ಸುಶಾಂತ್ ಸಾವಿನ ಪ್ರಕರಣದಲ್ಲಿ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಮುಂಬೈ ಪೊಲೀಸರ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಮತ್ತೊಂದೆಡೆ ಕೇಸ್ ಸಿಬಿಐ ಗೆ ಒಪ್ಪಿಸುವಂತೆ ಒತ್ತಡ ಹೆಚ್ಚಾಗ್ತಿದ್ದರು ಮಹಾರಾಷ್ಟ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಅಲ್ಲದೇ ಸುಶಾಂತ್ ಪ್ರೇಯಸಿ ರಿಯಾ ವಿರುದ್ಧ ಕೆಕೆ ಸಿಂಗ್ ಬಿಹಾರದಲ್ಲಿ ದೂರು ದಾಖಲಿಸಿದ್ದು, ಆ ಸಂಬಂಧದ ತನಿಖೆಗೂ ಬಾಂದ್ರಾ ಪೊಲೀಸರು ಬಿಹಾರದ ಪೊಲೀಸರಿಗೆ ಯಾವುದೇ ರೀತಿಯ ನೆರವು ನೀಡ್ತಿಲ್ಲ. ಈ ಹಿನ್ನೆಲೆ ಬಾಂದ್ರಾ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಸುಶಾಂತ್ ತಂದೆ ಕೆಕೆ ಸಿಂಗ್ ಅವರು ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ. ಮೇಲ್ನೋಟಕ್ಕೆ ತನಿಖೆ ಕೈಗೊಂಡರೂ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎಂದು ಆರೋಪಿಸಿದ್ದಾರೆ. ಅಲ್ದೇ ಫೆಬ್ರವರಿ ತಿಂಗಳಿನಲ್ಲಿ ಸುಶಾಂತ್ ಗೆ ಜೀವ ಬೆದರಿಕೆ ಬಗ್ಗೆ ಸೂಚಿಸಲಾಗಿತ್ತು. ಜೂನ್ ತಿಂಗಳಿನಲ್ಲಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಜರುಗಿಸದೇ ಮೀನಾಮೇಶ ಎಣಿಸುತ್ತಿದ್ದಾರೆ ಎಂದು ಕೆಕೆ ಸಿಂಗ್ ಮುಂಬೈ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ 2025
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಇದರ ವತಿಯಿಂದ ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಮಿನಿಸ್ಟ್ರಿಗಳಲ್ಲಿ ಖಾಲಿಯಾಗಿರುವ ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ...