದಲ್ಲಿ ರಾಜ್ಯ ಸರ್ಕಾರ ನಡೆಸಿದ ಸಚಿವ ಸಂಪುಟ ಸಭೆಯು ಕೇವಲ ಒಂದು ಬೂಟಾಟಿಕೆ ಮತ್ತು ಸಂಪೂರ್ಣವಾಗಿ ನಿಷ್ಪ್ರಯೋಜಕ ಎಂದು ಕೇಂದ್ರ ಸಚಿವ ವಿ ಸೋಮಣ್ಣ...

ಅಸಂಸ್ಕೃತ ವ್ಯಕ್ತಿಯನ್ನು 2 ಸಲ ಸಂಸದರನ್ನಾಗಿ ಮಾಡಿದ್ದು ಜನರ ದುರ್ದೈವ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಸಂವಿಧಾನದ ಪಾಠ ಮಾಡಿದ ಗೃಹ ಸಚಿವ

ಅಸಂಸ್ಕೃತ ವ್ಯಕ್ತಿಯನ್ನು 2 ಸಲ ಸಂಸದರನ್ನಾಗಿ ಮಾಡಿದ್ದು ಜನರ ದುರ್ದೈವ: ಮಾಜಿ ಸಂಸದ ಪ್ರತಾಪ್ ಸಿಂಹಗೆ ಸಂವಿಧಾನದ ಪಾಠ ಮಾಡಿದ ಗೃಹ ಸಚಿವ

by Shwetha
September 21, 2026
0

ಬೆಂಗಳೂರು: ಮೈಸೂರಿನ ಟಿ. ನರಸೀಪುರದಲ್ಲಿ ನಡೆದ ಗಣೇಶೋತ್ಸವ ಶೋಭಾಯಾತ್ರೆ ವೇಳೆ ಪೊಲೀಸ್ ಅಧಿಕಾರಿಗಳ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಗೃಹ...

ಹಾಸ್ಯನಟನ ಜೊತೆ ಸೇರಿ ಮೋದಿ ಮಿಮಿಕ್ರಿ ಮಾಡಿದ ರಾಹುಲ್-ಪ್ರಧಾನಿ ವ್ಯಕ್ತಿತ್ವಕ್ಕೆ ರಾಹುಲ್ ಗಾಂಧಿ ಅವಮಾನ: ಮೂರನೇ ದರ್ಜೆಯ ಅಸಭ್ಯ ನಡವಳಿಕೆ ಎಂದ ಬಿಜೆಪಿ

ಹಾಸ್ಯನಟನ ಜೊತೆ ಸೇರಿ ಮೋದಿ ಮಿಮಿಕ್ರಿ ಮಾಡಿದ ರಾಹುಲ್-ಪ್ರಧಾನಿ ವ್ಯಕ್ತಿತ್ವಕ್ಕೆ ರಾಹುಲ್ ಗಾಂಧಿ ಅವಮಾನ: ಮೂರನೇ ದರ್ಜೆಯ ಅಸಭ್ಯ ನಡವಳಿಕೆ ಎಂದ ಬಿಜೆಪಿ

by Shwetha
September 21, 2026
0

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ-ನುಡಿಗಳನ್ನು ಹಾಸ್ಯನಟನೊಬ್ಬನ ಜೊತೆ ಸೇರಿ ಲೇವಡಿ ಮಾಡಿರುವುದು ಈಗ ರಾಷ್ಟ್ರ ರಾಜಕಾರಣದಲ್ಲಿ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 21, 2026
0

ದಿನ ಭವಿಷ್ಯ: 21-09-2026 1. ಮೇಷ ರಾಶಿ ಇಂದು ನಿಮಗೆ ಅತ್ಯಂತ ಕ್ರಿಯಾಶೀಲವಾದ ದಿನವಾಗಲಿದೆ. ನಿಮ್ಮಲ್ಲಿರುವ ಹುಮ್ಮಸ್ಸು ನಿಮ್ಮ ಎಲ್ಲ ಕೆಲಸಗಳನ್ನು ವೇಗವಾಗಿ ಮುಗಿಸಲು ಸಹಾಯ ಮಾಡುತ್ತದೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram