ದಿನಕ್ಕೊಂದು ತಿರುವು ಪಡೆದುಕೊಳ್ತಿರುವ ಸುಸಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದೀಗ ಸುಶಾಂತ್ ಸಿಂಗ್ ರ ಬಾಡಿಗಾರ್ಡ್ ಸುಶಾಂತ್ ತಂದೆ ಕೆಕೆ ಸಿಂಗ್ ರೆಹಾ ವಿರುದ್ಧ ಮಾಡಿರುವ ಆರೋಪ ಸರಿಯಾಗಿಯೇ ಇದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸುಶಾಂತ್ ಆತ್ಮಹತ್ಯೆ ಹಿಂದೆ ರೆಹಾ ಕೈವಾಡವಿದೆ ಎಂದು ಹೇಳಿರುವ ಸುಶಾಂತ್ ಬಾಡಿಗಾರ್ಡ್ ಇನ್ನೂ ಅನೇಕ ವಿಚಾರಗಳ ಖುಲಾಸೆ ಮಾಡಿದ್ದಾರೆ. ಸುಶಾಂತ್ ಹಾಗೂ ರೆಹಾ ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್‍ನಲ್ಲಿ ರೆಹಾ ಸ್ನೇಹಿತರು ಹಾಗೂ ಅವರ ಕುಟುಂಬಸ್ಥರನ್ನು ಕರೆತಂದು ಪಾರ್ಟಿ ಮಾಡುತ್ತಿದ್ದರು. ಆದ್ರೆ ಈ ವೇಳೆ ಸುಶಾಂತ್ ಸದಾ ನಿದ್ರಿಸುತ್ತಿದ್ದರು. ರೆಹಾ ಬಂದ ಬಳಿಕ ಸುಶಾಂತ್ ಮನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸುಶಾಂತ್ ಸಾವಿನ ಹಿಂದೆ ರೆಹಾ ಕೈವಾಡವಿದೆ ಎಂದು ಅನ್ನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ವಿಚಾರದ ಬಗ್ಗೆ ಮತ್ತಷ್ಟು ಮಾತನಾಡಿರುವ ಸುಶಾಂತ್ ಬಾಡಿಗಾರ್ಡ್ ಸುಶಾಂತ್ ಹೆಚ್ಚಿನ ಸಮಯ ನಿದ್ರಿಸುತ್ತಿದ್ದರು. ಯೂರೋಪ್ ಪ್ರವಾಸ ಹೋಗಿ ಬಂದ ಬಳಿಕ ಸುಶಾಂತ್ ಆರೋಗ್ಯ ಹಾಳಾಗಿತ್ತು. ಯಾವಾಗಲು ಹಾಸಿಗೆಯ ಮೇಲೆ ಇರುತ್ತಿದ್ದರು. ರೆಹಾ ಪರಿಚಯವಾಗುವುದಕ್ಕೂ ಮುನ್ನ ಸುಶಾಂತ್ ಸದಾ ಸಕ್ರಿಯರಾಗಿರುತ್ತಿದ್ದರು. ಸುಶಾಂತ್ ಮನೆಗೆ ಬರುವ ಮೊದಲು ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ಸುಶಾಂತ್ ಮನೆಯಲ್ಲಿ ಇದ್ದರು. ರೆಹಾ ಬಂದ ಬಳಿಕ ಸುಶಾಂತ್ ಮನೆಯಲ್ಲಿ ರೆಹಾ ಸ್ನೇಹಿತರು ಮಾತ್ರ ಬರುತ್ತಿದ್ದರು. ಇನ್ನೂ ಇದೇ ವೇಳೆ ರೆಹಾಳನ್ನು ನಿರ್ಮಾಪಕ ಮಹೇಶ್ ಭಟ್ ಕಚೇರಿಗೆ ಕಾರಿನಲ್ಲಿ ಡ್ರಾಪ್ ಮಾಡಿದ್ದಾಗಿಯೂ ತಿಳಿಸಿರುವ ಬಾಡಿಗಾರ್ಡ್ , ಮತ್ತೊಂದು ವಿಚಾರವನ್ನು ತಿಳಿಸಿದ್ದಾರೆ. ಅಂದ್ರೆ ನ್ನನ್ನು ಹೊರತು ಪಡಿಸಿ ಉಳಿದೆಲ್ಲಾ ಸಿಬ್ಬಂದಿಗಳನ್ನು ರೆಹಾ ಬದಲಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ. ಸುಶಾಂತ್ ಬಾಡಿಗಾರ್ಡ್ ಹೇಳಿಕೆ ಇದೀಗ ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
WPL 2023 Final : ಫೈನಲ್ ಪಂದ್ಯದ ಕಾದಾಟಕ್ಕೆ ಮುಂಬೈ, ದೆಹಲಿ ಸಜ್ಜು….
WPL 2023 Final : ಫೈನಲ್ ಪಂದ್ಯದ ಕಾದಾಟಕ್ಕೆ ಮುಂಬೈ, ದೆಹಲಿ ಸಜ್ಜು…. ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಸೀಸನ್ ನ ಮೊದಲ ಪೈನಲ್ ಪಂದ್ಯಕ್ಕೆ ಮುಂಬೈನ...