ಸುಶಾಂತ್ ಸಾವಿನ ಬಳಿಕ ಅತಿ ಹೆಚ್ಚು ಸುದ್ದಿಯಲ್ಲಿರುವುದು ಅವರ ಪ್ರೇಯಸಿ ರೆಹಾ ಚಕ್ರಬೊರ್ತಿ. ಅದ್ರಲ್ಲೂ ರೆಹಾ ವಿರುದ್ಧ ಸುಶಾಂತ್ ತಂದೆ ಕಳ್ಳತನ , ಮೋಸ , ಮಾನಸಿಕ ಕಿರುಕುಳದ ಆರೋಪ ಮಾಡಿ ಪಟ್ನಾ ಠಾಣೆ ಯಲ್ಲಿ ರೆಹಾ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದ್ದಾರೆ. ಅಷ್ಟೇ ಅಲ್ಲ ರೆಹಾ ವಿರುದ್ಧ ದೂರು ದಾಖಲಾಗಿದ್ದೇ ತಡ ನೆಟ್ಟಿಗರು ರೆಹಾ ಬಂಧನಕ್ಕೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಶುರು ಮಾಡಿಬಿಟ್ಟಿದ್ರು. ಇದಾದ ಬಳಿಕ ರೆಹಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು, ನನ್ನ ವಿರುದ್ಧ ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ. ಆದ್ರೆ ನಾನು ತಪ್ಪು ಮಾಡಿಲ್ಲ. ಸತ್ಯ ಜಯಿಸಲಿದೆ ಎಂದು ಹೇಳಿಕೊಂಡಿದ್ರು. ಆದ್ರೆ ಇದನ್ನೂ ನೆಟ್ಟಿಗರೂ ನಾಟಕ ಎಂದು ಟೀಕಿಸಿದ್ರು. ಇದಾದ ಬಳಿಕ ಇದೀಗ ರೆಹಾಳ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಸಂಚಲವನ್ನೇ ಸೃಷ್ಟಿ ಮಾಡಿದೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದ್ದು ರೆಹಾ ಮೇಲಿನ ಅನುಮಾನಕ್ಕೆ ನೀರೆರಿಯುವ ಕೆಲಸ ಮಾಡಿದೆ.
ಹೌದು ಈ ವಿಡಿಯೋದಲ್ಲಿ ರೆಹಾ “ನನ್ನ ಬಾಯ್ ಫ್ರೆಂಡ್ ( ಸುಶಾಂತ್) ನನ್ನ ಕೈಗೊಂಬೆ ಆತನನ್ನು ಹೇಗೆ ಬೇಕಾದರೂ ಆಟವಾಡಿಸುತ್ತೇನೆ ಎಂದು ಹೇಳಿದ್ದಾರೆ. ‘ರೌಡಿಗಳಿಂದಲೇ ಗೂಂಡಾಗಿರಿ ಮಾಡಿಸುವವಳು ನಾನು’ ನನ್ನ ಬಾಯ್ಫ್ರೆಂಡ್ ತಾನೊಬ್ಬ ರೌಡಿ ಎಂದುಕೊಂಡಿದ್ದಾನೆ. ಆದರೆ ನಾನು ಅಂಥಹಾ ರೌಡಿಗಳಿಗಳಿಂದ ಗೂಂಡಾಗಿರಿ ಮಾಡಿಸುವ ಛಾತಿ ಉಳ್ಳವಳು. ನನ್ನ ಬಾಯ್ಫ್ರೆಂಡ್ ಅನ್ನು ಕರೆಯುತ್ತೇನೆ. ನೋಡು ಆ ನಿರ್ಮಾಪಕನಿಂದ ಹಫ್ತಾ ವಸೂಲಿ ಮಾಡಿಕೊಂಡು ಬಾ ಎಂದು ಕಳಿಸುತ್ತೀನಿ” ಎಂದು ಹೇಳಿರುವ ವಿಡಿಯೋ ಇದೀಗ ಭಾರೀ ಸದ್ದು ಮಾಡ್ತಿದೆ. ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೆಹಾ ಹೇಳೋ ಕತೆಯೇ ಬೇರೆ. ಈ ಬಗ್ಗೆ ಮಾತನಾಡಿರುವ ರೆಹಾ ಈ ವಿಡಿಯೋ ನಾನು ಸ್ಟಾಂಡ್ ಅಪ್ ಕಾಮಿಡಿ ಮಾಡಿರುವುದು. ನನಗೆ ಸ್ಟಾಂಡ್ ಅಪ್ ಕಾಮಿಡಿ ಇಷ್ಟ. ಹೀಗಾಗಿ ನಾನೇ ಒಂದು ಪಾತ್ರ ಸೃಷ್ಟಿ ಮಾಡಿಕೊಂಡು ಮಾಡಿರುವ ಸ್ಟಾಂಡ್ ಅಪ್ ಕಾಮಿಡಿ ವಿಡಿಯೋ ಎಂದು ತಿಳಿಸಿದ್ದಾರೆ.
Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…
5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ... ನಮ್ಮ ಅಡುಗೆಮನೆಯಲ್ಲಿ ನೂರಾರು ವಸ್ತುಗಳು ಇವೆ....