ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕಳೆದಂತೆಲ್ಲಾ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬಗೆದಷ್ಟೂ ಆಳಕ್ಕೆಲ್ಲಾ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಲೇ ಇದೆ. ಮೊದಲಿಗೆ ನೆಪೋಟಿಸಮ್, ಮೋವಿ ಮಾಫಿಯಾದಿಂದ ಸುಸಾಂತ್ ಸಾವಾಗಿದೆ ಅಂತಿದ್ದ ನೆಟ್ಟಿಗರೆಲ್ಲಾ, ಇತ್ತೀಚೆಗೆ ಸುಶಾಂತ್ ಪ್ರೇಯಸಿ ರೆಹಾಳೇ ಆತನ ಸಾವಿಗೆ ಕಾರಣ, ಆಕೆಯನ್ನು ಬಂಧಿಸಿ ಎನ್ನೋ ಟ್ರೆಂಡ್ ಶುರುಮಾಡಿಬಿಟ್ಟಿದ್ರು. ಇದಕ್ಕೆ ಬಲವಾದ ಕಾರಣವೂ ಇದೆ. ಯಾಕೆಂದ್ರೆ ಕೆಕೆ ಸಿಂಗ್ ( ಸುಶಾಂತ್ ತಂದೆ ) ರೆಹಾಳ ವಿರುದ್ಧ ಪಟ್ನಾ ಠಾಣೆಯಲ್ಲಿ ಕಳ್ಳತನ , ಮೋಸ, ಮಾನಸಿಕ ಕಿರುಕುಳದ ದೂರು ದಾಖಲಿಸಿದ ಬಳಿಕ ಎಲ್ಲರ ಚಿತ್ತ ರೆಹಾಳತ್ತ ನೆಟ್ಟಿಬಿಟ್ಟಿದೆ. ಇದಕ್ಕೂ ಮೀರಿದಂತೆ ರೆಹಾ ಮುಂಬೈ ನಿವಾಸದಿಂದ ಎಸ್ಕೇಪ್ ಆಗಿದ್ದ ಎಲ್ಲಾ ಅನುಮಾನಗಳಿಗೂ ಪುಷ್ಠಿ ನೀಡಿತ್ತು. ಇದೀಗ ಈ ಕೇಸ್ ನಲ್ಲಿ ಮತ್ತೊಂದು ಸಿಕ್ಕಿದೆ. ಇದೀಗ ಸುಶಾಂತ್ ಸಾವಿನ ದಿನ ಅಂದ್ರೆ ಜೂನ್ 14ರಂದು ನಿಜಕ್ಕೂ ಏನಾಯ್ತು ಎಂಬುದರ ಬಗ್ಗೆ ಸುಶಾಂತ್ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದವರು ಮಾಹಿತಿ ಬಿಚ್ಚಿಟ್ಟಿದ್ದಾರೆ.
ನೀರಜ್ ಹಾಗೂ ಕೇಶವ್ ಬಾಚ್ನರ್, ಮನೆಗೆಲಸ ಮಾಡುತ್ತಿದ್ದ, ದೀಪೇಶ್ ಮತ್ತು ಸಾವಂತ್ ಸುಶಾಂತ್ ರ ಮುಂಬೈನ ಬಾಂದ್ರಾ ನಿವಾಸದಲ್ಲೇ ಇದ್ದರು. ಸುಶಾಂತ್ ಜೊತೆಗೆ ಆ ಮನೆಯ ಮತ್ತೊಂದು ಕೋಣೆಯಲ್ಲಿ ಅವರ ಸ್ನೇಹಿತ ಸಿದ್ಧಾರ್ಥ್ ಸಹ ವಾಸವಾಗಿದ್ದರು ಎನ್ನಲಾಗಿದೆ. ಸುಶಾಂತ್ ಮನೆಯಲ್ಲಿ ಮೊದಲಿಗೆ 10ರಿಂದ 12 ಜನರು ವಾಸಿಸುತ್ತಿದ್ದರು. ಆದ್ರೆ ರೆಹಾ ಕೆಲವರನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾಗಿ ಸುಶಾಂತ್ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಹೇಳಿದ್ದಾರೆ.
