ಸ್ವಿಸ್ ಬ್ಯಾಂಕ್‍ ನಲ್ಲಿ ಭಾರತೀಯರು ಇಟ್ಟಿರುವ ಹಣ ಎಷ್ಟು  ಗೊತ್ತಾ…?

1 min read

ಸ್ವಿಸ್ ಬ್ಯಾಂಕ್‍ ನಲ್ಲಿ ಭಾರತೀಯರು ಇಟ್ಟಿರುವ ಹಣ ಎಷ್ಟು  ಗೊತ್ತಾ…?

ಸ್ವಿಸ್ ಬ್ಯಾಂಕ್… ವಿಶ್ವದ ಅತ್ಯಂತ ಭದ್ರತೆಯ ವ್ಯವಸ್ಥೆಯುಳ್ಳ ಬ್ಯಾಂಕ್… ಈ ಬ್ಯಾಂಕ್ ನಲ್ಲಿ ಇಡೀ ವಿಶ್ವದ ದೊಡ್ಡ ದೊಡ್ಡ ಕುಳಗಳು ತಮ್ಮ ಹಣವನ್ನ ಇರಿಸಿದ್ದಾರೆ. ಭಾರತಿಯರು ಸಹ ಇಲ್ಲಿ ಸಾವಿರಾರು ಕೋಟಿಗಳನ್ನ ಇಟ್ಟಿದ್ದಾರೆ.. ಭಾರತದ ದೊಡ್ಡ ದೊಡ್ಡ ವ್ಯಕ್ತಿಗಳ ಕಾಳಧನವೂ ಈ ಬ್ಯಾಂಕ್ ನಲ್ಲಿ ಇಡಲಾಗಿದೆ ಅನ್ನೋ  ಆರೋಪಗಳು ಇವೆ..

ಈ ರೀತಿ ಭಾರತೀಯರು ವೈಯಕ್ತಿಕವಾಗಿ ಮತ್ತು ಬೇರೆ ಬೇರೆ ಹಣಕಾಸು ಸಂಸ್ಥೆಗಳ ಮೂಲಕ ಸ್ವಿಸ್ ಬ್ಯಾಂಕ್ ಗಳನ್ನು ಇಟ್ಟಿರುವ ಹಣದ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.

ಹೌದು 13 ವರ್ಷಗಳಲ್ಲೇ ಇದು ಗರಿಷ್ಠ ಮೊತ್ತವಾಗಿದ್ದರೂ ವೈಯಕ್ತಿಕ ಹಣ ಠೇವಣಿಯಲ್ಲಿ ಇಳಿಕೆಯಾಗಿದೆ ಎಂದು ಸ್ವಿಜರ್ಲೆಂಡ್ ಕೇಂದ್ರೀಯ ಬ್ಯಾಂಕ್ ಹೇಳಿದೆ.

ಬ್ಯಾಂಕ್ 2020ರ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದ್ದು, ಸೆಕ್ಯೂರೀಟಿಸ್ ಮತ್ತು ಅದೇ ರೀತಿಯ ಇತರ ಮಾದರಿಯ ಹೂಡಿಕೆಯಿಂದಾಗಿ ಮೊತ್ತ ಏರಿಕೆಯಾಗಿದೆ. ಭಾರತದಲ್ಲಿನ ಸ್ವಿಜರ್ಲೆಂಡ್ ಬ್ಯಾಂಕಿನಲ್ಲಿರುವ ಹಣವು ಇದರಲ್ಲಿ ಸೇರಿದೆ ಎಂದು ತಿಳಿಸಿದೆ. ಈ ಹಣದಲ್ಲಿ ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಸಂಸ್ಥೆಗಳ ಹೆಸರಿನಲ್ಲಿ ಇಡಲಾಗಿರುವ ಹಣವನ್ನು ಸೇರಿಸಿಲ್ಲ.

2006ರಲ್ಲಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಒಟ್ಟು 23,000 ಕೋಟಿ ರೂ. ಹಣವನ್ನು ಇಡಲಾಗಿತ್ತು. ಇದು ಇಲ್ಲಿಯವರೆಗೆ ಭಾರತೀಯರು ಇರಿಸಿದ್ದ ಗರಿಷ್ಠ ಮೊತ್ತವಾಗಿತ್ತು. 2010, 2013, 2017 ಹೊರತು ಪಡಿಸಿ ನಂತರದ ವರ್ಷಗಳಲ್ಲಿ ಠೇವಣಿ ಇಳಿಕೆಯಾಗಿತ್ತು. ಆದರೆ 2020ರಲ್ಲಿ ಈ ಮೊತ್ತ 20,700 ಕೋಟಿ ರೂ.ಗೆ ಜಿಗಿದಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd