ಬೆಂಗಳೂರಿನಲ್ಲಿ ಡ್ರೋನ್ ಮೂಲಕ ದಿನಸಿ ಫುಡ್ ವಿತರಿಸಲಿದೆ ಸ್ವಿಗ್ಗಿ….
ಆನ್ ಲೈನ್ ಪುಡ್ ವಿತರಣ ಸಂಸ್ಥೆಯಾದ ಸ್ವಿಗ್ಗಿ ತನ್ನ ಇನ್ಸ್ಟಾಮಾರ್ಟ್ ಫೀಚರ್ಸ್ ನ ಭಾಗವಾಗಿ ಡ್ರೋನ್ ಗಳ ಮೂಲಕ ದಿನಸಿ ಪ್ಯಾಕೆಟ್ ಗಳ ವಿತರಣೆಗೆ ಮುಂದಾಗಿದೆ. ಚೆನ್ನೈ ಮೂಲದ ಸ್ಟಾರ್ಟ್ ಆಪ್ ಗರುಡಾ ಏರೋಸ್ಪೇಸ್ ನ ಡ್ರೋನ್ ಗಳ ಸಹಾಯವನ್ನ ಸ್ವಿಗ್ಗಿ ಬಳಸಿಕೊಳ್ಳಲಿದೆ.
ಗರುಡಾ ಏರೋಸ್ಪೇಸ್‌ನ ಸಂಸ್ಥಾಪಕ ಮತ್ತು ಸಿಇಒ ಅಗ್ನಿಶ್ವರ್ ಜಯಪ್ರಕಾಶ್ ತಿಳಿಸಿರುವ ಮಾಹಿತಿಯ ಪ್ರಕಾರ “ಇದು ಸ್ವಿಗ್ಗಿ ಪ್ರಾರಂಭಿಸಿರುವ ಪ್ರಾಯೋಗಿಕ ಯೋಜನೆಯಾಗಿದೆ. ನಾವು ಮೇ ಮೊದಲ ವಾರದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲು ಯೋಜಿಸಿದ್ದೇವೆ.” ಎಂದಿದ್ದಾರೆ.
ಅವರು ತಿಳಿಸಿರು ಪ್ರಕಾರ ಡ್ರೋನ್‌ಗಳು ಡಾರ್ಕ್ ಸ್ಟೋರ್, ಕಿರಾಣಿ ಅಂಗಡಿ ಅಥವಾ ದಿನಸಿ ಮಾರಾಟ ನಡೆಸುತ್ತಿರುವ ಮಾರಾಟಗಾರರ ಮೂಲಕ ದಿನಸಿ ತೆಗೆದುಕೊಂಡು ಸಾಮಾನ್ಯ ಕೇಂದ್ರಗಳಿಗೆ ತಲುಪಿಸುತ್ತವೆ. ಇದನ್ನು ಡ್ರೋನ್ ಪೋರ್ಟ್ ಎಂದು ಕರೆಯಲಾಗುತ್ತದೆ, ಅಲ್ಲಿ ಸ್ವಿಗ್ಗಿ ಡೆಲಿವರಿ ಮಾಡುವ ವ್ಯಕ್ತಿ ಪ್ಯಾಕೆಟ್ ಮಾಡಿ ಅಂತಿಮ ಗ್ರಾಹಕರಿಗೆ ತಲುಪಿಸುತ್ತಾನೆ ಎಂದು ತಿಳಿಸಿದ್ದಾರೆ.
ಇದರ ಪ್ರಾಯೋಗಿಕ ಹಂತವನ್ನು ಬೆಂಗಳೂರು ಮತ್ತು ದೆಹಲಿ ಎನ್ ಸಿಆರ್ ನಲ್ಲಿ ಮೊದಲ ಬಾರಿಗೆ ಪ್ರಯೋಗ ನಡೆಸಲಿದೆ.
ಡ್ರೋನ್‌ಗಳಿಂದ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾದರೆ ಸ್ವಿಗ್ಗಿ ವೆಚ್ಚವನ್ನು ತೆಗೆದುಕೊಳ್ಳುತ್ತದೆಯೇ ಎಂಬುದು ಅನಿಶ್ಚಿತವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಗುರುಗ್ರಾಮ್‌ನ ಮನೇಸರ್ ಮತ್ತು ಚೆನ್ನೈನಲ್ಲಿ ಗರುಡ ಏರೋಸ್ಪೇಸ್‌ನ ಡ್ರೋನ್ ಉತ್ಪಾದನಾ ಸೌಲಭ್ಯಗಳನ್ನು ವಾಸ್ತವಿಕವಾಗಿ ಉದ್ಘಾಟಿಸಿದ್ದರು.