t-20 wolrdcup 2021 – ಕ್ಯಾಚ್ ಕೈ ಚೆಲ್ಲಿ ಕನಸು ಭಗ್ನ ಮಾಡಿಕೊಂಡ ಪಾಕಿಸ್ತಾನ

1 min read

t-20 wolrdcup 2021 – ಕ್ಯಾಚ್ ಕೈ ಚೆಲ್ಲಿ ಕನಸು ಭಗ್ನ ಮಾಡಿಕೊಂಡ ಪಾಕಿಸ್ತಾನ
hasan ali pakistan t-20 wolrdcup 2021 saakshatvಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಅಬ್ಬರಿಸಿದ ರೀತಿಗೆ ಪಾಕಿಸ್ತಾನ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲೇ ಹೊರ ಬಿದ್ದಿದೆ. ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಪಾಕ್ ಬೌಲರ್ಗಳನ್ನು ಚಿಂದಿ ಉಡಾಯಿಸಿದರು. ಯುಎಇನಲ್ಲಿ ಮೊದಲ ಸೋಲು ಕಂಡ ಪಾಕಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಹೊರಬಿತ್ತು.
ದುಬೈ ಮೈದಾನದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಪಾಕಿಸ್ತಾನದ ಇನ್ನಿಂಗ್ಸ್ ಆರಂಭಿಸಿದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಎಂದಿನಂತೆ ಉತ್ತಮ ಆರಂಭ ತಂದುಕೊಟ್ಟರು. ವಿಕೆಟ್ಗಾಗಿ ಪರದಾಡಿದ ಕಾಂಗರೂಗಳಿಗೆ ಆ್ಯಡಂ ಜಂಪಾ 39 ರನ್ಗಳಿಸಿದ್ದ ಬಾಬರ್ ವಿಕೆಟ್ ಪಡೆಯುವದರೊಂದಿಗೆ ಬ್ರೇಕ್ ತಂದುಕೊಟ್ಟರು.
ರಿಜ್ವಾನ್ ಅಬ್ಬರಿಸುತ್ತಾ ಸಾಗಿದರು. ಫಖರ್ ಜಮಾನ್ ಬ್ಯಾಟ್ನಿಂದಲೂ ರನ್ ಬರ್ತಾ ಇತ್ತು. 67 ರನ್ಗಳಿಸಿದ್ದ ರಿಜ್ವಾನ್ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಭಡ್ತಿ ಪಡೆದು ಬಂದಿದ್ದ ಆಸೀಫ್ ಅಲಿ ಖಾತೆಯನ್ನೇ ತೆರೆಯಲಿಲ್ಲ. ಶೊಯೆಬಲ್ ಮಲಿಕ್ ಕೂಡ 1 ರನ್ಗಳಿಸಿ ಔಟಾದರು. ಜಮಾನ್ 32 ಎಸೆತಗಳಲ್ಲಿ ಅಜೇಯ 55 ರನ್ಗಳಿಸಿದರು. 20 ಓವರುಗಳಲ್ಲಿ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು 176 ರನ್ಗಳಿಸಿತು.
ಚೇಸಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮೊದಲ ಓವರ್ನಲ್ಲೇ ನಾಯಕ ಆ್ಯರೋನ್ ಫಿಂಚ್ ವಿಕೆಟ್ ಕಳೆದುಕೊಂಡಿತು. ಆದರೆ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅಬ್ಬರದ ಆಟ ಆಡಿದರು. ಈ ಹಂತದಲ್ಲಿ ದಾಳಿಗಿಳಿದ ಶದಾಬ್ ಖಾನ್ 28 ರನ್ಗಳಿಸಿದ ಮಾರ್ಷ್ ವಿಕೆಟ್ ಪಡೆದರು. 49 ರನ್ಗಳಿಸಿದ ಡೇವಿಡ್ ವಾರ್ನರ್ ಕೂಡ ಲೆಗ್ ಸ್ಪಿನ್ನರ್ ಮೋಡಿಗೆ ವಿಕೆಟ್ ಒಪ್ಪಿಸಿದರು. ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಶದಾಬ್ ಬೌಲಿಂಗ್ನಲ್ಲಿ ನಿರುತ್ತರರಾದರು. ಆಸ್ಟ್ರೇಲಿಯಾ 96 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತ್ತು.
ಈ ಹಂತದಲ್ಲಿ ಜೊತೆಯಾದ ಮಾರ್ಕಸ್ ಸ್ಟೋಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಪಾಕ್ ಬೌಲರ್ಗಳ ಲೆಕ್ಕಾಚಾರವನ್ನೇ ಬದಲಿಸಿದರು. ಬೌಂಡರಿ, ಸಿಕ್ಸರ್ಗಳ ಮೂಲಕ ಅಬ್ಬರಿಸಿದರು. ಸ್ಟೋಯ್ನಿಸ್ 31 ಎಸೆತಗಳಲ್ಲಿ 2 ಫೋರ್ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 40 ರನ್ಗಳಿಸಿದರೆ, ವೇಡ್ 17 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಫೋರ್ ನೆರವಿನಿಂದ ಅಜೇಯ 41 ರನ್ಗಳಿಸಿದರು. ಅಫ್ರಿದಿ ಎಸೆದ 19 ಓವರ್ನ ಕೊನೆಯ 3 ಎಸೆತಗಳನ್ನು ಸಿಕ್ಸರ್ಗೆ ಅಟ್ಟಿದ ವೇಡ್ ಪಾಕ್ಗೆ ಸೋಲಿನ ಶಾಕ್ ನೀಡಿದರು. ಆಸ್ಟ್ರೇಲಿಯಾ ಟಿ20 ವಿಶ್ವಕಪ್ನಲ್ಲಿ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಖುಷಿಯಲ್ಲಿ ತೇಲಾಡಿತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd