ದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಹಾಯಕ ಬಿಭವ್ ಕುಮಾರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಸಂಸದೆ ಸ್ವಾತಿ ಮಲಿವಾಲ್ (Swati Maliwal ) ಕಣ್ಣೀರು ಸುರಿಸಿದ್ದಾರೆ.
ಈ ಆರೋಪಕ್ಕಾಗಿ ದೆಹಲಿ ಸಿಎಂ ನಿವಾಸದಲ್ಲಿ ಸಿಸಿಟಿವಿ ಇಲ್ಲದ ಜಾಗವನ್ನೇ ಆಯ್ಕೆ ಮಾಡಿಕೊಂಡರು. ಅಲ್ಲಿ ಸಿಸಿಟಿವಿ ಇರುತ್ತಿದ್ದರೆ ಘಟನೆ ದಾಖಲಾಗುತ್ತಿತ್ತು ಎಂದು ಭಿಭವ್ ಕುಮಾರ್ ಪರ ವಕೀಲ ವಾದಿಸಿದಾಗ ಸ್ವಾತಿ ಮಲಿವಾಲ್ ಕೋರ್ಟ್ ನಲ್ಲಿಯೇ ಕಣ್ಣೀರು ಸುರಿಸಿದ್ದಾರೆ.
ಆಮ್ ಆದ್ಮಿ ಪಕ್ಷದ (AAP) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಮೇ 13ರಂದು ಕೇಜ್ರಿವಾಲ್ ನಿವಾಸದಲ್ಲಿ ಭಿಭವ್ ಕುಮಾರ್ ಹಲ್ಲೆ ನಡೆಸಿದ್ದರು. ಬಿಭವ್ ಕುಮಾರ್‌ಗೆ ಜಾಮೀನು ನೀಡಿದರೆ, “ನನ್ನ ಜೀವಕ್ಕೆ ಮತ್ತು ನನ್ನ ಕುಟುಂಬಕ್ಕೆ ಅಪಾಯವಿದೆ” ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ದೆಹಲಿಯ ತೀಸ್ ಹಜಾರಿ ನ್ಯಾಯಾಲಯವು ಮುಖ್ಯಮಂತ್ರಿಯ ಸಹಾಯಕ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದೆ.