ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಹೂಡಿಕೆ ಬಗ್ಗೆ ಸ್ವಿಡ್ಜರ್ಲೆಂಡ್ ಅಧಿಕಾರಿಗಳಲ್ಲಿ ವಿವರ ಕೇಳಿದ ಹಣಕಾಸು ಸಚಿವಾಲಯ
ನವದೆಹಲಿ: 2020ರಲ್ಲಿ ವ್ಯಕ್ತಿಗಳು ಮತ್ತು ಘಟಕಗಳು ಹೂಡಿಕೆ ಮಾಡಿರುವ ಹಣದಲ್ಲಿ ಬದಲಾವಣೆಗಳಿಗೆ ಸಂಭವನೀಯ ಕಾರಣಗಳ ಮತ್ತು ವಿವರಗಳನ್ನು ಸ್ವಿಸ್ ಬ್ಯಾಂಕ್ ಅಧಿಕಾರಿಗಳಿಂದ ಕೇಂದ್ರ ಹಣಕಾಸು ಸಚಿವಾಲಯ ಕೇಳಿದೆ. ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದ್ದರೂ ಕೂಡ ಎಷ್ಟು ಸಂಖ್ಯೆಯಲ್ಲಿ ಜನರು ಹೂಡಿಕೆ ಮಾಡಿದ್ದಾರೆ, ಎಷ್ಟು ಮಾಡಿದ್ದಾರೆ ಎಂಬ ಮಾಹಿತಿಯಿಲ್ಲ ಎಂದು ಸಚಿವಾಲಯ ಹೇಳಿದೆ.
ಭಾರತ ಮೂಲದ ಶಾಖೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳನ್ನೂ ಒಳಗೊಂಡಂತೆ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೂಡಿಕೆ ಮಾಡಿದ ಹಣವು 2020ರಲ್ಲಿ 13 ವರ್ಷಗಳ ಗರಿಷ್ಠ 2.55 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳಿಗೆ (20,700 ಕೋಟಿ ರೂ.) ಜಿಗಿದಿದೆ. ಆದರೆ ಗ್ರಾಹಕರ ಠೇವಣಿಗಳು ಕುಸಿಯುತ್ತಿವೆ ಎಂದು ಕಳೆದ ಜೂನ್ 17ರಂದು ಸ್ವಿಡ್ಜರ್ಲೆಂಡ್ ನ ಕೇಂದ್ರೀಯ ಬ್ಯಾಂಕ್ ಹೇಳಿದೆ.
ಈ ನಿಟ್ಟಿನಲ್ಲು ಸ್ವಿಟ್ಜರ್ಲೆಂಡ್ ನಲ್ಲಿ ಭಾರತೀಯರು ಹೊಂದಿರುವ ಹೆಚ್ಚು ಚರ್ಚಾಸ್ಪದವಾಗಿರುವ ಕಪ್ಪು ಹಣದ ಪ್ರಮಾಣವನ್ನು ಇದು ಸೂಚಿಸುವುದಿಲ್ಲ. ಇದಲ್ಲದೆ, ಈ ಅಂಕಿಅಂಶಗಳು ಸ್ವಿಸ್ ಬ್ಯಾಂಕುಗಳಲ್ಲಿ ಮೂರನೇ ರಾಷ್ಟ್ರದ ಸಂಸ್ಥೆಗಳ ಹೆಸರಿನಲ್ಲಿ ಭಾರತೀಯರು, ಎನ್‌ಆರ್‌ಐಗಳು ಅಥವಾ ಇತರರು ಹೊಂದಿರಬಹುದಾದ ಹಣವನ್ನು ಒಳಗೊಂಡಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಮುಂದಿನ ವರ್ಷದೊಳಗೆ ವಾಯುಪಡೆಗೆ ‘ರಫೇಲ್’ ಸೇರ್ಪಡೆ..!
ಭಾರತದಲ್ಲಿ ತುರ್ತು ಅಗತ್ಯ ಪೂರೈಕೆ ನಂತರ ಲಸಿಕೆ ರಫ್ತಿಗೆ ಕೇಂದ್ರದ ಚಿಂತನೆ..!
ಗಾಝಿಯಾಬಾದ್ ನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ ಪ್ರಕರಣ – ಟ್ವಿಟ್ಟರ್ ಗೆ ನೋಟೀಸ್ ಕೊಟ್ಟ ಪೊಲೀಸರು..!








