ಬಾಲಿವುಡ್ ಟೈಗರ್, ಮೋಸ್ಟ್ ಬ್ಯಾಚೂಲರ್ ಸಲ್ಮಾನ್ ಖಾನ್ ಈಗ ಪ್ರತಿಷ್ಟಿತ ಪಿಪ್ಸಿಕೊ ಅಂಬಾಸಿಡರ್ ಆಗಿದ್ದಾರೆ. ಪೆಪ್ಸಿ ಕೂಲ್ ಡ್ರಿಂಗ್ಸ್ ಜಾಹೀರಾತಿನ ‘ಸ್ವಾಗ್ ಸೆ ಸೋಲೋ’ ಯೂಟ್ಯೂಬ್‍ನಲ್ಲಿ ಬಿಡುಗಡೆಗೊಂಡಿದ್ದು, ಸಕತ್ ವೈರಲ್ ಆಗಿದೆ.
ಪ್ರೇಮಿಗಳ ದಿನಾಚರಣೆಯ ಹಿನ್ನೆಲೆ ಪೆಪ್ಸಿಕೋ ಈ ‘ಸ್ವಾಗ್ ಸೇ ಸೋಲೋ’ ಹಾಡನ್ನ ಬಿಡುಗಡೆಗೊಳಿಸಿರುವುದು ಯುವಕರ ಗಮನ ಸೆಳೆದಿದೆ. ಭಾರತೀಯ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ರಚನೆ ಮಾಡಿರುವ ಈ ಹಾಡಿಗೆ, ಭಜರಂಗಿ ಬಾಯ್‍ಜಾನ್ ಸಕತ್ ಸ್ಟೆಪ್ ಹಾಕಿದ್ದಾರೆ.
‘ಸ್ವಾಗ್ ಸೇ ಸೋಲೋ’ ಗೀತೆಗೆ ತಾನಿಷ್ಕ್ ಬಾಗ್ಚಿ ಸಂಗೀತ ಸಂಯೋಜನೆ ಮಾಡಿದ್ದರೆ. ಹಾಡಿಗೆ ಮೋಸ್ಟ್ ಪಾಪ್ಯೂಲರ್ ಕೋರಿಯೋಗ್ರಾಫರ್ ರೆಮೋ ಡಿಸೋಜಾ ನೃತ್ಯ ಸಂಯೋಜನೆ ಮಾಡಿದ್ದಾರೆ. ದೇಶದ ಯುವಕರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಈ ಸಿದ್ಧ ಪಡಿಸಿದ್ದು, ಯುವಜನತೆಯ ಸಂಬಂಧಗಳ ಗಟ್ಟಿತನವನ್ನು ಉತ್ತೇಜಿಸಲಾಗುತ್ತದೆ.
ಗೀತೆ ಕುರಿತು ಮಾತನಾಡಿದ ಪೆಪ್ಸಿಕೊ ಇಂಡಿಯಾದ ವಕ್ತಾರರು, ಪೆಪ್ಸಿಯ ಸ್ವಾಗ್ ಅಭಿಯಾನವು ಸ್ವಾಗ್ ಸೇ ಸೋಲೋ ಗೀತೆಯೊಂದಿಗೆ 2020 ನೇ ವರ್ಷವನ್ನ ಅದ್ಧೂರಿಯಾಗಿ ಬರಮಾಡಿಕೊಳ್ಳುತ್ತಿದ್ದೇವೆ. ಸಂಗೀತ ಎನ್ನುವುದು ದೇಶವನ್ನು ಒಟ್ಟಾಗಿ ಪಾಲ್ಗೊಳ್ಳುವಂತೆ ಮಾಡುತ್ತದೆ. ಅದೊಂದು ಶಕ್ತಿಶಾಲಿ ಅಸ್ತ್ರ ಎಂಬುದನ್ನು ಮನಗಂಡಿದ್ದೇವೆ. ಈ ಸಂಗೀತದೊಂದಿಗೆ ಯುವಪೀಳಿಗೆ ಸಂತಸ ಪಡಬೇಕು ಮತ್ತು ಒಂಟಿಯಾಗಿದ್ದೇವೆಂಬ ಆತಂಕವಿಲ್ಲದೇ ಸಂಬಂಧದ ಮಾನ್ಯತೆಯೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಇಡೀ ದೇಶ ಈ ಹಾಡಿಗೆ ಹೆಜ್ಜೆ ಹಾಕಲಿದೆ ಎಂಬ ವಿಶ್ವಾಸ ನಮ್ಮದಾಗಿದೆ” ಎಂದು ಹೇಳಿದ್ದಾರೆ.
ಇನ್ನ, ಪೆಪ್ಸಿಯ ಬ್ರ್ಯಾಂಡ್ ಅಂಬಾಸಿಡರ್ ಸಲ್ಮಾನ್ ಖಾನ್ ಮಾತನಾಡಿ, ‘ಸ್ವಾಗ್ ಸೇ ಸೋಲೋ’ ಯುವಕರಿಗೆ ವಿಶ್ವಾಸ ತುಂಬುವ ಹಾಡಾಗಿದೆ. ಹಾಗೇ ಪೆಪ್ಸಿಯೊಂದಿಗೆ ಸಹಯೋಗ ಮಾಡಿಕೊಂಡಿರುವುದು ನನಗೆ ಮತ್ತಷ್ಟು ಸಂತಸವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.