ಇತ್ತೀಚೆಗಷ್ಟೇ ನಮ್ಮನ್ನೆಲ್ಲ ಅಗಲಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರು ಅಭಿಮಾನಿಗಳ ಮನಸಲ್ಲಿ ಸದಾ ಜೀವಂತವಾಗಿರುತ್ತಾರೆ. ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ ನಟಿಸಿದ್ರೂ ಅಪಾರ ಅಭಿಮಾನಿಗಳ ಮನಗೆದ್ದಿದ್ದ ಸುಶಾಂತ್ ಸಿಂಗ್ ಮಲಯಾಳಂನ ಸೂಪರ್ ಹಿಟ್ ಸಿನಿಮಾವನ್ನು ಬಾಲಿವುಡ್ ಗೆ ರಿಮೇಕ್ ಮಾಡುವ ಕನಸುಕಂಡಿದ್ದರು. ಮಲಯಾಳಂನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದ್ದ ಬೆಂಗಳೂರು ಡೇಸ್ ಸಿನಿಮಾವನ್ನು ಬಾಲಿವುಡ್ ಗೆ ರಿಮೇಕ್ ಮಾಡುವ ತಯಾರಿಯಲ್ಲಿದ್ದರಂತೆ. ಬೆಂಗಳೂರು ಡೇಸ್ ಸಿನಿಮಾ ನೋಡಿ ಸುಶಾಂತ್ ತುಂಬಾ ಇಷ್ಟ ಪಟ್ಟಿದ್ದರಂತೆ. ನಿವಿನ್ ಪೌಲಿ ಪಾತ್ರದಲ್ಲಿ ಮಿಂಚುವ ಕನಸು ಕಂಡಿದ್ದರಂತೆ ಸುಶಾಂತ್. ಬೆಂಗಳೂರು ಡೇಸ್ ಸಿನಿಮಾದ ನಿವಿನ್ ಪೌಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸುಶಾಂತ್ ಆಸೆ ಪಟ್ಟಿದ್ದರಂತೆ. ಚಿತ್ರದಲ್ಲಿ ನಿವೀನ್ ಎಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಶಾಂತ್ ಸಹ ಎಂಜಿನಿಯರ್ ಪಾತ್ರಕ್ಕೆ ಬಣ್ಣ ಹಚ್ಚು ಆಸೆ ಹೊಂದಿದ್ರು. ಈ ಬಗ್ಗೆ ಸುಶಾಂತ್ ಹಿಂದಿ ರಿಮೇಕ್ ಹಕ್ಕು ಹೊಂದಿದ್ದ ನಿರ್ಮಾಪಕ ವಿವೇಕ್ ರಂಗಾಚಾರಿ ಅವರೊಂದಿಗೆ ಮಾತುಕತೆ ಸಹ ನಡೆಸಿದ್ದರಂತೆ . ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದ, ದೊಡ್ಡ ತಾರಾಬಳಗವಿದ್ದ ಬೆಂಗಳೂರು ಡೇಸ್ ಸಿನಿಮಾದ
ರಿಮೇಕ್ ಮಾಡುವ ಕನಸಿನ ಜೊತೆಗೆ ಅನೇಕ ಕನಸನ್ನು ಹೊತ್ತಿದ್ದ ಸುಶಾಂತ್ ಸದ್ಯ ಇವೆಲ್ಲಕ್ಕೂ ಅರ್ಧದಲ್ಲೇ ನಾಂದಿ ಹಾಡಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು, ನೋವಿನ ಸಂಗತಿ.
ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...






