ಸೈಯದ್ ಮೋದಿ ಇಂಟರ್ ನ್ಯಾಷನಲ್ : ಫೈನಲ್ ನಲ್ಲಿ ಸಿಂಧುಗೆ ಜಯ p v Sindhu wins women’s single title saaksha tv
ಸೈಯದ್ ಮೋದಿ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಯಾಂಕದ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಜಯ ಸಾಧಿಸಿದ್ದಾರೆ.
ಭಾನುವಾರ ನಡೆದ ಫೈನಲ್‌ನಲ್ಲಿ ಸಿಂಧು 21-13, 21-16ರಲ್ಲಿ ಮಾಳವಿಕಾ ಭನ್ಸೋಡ್ ಅವರನ್ನು ಮಣಿಸಿದ್ದಾರೆ.
ಅರ್ನಾಡ್ ಮರ್ಕೆಲ್ ಮತ್ತು ಲೂಕಾಸ್ ಕ್ಲಾರ್ಬೌಟ್ ನಡುವಿನ ಪುರುಷರ ಸಿಂಗಲ್ಸ್ ಫೈನಲ್ ಅನ್ನು ರದ್ದುಗೊಳಿಸಲಾಗಿದೆ.
ಇಬ್ಬರು ಫೈನಲಿಸ್ಟ್‌ಗಳಲ್ಲಿ ಒಬ್ಬರಿಗೆ ಕೋವಿಡ್ -19 ಪಾಸಿಟಿವ್ ಬಂದ ಕಾರಣ ಪಂದ್ಯ ರದ್ದುಗೊಳಿಸಲಾಗಿದೆ.
ಇನ್ನು ಮಿಕ್ಸಿಡ್ ಡಬಲ್ಸ್ ಟೈಟಲ್ ಅನ್ನು ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ಯಾಸ್ಟ್ರೋ ಜೋಡಿ ಗೆದ್ದಿದೆ.
ಫೈನಲ್‌ನಲ್ಲಿ ಈ ಜೋಡಿ..21-16, 21-12ರಲ್ಲಿ ಎದುರಾಳಿ ನಾಗೇಂದ್ರ-ಶ್ರೀವಿದ್ಯಾ ಜೋಡಿಯನ್ನು ಮಣಿಸಿದೆ.









