Suresh Raina : ನಿವೃತ್ತಿ ಹಿಂಪಡೆಯಲು ನಾನು ಶಾಹಿದ್ ಅಫ್ರಿದಿ ಅಲ್ಲ – ಸುರೇಶ್ ರೈನಾ
ಲೆಜೆಂಡ್ ಕ್ರಿಕೆಟಿಗ , ಮಿಸ್ಟರ್ ಐಪಿಎಲ್ ಸುರೇಶ್ ರೈನಾ 2020ರ ಆಗಸ್ಟ್ 14ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. ನಂತರ ಐಪಿಎಲ್ 2022 ಟೂರ್ನಿ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಬದುಕಿಗೂ ವಿದಾಯ ಹೇಳಿದರು.
ಸುರೇಶ್ ರೈನಾ ಅಭಿಮಾನಿಗಳಿಗೆ ಇಂದಿಗೂ ಕಾಡುವ ಬೇಸರವೆಂದ್ರೆ 2022 ರಲ್ಲಿ ಕ್ರಿಕೆಟ್ ದಂತಕಥೆ ಸುರೇಶ್ ರೈನಾ ಅನ್ ಸೋಲ್ಡ್ ಆಗಿ ಉಳಿದಿದ್ದು. ಅದೂ ಕೂಡ ಕೊನೆಯ IPL ಆಡಬೇಕೆಂಬ ಯೋಜನೆಯಲ್ಲಿ ರೈನಾ ಇದ್ದಾಗ ಅನ್ ಸೋಲ್ಡ್ ಆಗಿದ್ದು ನಿಜಕ್ಕೂ ಅರಗಿಸಿಕೊಳ್ಳಲು ಆಗದ ಕಟು ಸತ್ಯ.
ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ನಿವೃತ್ತಿಯಿಂದ ಹೊರಬಂದು ಐಪಿಎಲ್ ಆಡಬಾರದೇ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ಈ ಪ್ರಶ್ನೆಗೆ ರೈನಾ ಸಖತ್ ಉತ್ತರವನ್ನೇ ಕೊಟ್ಟಿದ್ದಾರೆ.
36 ವರ್ಷದ ಎಡಗೈ ಬ್ಯಾಟರ್ ಸುರೇಶ್ ರೈನಾ , 2020ರ ಆಗಸ್ಟ್ 14ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರು.
ನಂತರ ಐಪಿಎಲ್ 2022 ಟೂರ್ನಿ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಬದುಕಿಗೂ ವಿದಾಯ ಹೇಳಿದರು.
ಸದ್ಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಸುರೇಶ್ ರೈನಾ, ಮಾರ್ಚ್ 15ರಂದು ನಡೆದ ವರ್ಲ್ಡ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲೂ ಬಿರುಸಿನ 49 ರನ್ ಸಿಡಿಸಿದರು.
ಇದರಲ್ಲಿ ಮೂರು ಸ್ಪೋಟಕ ಸಿಕ್ಸರ್ಗಳು ಕೂಡ ಮೂಡಿಬಂದವು. ಆದರೆ, ಪಂದ್ಯದಲ್ಲಿ ವರ್ಲ್ಡ್ ಜಯಂಟ್ಸ್ ಎದುರು ಇಂಡಿಯನ್ ಮಹಾರಾಜಾಸ್ ತಂಡ 7 ವಿಕೆಟ್ಗಳ ಸೋಲುಂಡಿತ್ತು.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ನಿಮ್ಮ ಆಟ ಕಂಡ ಎಲ್ಲರೂ ಹೇಳುತ್ತಿರುವುದು, ನೀವು ಐಪಿಎಲ್ ಗೆ ಕಮ್ಬ್ಯಾಕ್ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೈನಾ, ನಿವತ್ತಿ ಹಿಂಪಡೆಯಲು ನಾನು ಶಾಹಿದ್ ಅಫ್ರಿದಿ ಅಲ್ಲ, ನಾನು ಸುರೇಶ್ ರೈನಾ.. ನಿವೃತ್ತಿ ಕೊಟ್ಟಾಗಿದೆ. ಅದೇ ಅಂತಿಮ ಎಂದು ತಮಾಷೆ ಮಾಡಿದ್ದಾರೆ. ಇವರ ಹೇಳಿಕೆಯ ವಿಡಿಯೋ ಸೋಷಿಯ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಆಲ್ ರೌಂಡರ್ ಶಾಹಿದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್ ಗೆ ನಿವೃತ್ತಿ ನೀಡಿದ ಬಳಿಕವೂ ಕಮ್ ಬ್ಯಾಕ್ ಮಾಡಿ ಕ್ರಿಕೆಟ್ ಆಡಿದ್ದರು. ಈ ರೀತಿ ಮಾಡಲು ತಾವು ಅಫ್ರಿದಿ ಅಲ್ಲ ಸುರೇಶ್ ರೈನಾ ಎಂದು ಸುರೇಶ್ ರೈನಾ ವ್ಯಂಗ್ಯ ಮಾಡಿದ್ದಾರೆ.
Suresh Raina : I am not Shahid Afridi – Suresh Raina