ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗ್ತಿದೆ ಉಪ್ಮಾ : swiggy ವಿರುದ್ಧ ನೆಟ್ಟಿಗರು ಗರಂ..!
ಉಪ್ಪಿಟ್ಟು…. ದಕ್ಷಿಣ ಭಾರತದ ಖಾದ್ಯ… ಬ್ರೇಕ್ ಫಾಸ್ಟ್. ಬಿಸಿ ಬಿಸಿ ಉಪ್ಪಿಟ್ಟು ಎಷ್ಟೋ ಜನರಿಗೆ ಬಹಲ ಇಷ್ಟವಾದ ಫೇವರೇಟ್ ಡಿಶ್. ಆದ್ರೆ ಉಪ್ಮಾವನ್ನ ಅನೇಕರು ಇಷ್ಟ ಪಡೋದಿಲ್ಲ. ಹಲವರಿಗೆ ಉಪ್ಪಿಟ್ಟು ಇಷ್ಟ ಆಗೋದಿಲ್ಲ. ಆದ್ರೆ ಇದೀಗ ಈ ಉಪ್ಮ ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಹೌದು… ಇದರ ಜೊತೆಗೆ ಭಾರತದ ಜನಪ್ರಿಯ ಆನ್ ಲೈನ್ ಫುಡ್ ಡೆಲಿವರಿ swiggy ಕೂಡ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಾಯಿದ್ದು, ಉಪ್ಮಾ ವಿಡಿಯೋಗಳು, ಉಪ್ಮಾ ಜೋಕ್ ಗಳೇ ವೈರಲ್ ಆಗ್ತಿವೆ. ಇದಕ್ಕೆ ಕಾರಣ ಏನ್ ಗೊತ್ತಾ…?
ಜುಲೈ 16 ಕ್ಕೆ ಬರಲಿದ್ದಾನೆ ರಣಬೇಟೆಗಾರ : ಕೆಜಿಎಫ್ 2 ರಿಲೀಸ್ ಡೇಟ್ ಘೋಷಣೆ..!
ಸ್ವಿಗ್ಗಿ ಇತ್ತೀಚೆಗೆ ಟ್ವೀಟ್ ಮೂಲಕ ಗ್ರಾಹಕರಿಗೆ ಕೇಳಿರುವ ಆ ಒಂದು ಪ್ರಶ್ನೆಯಿಂದಾಗಿ ಇದೀಗ ಉಪ್ಮಾ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗ್ತಾಯಿದೆ. ಹೌದು ಅಷ್ಟಕ್ಕೂ ಸ್ವಿಗ್ಗಿ ಕೇಳಿರುವ ಆ ಪ್ರಶ್ನೆ ಏನಂತ ನೋಡೋದಾದ್ರೆ.
‘ಪರ್ವತ ಮೇಕೆ ಎಂಬ ಸಸ್ತನಿಗಳ ಲೋಕದ ರ್ಯಾಂಬೊಗಳ ಕೌತುಕದ ಸಂಗತಿ ನಿಮಗೆಷ್ಟು ಗೊತ್ತು?
‘which is the worst breakfast dish and why is it upma?’….
“ ಯಾವುದು ಕೆಟ್ಟ ಬ್ರೇಕ್ ಫಾಸ್ಟ್.. ಉಪ್ಮಾ ಯಾಕೆ..?
ಇದು ಎಲ್ಲೋ ಒಂದ್ ಕಡೆ ಉಪ್ಮಾ ಪ್ರಿಯರಿಗೆ ಆಕ್ರೋಶ ತಂದಿದೆ. ಹೌದು.. ಸ್ವಿಗ್ಗಿಯ ಈ ಪ್ರಶ್ನೆಯಿಂದಾಗಿ ಉಪ್ಮಾ ಪ್ರಿಯರಿಗೆ ಬೇಸರವಾಗಿದೆ. ಅಲ್ದೇ ಸ್ವಿಗ್ಗಿ ವಿರುದ್ಧವೇ ವ್ಯಂಗ್ಯವಾಗಿ ಕಮೆಂಟ್ ಗಳನ್ನ ಹಾಕುತ್ತಾ ಟ್ರೋಲ್ ಮಾಡೋದಕ್ಕೆ ಶುರುಮಾಡಿದ್ದಾರೆ. ನಮ್ಮ ಉಪ್ಮಾವನ್ನೇ ಅವಮಾನಿಸ್ತೀರ ಅಂತ ಕಿಡಿಕಾರ್ತಾಯಿದ್ದಾರೆ.
ವಾಟ್ಸಾಪ್ ಗೆ ಬೈ ಬೈ.. ಸಿಗ್ನಲ್ ಗೆ ಹಾಯ್ ಹಾಯ್
ಹೌದು ಇನ್ನೂ ಕೆಲವರ ಕಮೆಂಟ್ ಗಳಂತೂ ಸಿಕ್ಕಾಪಟ್ಟೆ ನಗುತರಿಸುತ್ತೆ. ಉದಾಹರಣೆಗೆ ‘ಯಾವುದು ಕೆಟ್ಟ ಫುಡ್ ಡಿಲೆವರಿ ಕಂಪನಿ ಅದು ಸ್ವಿಗ್ಗಿ ಯಾಕೆ..?’ ಹೀಗೆ ಸ್ವಿಗ್ಗಿ ವಿರುದ್ಧ ವ್ಯಂಗ್ಯವಾಗಿಯೇ ಆಕ್ರೋಶ ಹೊರಹಾಕ್ತಿದ್ದಾರೆ. ಉಪ್ಪಿಟ್ಟನ್ನ ಕೆಟ್ಟ ಡಿಶ್ ಅಂತ ನಮೂದಿಸಿರೋದಕ್ಕೆ ಸ್ವಿಗ್ಗಿ ವಿರುದ್ಧವೇ ಜನರು ತಿರುಗಿಬಿದ್ದಿದ್ದು, ಟ್ರೆಂಡಿಂಗ್ ನಲ್ಲಿ ಉಪ್ಮಾ ಹಾಗೂ ಸ್ವಿಗ್ಗಿ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel