ನೀರಿನ ದರ ಏರಿಕೆ : ರಾಜ್ಯ ಸರ್ಕಾರದ ವಿರುದ್ಧ ಸುರ್ಜೇವಾಲಾ ಕಿಡಿ
ಬೆಂಗಳೂರು : ರಾಜ್ಯ ಸರ್ಕಾರ ನೀರಿನ ಶುಲ್ಕ ಹೆಚ್ಚಿಸುವ ಮೂಲಕ ಜನರಿಗೆ ಡಬಲ್ ಶಾಕ್ ನೀಡಲು ಮುಂದಾಗಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೌಚಾಲಯದ ನೀರನ್ನು ಬಳಸಿ ಪಾನಿಪೂರಿ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ
ಈ ಕುರಿತು ಟ್ವೀಟ್ ಮಾಡಿರುವ ಅವರು, ಉಪಚುನಾವಣೆ ಮುಗಿದ ಬೆನ್ನಲ್ಲೇ ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರವು ಕರ್ನಾಟಕದ ಜನತೆಗೆ ಶಾಕ್ ನೀಡಿತ್ತು.
ಈಗ ನೀರಿನ ಶುಲ್ಕವನ್ನೂ ಹೆಚ್ಚಿಸುವ ಮೂಲಕ ‘ಡಬಲ್ ಶಾಕ್’ ಕೊಡಲು ಮುಂದಾಗಿದೆ. ಈ ನಿರ್ದಯಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವು, ಜನರ ಜೇಬಿನಿಂದ ಪ್ರತಿ ಪೈಸೆಯನ್ನೂ ಲೂಟಿ ಮಾಡಲು ಪಣ ತೊಟ್ಟು ನಿಂತಿದೆ ಎಂದು ದೂರಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಉಪಚುನಾವಣೆ ಮತದಾನ ಮುಗಿಯುತ್ತಿದ್ದಂತೆ ವಿದ್ಯುತ್ ದರ ಏರಿಕೆ ಮಾಡಿತ್ತು.
ತೋಂಟದ ಸಿದ್ದಲಿಂಗ ಮಠಕ್ಕೆ ಲಿಂಗಾಯತ ಮಠಾಧೀಶರ ದೌಡು, ವಿನಯ್ ಕುಲಕರ್ಣಿ ಪರ ಬ್ಯಾಟಿಂಗ್..!
ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಖಂಡನೆ ವ್ಯಕ್ತಪಡಿಸಿದಾರೆ. ಇದೀಗ ಸರ್ಕಾರ ನೀರಿನ ದರವನ್ನೂ ಹೆಚ್ಚಿಸ್ತಿರೋದಕ್ಕೆ ಈ ಟ್ವೀಟ್ ಮೂಲಕ ಸುರ್ಜೇವಾಲಾ ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel