ಸ್ವಿಸ್ ಓಪನ್ ಸೂಪರ್ ಬ್ಯಾಡ್ಮಿಂಟನ್- ಫೈನಲ್ ಪ್ರವೇಶಿಸಿದ ಭಾರತದ ಸಿಂಧೂ
ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ. ಸಿಂಧೂ ಅವರು ಫೈನಲ್ ಪ್ರವೇಶಿಸಿದ್ದಾರೆ.
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧೂ ಅವರು ಸೆಮಿಫೈನಲ್ ನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಚಾಫೆಡ್ಟ್ ಅವರನ್ನು ಪರಾಭವಗೊಳಿಸಿದ್ರು.
ಕೇವಲ 43 ನಿಮಿಷಗಳ ಹೋರಾಟದಲ್ಲಿ ಪಿ.ವಿ. ಸಿಂಧೂ ಅವರು ಪಂದ್ಯವನ್ನು ಗೆದ್ದುಕೊಂಡ್ರು. ಮೊದಲ ಸೆಟ್ ನಲ್ಲಿ 22-20ರಿಂದ ಸ್ವಲ್ಪ ಮಟ್ಟಿನ ಪ್ರತಿರೋಧ ಒಡ್ಡಿದ್ರೂ ಎರಡನೇ ಸೆಟ್ ನಲ್ಲಿ 21-10ರಿಂದ ಪಿ,ವಿ. ಸಿಂಧೂ ಗೆಲುವಿನ ನಗೆ ಬೀರಿದ್ರು
2019ರ ನಂತರ ಸಿಂಧೂ ಅವರು ಮೊದಲ ಬಾರಿ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಹಂತಕ್ಕೆ ತಲುಪಿದ್ದಾರೆ.
ಇನ್ನು ಶ್ರೀಕಾಂತ್ ಕಿಡಂಬಿ ಅವರು ಸೆಮಿಫೈನಲ್ ಸೋಲು ಅನುಭವಿಸಿದ್ದಾರೆ. ಇನ್ನೊಂದೆಡೆ ಡಬಲ್ಸ್ ನಲ್ಲಿ ಸ್ವಾತ್ವಿಕ್ ರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿಯವರು ಕೂಡ ನಾಲ್ಕರ ಘಟ್ಟ ತಲುಪಿದ್ದಾರೆ.