ಕೋವಿಡ್ ಹಾವಳಿ – ಸಿಡ್ನಿಯಲ್ಲಿ ಸೆಪ್ಟೆಂಬರ್ ವರೆಗೂ ಲಾಕ್ ಡೌನ್ ವಿಸ್ತರಣೆ..!
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಕೋವಿಡ್ ಪ್ರಕರಣಗಳ ಏರಿಳಿತ ಮುಂದುವರೆದಿದೆ.. ಅನೇಕ ದೇಶಗಳಲ್ಲಿ ಕೇಸ್ ಗಳು ಹೆಚ್ಚಾಗ್ತಾಯಿರೋ ಬೆನ್ನಲ್ಲೇ ಮತ್ತೊಮ್ಮೆ ಹಲವೆಡೆ ಲಾಕ್ ಡೌನ್ ಮಾಡಲಾಗ್ತಿದೆ..
ಈ ನಡುವೆ ಸಿಡ್ನಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಲಾಕ್ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ. ಜೂನ್ 26ರಿಂದ ಈ ನಗರದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಚಾಲಕರೊಬ್ಬರಲ್ಲಿ ಡೆಲ್ಟಾ ತಳಿ ಪತ್ತೆಯಾದ ಹತ್ತು ದಿನಗಳ ಬಳಿಕ ಲಾಕ್ಡೌನ್ ನಿರ್ಣಯವನ್ನು ಸರ್ಕಾರ ಕೈಗೊಂಡಿತ್ತು. ಆಗಸ್ಟ್ 28ಕ್ಕೆ ಲಾಕ್ಡೌನ್ ವಾಪಸ್ ತೆಗೆದುಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಅವಲೋಕಿಸಿ ಸೆಪ್ಟೆಂಬರ್ 30ರವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.