T 20 Match | 4 ಓವರ್ಸ್.. 82 ರನ್.. ಟಿ 20ಯಲ್ಲಿ ಕೆಟ್ಟ ದಾಖಲೆ
ಇಂಗ್ಲೆಂಡ್ ಫಸ್ಟ್ ಕ್ಲಾಸ್ ಕ್ರಿಕೆಟರ್ ಮಾಟ್ ಮೆಕರೈನ್ ಟಿ 20 ಕ್ರಿಕೆಟ್ ನಲ್ಲಿ ಅತ್ಯಂತ ಕೆಟ್ಟ ದಾಖಲೆಗಳನ್ನು ನಮೂದಿಸಿದ್ದಾರೆ.
ವಿಟಾಲಿಟಿ ಬ್ಲಾಸ್ಟ್ ಟಿ 20 ಲ್ಲಿ ಸೋಮರ್ ಸೆಟ್, ಡರ್ಬಿಶೈರ್ ನಡುವಿನ ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಮೆಕರೈನ್ 82 ರನ್ ಬಿಟ್ಟುಕೊಟ್ಟಿದ್ದಾರೆ.
ಇದರೊಂದಿಗೆ ಟಿ 20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಈ ದಾಖಲೆ ಪಾಕಿಸ್ತಾನ್ ಬೌಲರ್ ಸರ್ಮದ್ ಅನ್ವರ್ ಹೆಸರಿನಲ್ಲಿತ್ತು.
2011ರ ಸೂಪರ್ ಎಲೈಟ್ ಟಿ 20 ಕಪ್ ನಲ್ಲಿ ಅನ್ವರ್ ತಮ್ಮ ನಾಲ್ಕು ಓವರ್ ಗಳಲ್ಲಿ 81 ರನ್ ಗಳಿಸಿದ್ದರು.
ಇಲ್ಲಿಯವರೆಗೂ ಅದೇ ಕೆಟ್ಟ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮೆಕರೈನ್ ಖಾತೆಗೆ ಸೇರಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದ್ರೆ ಮೊದಲು ಬ್ಯಾಟಿಂಗ್ ಮಾಡಿದ ಸೊಮರ್ ಸೆಟ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತ್ತು.
266 ರನ್ ಗಳ ಗುರಿ ಬೆನ್ನಟ್ಟಿದ ಡರ್ಬಿಶೈರ್ ತಂಡಗಳಿಗೆ 74 ರನ್ ಗಳಿಗೆ ಆಲೌಟ್ ಆಯ್ತು.