ಇನ್ನೂ ಸುಶಾಂತ್ ಸಾವಿಗೂ ಕೆಲ ದಿನಗಳ ಹಿಂದೆ ಏನಾಗಿತ್ತು ಎನ್ನುವುದನ್ನೂ ನೀರಜ್ ತಿಳಿಸಿದ್ದಾರೆ. “ಸುಶಾಂತ್ ಸಾವಿಗೂ ಮೂರ್ನಾಲ್ಕು ದಿನಗಳ ಹಿಂದೆ ಮಧ್ಯಾಹ್ನದ ವೇಳೆಗೆ ರೆಹಾ ಸುಶಾಂತ್ ಮನೆ ಬಿಟ್ಟು ಹೊರಟು ಹೋಗಿದ್ದರು. ಬಳಿಕ ಬಳಿಕ ನನ್ನ ಬಟ್ಟೆಗಳನ್ನು ಪ್ಯಾಕ್ ಮಾಡು ಎಂದು ರೆಹಾ ನನ್ನ ಬಳಿ ಹೇಳಿದ್ರು. ಅದೇ ಸಂಜೆ 5ಗಂಟೆ ಸುಮಾರಿಗೆ ಮೀತು ಸಿಂಗ್ (ಸುಶಾಂತ್ ಸಹೋದರಿ) ಅವರು ಮನೆಗೆ ಬಂದಿದ್ದರು. ಅದಾದ ಬಳಿಕ ಮೂರು ದಿನಗಳ ವರೆಗೂ ಸುಸಾಂತ್ ಮನೆಯಲ್ಲೇ ಇದ್ದು, ಜೂನ್ 13 ಅಥವಾ 12ರಂದು ಸುಸಾಂತ್ ಮನೆಯಿಂದ ಹೊರಟು ಹೋದರು. ಜೂನ್ 13ರ ರಾತ್ರಿ ಸುಶಾಂತ್ ಊಟ ಮಾಡಿಲ್ಲ. . ಕೇವಲ ಮಾವಿನ ಹಣ್ಣಿನ ಜ್ಯೂಸ್ ಮಾತ್ರ ಸೇವಿಸಿದ್ರು. 14 ರಂದು ಬೆಳಗ್ಗೆ ಅವರು ತಮ್ಮ ಕೋಣೆಯಿಂದ ಹೊರಬಂದು ಕೋಲ್ಡ್ ವಾಟರ್ ಕೇಳಿದರು. ಆದರೆ ಅವರು ಆರೋಗ್ಯವಾಗಿರಲಿಲ್ಲ ಜೊತೆಗೆ ತುಂಬಾ ಟೆನ್ಷನ್ ಆಗಿದ್ದರು. ಎಳನೀರು, ಆರೆಂಜ್ ಜ್ಯೂಸ್ ಮತ್ತು ಬಾಳೆಹಣ್ಣು ಕೇಳಿದರು. ಎಳನೀರು ಮತ್ತು ಆರೆಂಜ್ ಜ್ಯೂಸ್ ಕುಡಿದು ಬಾಳೆಹಣ್ಣು ನಂತರ ತಿನ್ನುವುದಾಗಿ ಹೇಳಿದರು ” ಎಂದು ತಿಳಿಸಿದ್ದಾರೆ ನೀರಜ್.
ಇನ್ನೂ ಇದೇ ವಿಚಾರವಾಗಿ ಹೆಚ್ಚಿನ ಮಾಹಿತಿ ಬಿಚ್ಚಿಟ್ಟಿರುವ ನೀರಜ್ “ಕೇಶವ್ ( ಅಡುಗೆ ಕೆಲಸದವ) ಸುಶಾಂತ್ ರನ್ನು ಸರ್ ಅಡುಗೆಗೆ ಏನು ಮಾಡಬೇಕು ಎಂದು ಕೇಳಿದರು. ಆದ್ರೆ ಸುಶಾಂತ್ ಅವರು ಡೋರ್ ಲಾಕ್ ಮಾಡಿಕೊಂಡಿದ್ದರು. ಯಾವುದೇ ಉತ್ತರ ನೀಡಲಿಲ್ಲ. ಇದಾದ ಬಳಿಕ ನಾವು ಲಾಕ್ ಸ್ಮಿತ್ ರನ್ನು ಕರೆಸಿ ಬಾಗಿಲಿನ ಬೀಗ ಮುರಿಸಿದೆವು. ಅವರು ಬೀಗ ಮುರಿದು ಅಲ್ಲಿಂದ ಹೊರಟು ಹೋದರು. ಬಳಿಕ ಈ ಬಗ್ಗೆ ಅವರ ಸಹೋದರಿ ಮೀತು ಸಿಂಗ್ ಅವರಿಗೆ ತಿಳಿಸಿದೆವು. ಬಳಿಕ ಸಿದ್ಧಾರ್ಥ್ ( ಸುಶಾಂತ್ ಸ್ನೇಹಿತ) ಅವರು ಬಾಗಿಲು ತೆರೆದರು. ಆಗ ಸುಶಾಂತ್ ರ ದೇಹ ನೇತಾಡುತ್ತಿದ್ದನ್ನು ಕಂಡು ಎಲ್ಲರೂ ಆಘಾತಕ್ಕೊಳಗಾಗಿದ್ದೆವು. ಈ ವಿಚಾರವನ್ನು ಸುಸಾಂತ್ ಸಹೋದರಿಗೆ ತಿಳಿಸಿದೆವು. ಆಗ ಅವರು ಸುಶಾಂತ್ ದೇಹವನ್ನು ಕೆಳಗಿಳಿಸಲು ಹೇಳಿದ್ದರು. ನಾವು ಅವರ ದೇಹವನ್ನು ಕೆಳಗಿಳಿಸುವಷ್ಟರಲ್ಲಿ ಮೀತ ಸಿಂಗ್ ಅವರು ಮನೆಗೆ ದೌಡಾಯಿಸಿದ್ರು. ಸುಸಾಂತ್ ಅವರ ದೇಹ ಕೆಳಗಿಳಿಸಿದಾಗ ಅವರ ಕತ್ತಿನ ಭಾಗದಲ್ಲಿ ಗುರುತಾಗಿತ್ತು” ಎಂದಿದ್ದಾರೆ.