“ನೀನು ಮಹಿಳೆ… ಕೆಲಸ ಮಾಡುವಂತಿಲ್ಲ… ಮನೆಗೆ ನಡಿ” ಅಫ್ಗಾನ್ ಸುದ್ದಿವಾಹಿನಿಯಿಂದ ನಿರೂಪಕಿಗೆ ಗೇಟ್ ಪಾಸ್
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಹೆಚ್ಚು ಕಷ್ಟ ಅನುಭವಿಸುತ್ತಿರುವುದು ಮಹಿಳೆಯರು..ಮಹಿಳೆಯರ ಸ್ವಾತಂತ್ರ್ಯ ಕಿತ್ತುಕೊಳ್ತಿರುವ ತಾಲೀಬಾನಿಗಳು ನಾವು ಬದಲಾಗಿದ್ದೇವೆ ಎಂದು ಎಷ್ಟೇ ಬಾಯಿ ಬಡೆದುಕೊಂಡ್ರೂ ಅವರ ಅಸಲಿಯತ್ತು ಅವರ ಹಿಂದಿನ ಆಳ್ವಿಕೆ ಎಂಥಹದ್ದು ಎಲ್ರಿಗೂ ಗೊತ್ತಿದೆ..
ಮಹಿಳೆಯರಿಗೆ ಗೌರವ ಸೂಚಿಸುತ್ತೇವೆ.. ಅವರ ಹಕ್ಕು ಕಿತ್ತುಕೊಳ್ಳುವುದಿಲ್ಲ ಎಂದಿದ್ದ ತಾಲೀಬಾನಿಗಳು ಸರ್ಕಾರಿ ಸ್ವಾಮ್ಯದ ಮಾಧ್ಯಮ ವೇದಿಕೆಗಳಲ್ಲಿ ಮಹಿಳಾ ಪತ್ರಕರ್ತರು ಕೆಲಸಕ್ಕೆ ಬಾರದಂತೆ ಮಾಡುತ್ತಿವೆ.. ಖ್ಯಾತ ವಾಹಿನಿಯ ನಿರೂಪಕಿ , ಜರ್ನಲಿಸ್ಟ್ ಆಗಿದ್ದ ಶಬ್ನಮ್ ದವ್ರನ್ ಅವರು ತಮ್ಮ ಪರಿಸ್ಥಿತಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಹೇಳಿಕೊಂಡಿದ್ದಾರೆ..
ನೀನು ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು ಎಂದು ಹೇಳಿ ಮಹಿಳಾ ಪತ್ರಕರ್ತೆಗೆ ಅಫ್ಘಾನಿಸ್ತಾನದ ಸರ್ಕಾರಿ ವಾಹಿನಿಯಿಂದ ಗೇಟ್‍ಪಾಸ್ ನೀಡಲಾಗಿದೆ. ಅಫ್ಘಾನಿಸ್ತಾನದಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಗಳಲ್ಲಿ ಮಹಿಳಾ ಪತ್ರಕರ್ತರು ಕೆಲಸಕ್ಕೆ ಬರದಂತೆ ತಾಲಿಬಾನ್ ಸೂಚಿಸಿದೆ ಎಂದು RTA Pashto ನಿರೂಪಕಿ ಶಬ್ನಮ್ ದವ್ರನ್ ಹೇಳಿದ್ದಾರೆ.
ತಾಲಿಬಾನ್ ಕಾಬೂಲ್ ನಗರವನ್ನು ವಶಪಡಿಸಿಕೊಂಡ ಮರುದಿನ ಬೆಳಿಗ್ಗೆ ನಾನು ಕಚೇರಿಗೆ ಹೋದೆ. ಅಲ್ಲಿ ನನ್ನನ್ನು ಕೆಲಸಕ್ಕೆ ಬಾರದಂತೆ ಹೇಳಿದರು. ಕಾರಣ ಏನು ಎಂದು ಪ್ರಶ್ನಿಸಿದ್ದಕ್ಕೆ, ಈಗ ನಿಯಮಗಳು ಬದಲಾಗಿದೆ. ಮಹಿಳೆಯರಿಗೆ ಇನ್ನು ಮುಂದೆ ಆರ್ ಟಿಎಯಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂದು ಉತ್ತರಿಸಿದ್ದಾಗಿ ತಿಳಿಸಿದ್ದಾರೆ.
ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕೆಲಸಕ್ಕೆ ಬರಬೇಡಿ ಎಂದು ಕೇಳಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಈ ರೀತಿಯ ಆದೇಶವನ್ನು ನೀಡಿಲ್ಲ. ನನ್ನ ಪುರುಷ ಸಹೋದ್ಯೋಗಿಗೆ ಕೆಲಸಕ್ಕೆ ಹೋಗಲು ಅನುಮತಿ ನೀಡಲಾಗಿದೆ. ಆದರೆ ನನಗೆ ಸಿಕ್ಕಿಲ್ಲ. ಮಹಿಳೆಯರಿಗೆ ಇನ್ನು ಮುಂದೆ ಆರ್ ಟಿಎಯಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ನಮ್ಮ ಜೀವಕ್ಕೆ ಅಪಾಯವಿದೆ. ನನ್ನ ಮಾತುಗಳನ್ನು ಕೇಳುತ್ತಿರುವವರು ನಮಗೆ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ.








